ಗುರುವು ಕೇವಲ ಜ್ಞಾನವನ್ನು ಬೋಧಿಸುವವರಲ್ಲ, ಜೀವನ ಮೌಲ್ಯಗಳನ್ನು ರೂಪಿಸುವ ಮಾರ್ಗದರ್ಶಕರಾಗಿದ್ದು, ಗುರು–ಶಿಷ್ಯ ಪರಂಪರೆಯೇ ಭಾರತೀಯ ಸಂಸ್ಕೃತಿಯ ಜೀವನಾಡಿಯಾಗಿದೆ. ಕಲೆ ಮತ್ತು ಸಂಸ್ಕೃತಿಯ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಸಂಸ್ಕಾರ ಭಾರತಿಯ ಮಹತ್ತರ ಪಾತ್ರವಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಸಂಸ್ಕಾರ ಭಾರತಿ ಕರ್ನಾಟಕದ ಜಿಲ್ಲಾ ಸಮಿತಿಯಿಂದ ಗುರುಪೂರ್ಣಿಮೆ ಅಂಗವಾಗಿ ನಾಟ್ಯಾಚಾರ್ಯ ಪ್ರೊ..ಕೆ. ರಾಮಮೂರ್ತಿರಾವ್ ಅವರ ನಿವಾಸದಲ್ಲಿ ಗುರುವಂದನಾ ಕಾರ್ಯಕ್ರಮ ಆಯೋಜಿಸಿತ್ತು.ಕಾರ್ಯಕ್ರಮವು ಶ್ರೀ ನಟರಾಜ ಪೂಜೆಯೊಂದಿಗೆ ಆರಂಭಗೊಂಡಿತು. ಬಳಿಕ ರಾಮಮೂರ್ತಿರಾವ್ ಅವರ ಶಿಷ್ಯರಿಂದ ಮನಮೋಹಕ ನೃತ್ಯ ಪ್ರಸ್ತುತಿ ನಡೆಯಿತು. ಭರತನಾಟ್ಯ ಕ್ಷೇತ್ರಕ್ಕೆ ಸಲ್ಲಿಸಿದ ಅವರ ಜೀವಮಾನದ ಅಪೂರ್ವ ಸೇವೆ, ಗುರು–ಶಿಷ್ಯ ಪರಂಪರೆಯ ಸಂರಕ್ಷಣೆ ಹಾಗೂ ಭಾರತೀಯ ಕಲೆ, ಸಂಸ್ಕೃತಿ ಮತ್ತು ಸಂಸ್ಕಾರಗಳ ಪ್ರಸಾರದಲ್ಲಿ ನೀಡಿದ ಅನನ್ಯ
ಕೊಡುಗೆಯನ್ನು ಗೌರವಿಸಿ ಗುರುವಂದನಾ ಸನ್ಮಾನ ಪತ್ರವನ್ನು ಸಮರ್ಪಿಸಿ ಸನ್ಮಾನಿಸಿತು.ಮಾತನಾಡಿದ ಸಂಸ್ಕಾರ ಭಾರತಿ ಕರ್ನಾಟಕ, ದಕ್ಷಿಣ ಪ್ರಾಂತದ ಕಾರ್ಯಾಧ್ಯಕ್ಷ ಡಾ. ಗುಬ್ಬಿಗೂಡು ರಮೇಶ್, ಮೈಸೂರು ಜಿಲ್ಲಾ ಅಧ್ಯಕ್ಷ ಕೆ. ಎಸ್. ಗುರುರಾಜ, ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ. ರಾಮಚಂದ್ರ, ನಾಟ್ಯಾಚಾರ್ಯ ಪ್ರೊ.ಕೆ. ರಾಮಮೂರ್ತಿರಾವ್ ಅವರ ಕಲಾಸೇವೆ, ಗುರುಭಕ್ತಿ ಹಾಗೂ ಭಾರತೀಯ ಸಂಸ್ಕೃತಿಯ ಉಳಿವಿಗೆ ನೀಡಿದ ಮಹತ್ವದ ಕೊಡುಗೆಯನ್ನು ಕೊಂಡಾಡಿದರು. ಅಲ್ಲದೆ, ಕಲೆ ಮತ್ತು ಸಂಸ್ಕೃತಿಯ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಸಂಸ್ಕಾರ ಭಾರತಿಯ ಮಹತ್ತರ ಪಾತ್ರವನ್ನು ಅವರು ವಿವರಿಸಿದರು.
ರಾಮಮೂರ್ತಿರಾವ್ ಮಾತನಾಡಿ, ಗುರುವು ಕೇವಲ ಜ್ಞಾನವನ್ನು ಬೋಧಿಸುವವರಲ್ಲ, ಜೀವನ ಮೌಲ್ಯಗಳನ್ನು ರೂಪಿಸುವ ಮಾರ್ಗದರ್ಶಕರಾಗಿದ್ದು, ಗುರು-ಶಿಷ್ಯ ಪರಂಪರೆಯೇ ಭಾರತೀಯ ಸಂಸ್ಕೃತಿಯ ಜೀವನಾಡಿಯಾಗಿದೆ ಎಂದು ತಿಳಿಸಿದರು.ಸಾ ಕಲಾ ಯಾ ವಿಮುಕ್ತಯೇ ಎಂಬ ಧ್ಯೇಯ ವಾಕ್ಯದೊಂದಿಗೆ ಸಂಸ್ಕಾರ ಭಾರತಿ ದೇಶಾದ್ಯಂತ ಭಾರತೀಯ ಕಲೆ, ಸಂಸ್ಕೃತಿ ಹಾಗೂ ಸಂಸ್ಕಾರಗಳ ಪುನರುಜ್ಜೀವನಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಲೆ ಮತ್ತು ಸಂಸ್ಕೃತಿಯ ಮೂಲಕ ರಾಷ್ಟ್ರ ನಿರ್ಮಾಣದ ಮಹತ್ತರ ಕಾರ್ಯವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ ಎಂದು ತಿಳಿಸಿದರು.
ಕಲಾಭಿಮಾನಿಗಳು, ರಾಮಮೂರ್ತಿರಾವ್ ಅವರ ಶಿಷ್ಯರು, ಸಂಸ್ಕಾರ ಭಾರತಿ ಪದಾಧಿಕಾರಿಗಳು ಇದ್ದರು.ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್‌ಗೆ ಅಭಿನಂದನೆ
ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೊಪಾಲ್ ಅವರನ್ನು ಸಮಾಜ ಸೇವಕ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಬಿ.ಆರ್.ನಟರಾಜ್ ಜೊಯಿಸ್, ಮಂಗಳಾ ಜೋಯಿಸ್ ಅಭಿನಂದಿಸಿದರು. ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಡಾ. ವೈ.ಡಿ.ರಾಜಣ್ಣ, ಚಂದ್ರಶೇಖರ್, ಪ್ರಧಾನ ಸಂಚಾಲಕ ಮೂಗೂರು ನಂಜುಂಡಸ್ವಾಮಿ, ಪತ್ರಕರ್ತ ಬಸವರಾಜ್, ಬಸವರಾಜೇಂದ್ರ ಸ್ವಾಮಿ ಇದ್ದರು.