ದಾನಿಗಳ ಸಹಕಾರದೊಂದಿಗೆ ಗುರುಪೀಠಗಳು ಆರ್ಥಿಕವಾಗಿ ಬೆಳೆಯಲು ಸಾಧ್ಯ: ಪ್ರಣವಾನಂದಪುರಿಶ್ರೀ

| Published : Jul 17 2025, 12:33 AM IST

ದಾನಿಗಳ ಸಹಕಾರದೊಂದಿಗೆ ಗುರುಪೀಠಗಳು ಆರ್ಥಿಕವಾಗಿ ಬೆಳೆಯಲು ಸಾಧ್ಯ: ಪ್ರಣವಾನಂದಪುರಿಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಆದಿಪರಾಶಕ್ತಿ ದೇವಿಗೆ ಅಭಿಷೇಕ, ಭಜನೆ, ಗುರುವಂದನೆ ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿಸಿದರು.

ಹೊಸಕೋಟೆ: ಗ್ರಾಮಗಳಲ್ಲಿ ಪರಸ್ಪರ ಸಾಮರಸ್ಯ ಬೆಳೆಸುವಲ್ಲಿ ಮಠ- ಮಾನ್ಯಗಳು ಸಹಕಾರಿಯಾಗುತ್ತವೆ. ಎಲ್ಲ ಸಮುದಾಯಗಳ ಸಹಕಾರದೊಂದಿಗೆ ಗುರುಪೀಠಗಳು ಆರ್ಥಿಕವಾಗಿ ಸದೃಢವಾಗಿ ಬೆಳೆಯಲು ಸಾಧ್ಯ ಎಂದು ಶ್ರೀಆದಿಶಕ್ತಿ ಮಹಾಸಂಸ್ಥಾನ ಮಠದ ಪ್ರಣವಾನಂದಪುರಿ ಸ್ವಾಮೀಜಿ ಹೇಳಿದರು.

ನಂದಗುಡಿ ಹೋಬಳಿಯ ಶಿವನಾಪುರದ ಕ್ಷತ್ರಿಯರ ಸಮುದಾಯ ಭವನದ ಆವರಣದಲ್ಲಿ ದಾನಿಗಳ ಸಹಾಯಹಸ್ತದಿಂದ ಅಳವಡಿಸಲಾದ ಹೈಮಾಸ್ಟ್ ದೀಪವನ್ನು ಉದ್ಘಾಟಿಸಿ ಮಾತನಾಡಿದರು.

ಧಾರ್ಮಿಕ ಕೇಂದ್ರಗಳು ಶಾಂತಿ- ನೆಮ್ಮದಿ ನೀಡುವ ಕೇಂದ್ರಗಳಾಗಿದ್ದು, ಜನರಲ್ಲಿ ಸಮಾನತೆ, ಸಹಬಾಳ್ವೆಯ ತತ್ವ ಮೂಡಿಸುವಲ್ಲಿ ಗುರುಪೀಠಗಳ ಪಾತ್ರ ಹಿರಿದಾಗಿದೆ. ಶಿಕ್ಷಣದಿಂದಲೇ ಸಮುದಾಯ ಆರ್ಥಿಕವಾಗಿ ಸದೃಢವಾಗಲು ಸಾಧ್ಯ. ತಮ್ಮ ಜನಾಂಗದ ಮಕ್ಕಳನ್ನು ಶಿಕ್ಷಿತರನ್ನಾಗಿಸುವ ಜವಾಬ್ದಾರಿ ವಹಿಸಬೇಕು. ಈ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಸಿಗಲು ಸಂಘಟಿತರಾಗಿ ತಮ್ಮ ಹಕ್ಕನ್ನು ಹೋರಾಟದ ಮೂಲಕ ಪಡೆಯುವುದು ಅನಿವಾರ‍್ಯವಾಗಿದೆ. ಶಿಕ್ಷಣದಿಂದಲೇ ಸಮುದಾಯ ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದರು. ಶ್ರೀಆದಿಶಕ್ತಿ ಮಹಾಸಂಸ್ಥಾನ ಮಠದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿ. ಮುನಿಯಪ್ಪ ಮಾತನಾಡಿ, ವಹ್ನಿಕುಲ ಸಮುದಾಯ ಅತ್ಯಂತ ಹಿಂದುಳಿದ ಸಮಾಜವೆಂದು ಪರಿಗಣಿಸಲ್ಪಟ್ಟಿದೆ. ಸರ್ಕಾರ ಆರ್ಥಿಕ ನೆರವು ನೀಡಲು ಮುಂದಾಗಬೇಕು. ಈ ಗುರುಪೀಠವನ್ನು ಬೆಳೆಸುವ ಮೂಲಕ ಹಲವು ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ದಾನಿಗಳ ಸಹಾಯಹಸ್ತ ಅತ್ಯಗತ್ಯವಾಗಿದೆ ಎಂದರು.

ಶ್ರೀಆದಿಪರಾಶಕ್ತಿ ದೇವಿಗೆ ಅಭಿಷೇಕ, ಭಜನೆ, ಗುರುವಂದನೆ ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿಸಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ. ರಾಜಶೇಖರಗೌಡ, ದಾನಿಗಳಾದ ರಾಜೇಂದ್ರ, ತಿಗಳರ ಸಂಘದ ತಾಲೂಕು ಗೌರವಾಧ್ಯಕ್ಷ ಎಚ್.ಜೆ. ಶ್ರೀನಿವಾಸ್, ಸಂಚಾಲಕರಾದ ಎಚ್.ಆರ್. ಸೋಮನಾಥ್, ಎಚ್.ಕೆ. ಮೋಹನ್, ಜಂಗಮಕೋಟೆ ನಾಗರಾಜ್, ಶಿಡ್ಲಘಟ್ಟ ಮನೋಹರ್ ಹಾಗೂ ನೂರಾರು ವಹ್ನಿಕುಲ ಭಾಂದವರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

---------

ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಶಿವನಾಪುರದ ಕ್ಷತ್ರೀಯರ ಸಮುದಾಯ ಭವನದ ಆವರಣದಲ್ಲಿ ದಾನಿಗಳ ಸಹಾಯಹಸ್ತದಿಂದ ಅಳವಡಿಸಲಾದ ಹೈಮಾಸ್ಟ್ ದೀಪವನ್ನು ಶ್ರೀಆದಿಶಕ್ತಿ ಮಹಾಸಂಸ್ಥಾನ ಮಠದ ಪ್ರಣವಾನಂದಪುರಿ ಉದ್ಘಾಟಿಸಿದರು.