ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲ: ಯಾವುದೇ ಶಾಲೆ ಇರಲಿ ಶಾಲೆಯನ್ನು ಹಾಗೂ ಕಲಿಸಿದ ಗುರುಗಳನ್ನು ಮರೆಯುವಂತಹ ಕಾಲವಿದು. ಈ ಮಧ್ಯೆ ಕನ್ನಡ ಮಾಧ್ಯಮ ಪ್ರೌಢ ಶಾಲೆಯಾದ ಪಟ್ಟಣದ ಎಸ್.ಆರ್.ಕಂಠಿ ಪ್ರೌಢಶಾಲೆಯಲ್ಲಿ ೨೦೦೨-೦೩ ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿನಿಯರು ೨೧ ವರ್ಷದ ನಂತರ ಮತ್ತೆ ಶಿಕ್ಷಕರ ನೆನಪು ಮಾಡಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಇಳಕಲ್ಲ: ಯಾವುದೇ ಶಾಲೆ ಇರಲಿ ಶಾಲೆಯನ್ನು ಹಾಗೂ ಕಲಿಸಿದ ಗುರುಗಳನ್ನು ಮರೆಯುವಂತಹ ಕಾಲವಿದು. ಈ ಮಧ್ಯೆ ಕನ್ನಡ ಮಾಧ್ಯಮ ಪ್ರೌಢ ಶಾಲೆಯಾದ ಪಟ್ಟಣದ ಎಸ್.ಆರ್.ಕಂಠಿ ಪ್ರೌಢಶಾಲೆಯಲ್ಲಿ ೨೦೦೨-೦೩ ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿನಿಯರು ೨೧ ವರ್ಷದ ನಂತರ ಮತ್ತೆ ಶಿಕ್ಷಕರ ನೆನಪು ಮಾಡಿಕೊಂಡಿದ್ದಾರೆ. ಈ ಶಾಲೆಗೆ ಬಂದು ನಮ್ಮನ್ನು ನೆನೆದು ಗೌರವಿಸಿರುವುದು ಶಿಕ್ಷಕರ ಭಾಗ್ಯವೇ ಸರಿ ಎಂದು ಮುಖ್ಯ ಶಿಕ್ಷಕ ಸಂಗಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ಇಳಕಲ್ಲನ ವಿಜಯ ಮಹಾಂತೇಶ್ವರ ವಿದ್ಯಾ ವರ್ಧಕ ಸಂಘಧ ಎಸ್.ಆರ್.ಕಂಠಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಸಂತಸ ನಿಜಕ್ಕೂ ಕಣ್ಣೀರು ತರಿಸುತ್ತಿದೆ. ಇಂದು ಗೌರವ ಸತ್ಕಾರ ಪಡೆದ ಶಿಕ್ಷಕರ ಪರವಾಗಿ ನಾನು ವಿದ್ಯಾರ್ಥಿನಿಯರಿಗೆ ಅಭಿನಂದನೆ ತಿಳಿಸುವೆ ಎಂದರು.ಶಾಲೆಯ ಅಧ್ಯಕ್ಷ ಪ್ರಶಾಂತ ಪಟ್ಟಣಶೆಟ್ಟಿ ಮಾತನಾಡಿದರು. ಉಪಾಧ್ಯಕ್ಷ ಅರುಣ ಬಿಜ್ಜಳ, ಶಿಕ್ಷಕರಾದ ಖೇಮರಾಜ ವಂದಕುದರಿ, ಚಂದ್ರಶೇಖರ ಕಿರಗಿ, ಮಹಿಪತಿ ಕುಲಕರ್ಣಿ, ವಿರಭದ್ರಪ್ಪ ಶೆಟ್ಟರ್, ಮಹಾಂತೇಶ ಹಾಲಶೆಟ್ಟಿ, ಶಿವಶಂಕರ ಸದ್ದಲಗಿ, ಗಿರಿಜಾದೇವಿ ಮೃದರಗಿ, ಶಿವುಬಾಯಿ ಹರ್ತಿ, ಸುಧಾಬಾಯಿ ಮಾಗಿ ಹಾಗು ಇತರರು ಉಪಸ್ಥಿತರಿದ್ದರು.
ಹಳೇಯ ವಿದ್ಯಾರ್ಥಿನಿಯರಾದ ನೇತ್ರಾವತಿ ಶಾಸಲ್ಲ, ಕವಿತಾ ಡಗೆ, ಗಾಯತ್ರಿ ಬಡಿಗೇರ, ರೇಣುಕಾ ಹುನಗುಂದ, ಪೂರ್ಣಿಮಾ ದೊತ್ರೆ, ರೇಶ್ಮಾ ಕಂದಗಲ್ಲ, ಅನುಪಮಾ ಪಾಡಮುಖಿ, ಸುವರ್ಣಮಂಗಳಾ ಹವಾಲ್ದಾರ, ರಕ್ಷಿತಾ ಚನ್ನಿ ಸೇರಿದಂತೆ 60 ಕ್ಕೆ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.