ಸಾರಾಂಶ
ಫೋಟೋ - 27ಎಂವೈಎಸ್ 54- ಕೆ.ಆರ್. ನಗರದ ಎಸ್. ನಂಜಪ್ಪ ರಸ್ತೆಯ ನಂದನ್ ಪಂಕ್ಷನ್ ಹಾಲ್ ನಲ್ಲಿ ಹೆಬ್ಬಾಳು ಸರ್ಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕರು ಉದ್ಘಾಟಿಸಿದರು.
---ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಂಬಂದ ಮತು ಭಾಂದವ್ಯ ದೈವಿಕವಾಗಿರುವುದರಿಂದ ಕಲಿಕೆಯ ಅವಧಿಯಲ್ಲಿ ಗುರುಗಳ ಮಾರ್ಗದರ್ಶನ ಮತ್ತು ಸಲಹೆ ಪಡೆಯುವವರು ಬದುಕಿನಲ್ಲಿ ಯಶಸ್ಸು ಗಳಿಸುತ್ತಾರೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಎಂ.ಆರ್. ಪುಟ್ಟರಾಜು ಹೇಳಿದರು.ಪಟ್ಟಣದ ಎಸ್. ನಂಜಪ್ಪ ರಸ್ತೆಯ ನಂದನ್ ಫಂಕ್ಷನ್ ಹಾಲ್ ನಲ್ಲಿ ಹೆಬ್ಬಾಳು ಸರ್ಕಾರಿ ಪ್ರೌಢಶಾಲೆಯಲ್ಲಿ 2004-05ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪ್ರೌಢಾವಸ್ಥೆಗೆ ಬಂದ ನಂತರ ತಮ್ಮ ಜವಬ್ದಾರಿ ಅರಿತು ಓದಿನಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಈ ಹಿಂದೆ ಶಿಕ್ಷಕರು ವಿದ್ಯಾರ್ಥಿಗಳನ್ನು ದಂಡಿಸಿ ಪಾಠ ಪ್ರವಚನ ಮಾಡುತ್ತಿದ್ದರು. ಈಗ ಕಾಲ ಬದಲಾಗಿದ್ದು ಶೈಕ್ಷಣಿಕ ಗುಣಮಟ್ಟವೂ ಕಡಿಮೆಯಾಗುತ್ತಿರುವುದು ವಿಷಾದನೀಯ ಸಂಗತಿ. ಈ ವಿಚಾರವನ್ನು ಎಲ್ಲರೂ ಗಂಭೀರವಾಗಿ ಚಿಂತಿಸಬೇಕು ಎಂದು ಅವರು ಹೇಳಿದರು.ದಶಕಗಳ ಹಿಂದೆ ತಾವು ಓದಿ ಅಕ್ಷರ ಕಲಿತ ಶಾಲೆ ಮತ್ತು ಪಾಠ ಮಾಡಿದ ಶಿಕ್ಷಕರನ್ನು ನೆನೆದು ಹಳೆಯ ವಿದ್ಯಾರ್ಥಿಗಳು ಗುರುಗಳಿಗೆ ವಂದನೆ ಸಲ್ಲಿಸುತ್ತಿರುವುದು ಇತರರಿಗೆ ಮಾದರಿಯಾಗಿದ್ದು ಇದರ ಜತೆಗೆ ನಿಮಗೆ ಅಕ್ಷರ ಕಲಿಯಲು ನೆರವಾದ ಶಾಲೆಗಳಿಗೂ ಸಹಾಯ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಮುಖ್ಯ ಶಿಕ್ಷಕ ಎಂ.ಎಸ್. ದೇವರಾಜು, ನಿವೃತ್ತ ಮುಖ್ಯ ಶಿಕ್ಷಕ ಸಿ.ಜೆ. ಶ್ರೀನಿವಾಸ್ ಮಾತನಾಡಿದರು. ಹೆಬ್ಬಾಳು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳು ತಮ್ಮ ಬಾಲ್ಯದ ದಿನಗಳನ್ನು ನೆನೆದು ಅಂದಿನ ಮಧುರ ಕ್ಷಣಗಳನ್ನು ತಮ್ಮ ನೆಚ್ಚಿನ ಶಿಕ್ಷಕರು ಮತ್ತು ಸಹಪಾಠಿಗಳೊಂದಿಗೆ ಹಂಚಿಕೊಂಡರು.ಈ ವೇಳೆ ಹೆಬ್ಬಾಳು ಪ್ರೌಢಶಾಲೆಯಲ್ಲಿ 2004-05ರಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರು ಮತ್ತು ಸಿಬ್ಬಂದಿಗೆ ಆ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಲಾಯಿತು.
ನಿವೃತ್ತ ಉಪನ್ಯಾಸಕಿ ಜಿ.ಎಸ್. ಗಿರಿಜಾ, ಉಪನ್ಯಾಸಕ ಡಿ.ಎಸ್. ಸ್ವಾಮಿ. ಗಣಕಯಂತ್ರ ಶಿಕ್ಷಕ ಅಶೋಕ್, ಅರುಣಿ, ಗುಮಾಸ್ತೆ ಸರೋಜಮ್ಮ, 2004-05 ನೇ ಸಾಲಿನ ವಿದ್ಯಾರ್ಥಿಗಳಾದ ಗಣೇಶ್, ತಿಲಕ್, ನವೀನ್, ರೂಪಾ, ಮುಕುಂದ, ಆಶಾರಾಣಿ, ನಟರಾಜು, ಚೈತ್ರಾ, ಪಾಂಡು, ಪುನೀತ್, ಮನು, ಮಧು, ಲೋಕೇಶ್, ರಮೇಶ್, ಜ್ಯೋತಿ, ಶ್ರುತಿ, ಭಾಗ್ಯ, ಭಾಗ್ಯಲಕ್ಷ್ಮೀ, ಉದಯಕುಮಾರ್, ಎಸ್.ಆರ್. ನಾಗೇಂದ್ರ, ಬೇಬಿಶ್ರೀ ಮೊದಲಾದವರು ಇದ್ದರು.