ಸೆ.7 ರಂದು ಬೆ.9ಕ್ಕೆ ಸರ್ವಜ್ಞ ಶಾಲೆಯ ಆವರಣದಲ್ಲಿನ ಜಸ್ಟಿಸ್ ಪಾಟೀಲ ಸಾಂಸ್ಕೃತಿಕ ಭವನದಲ್ಲಿ “ಗುರುವೇ ನಮಃ” - ಕಲ್ಯಾಣ ಕರ್ನಾಟಕದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಹಾಗೂ ಮೌಲ್ಯಾಧಾರಿತ ಶಿಕ್ಷಣ ಕುರಿತು ಪ್ರೌಢ ಶಾಲಾ ಶಿಕ್ಷಕರಿಗೆ ಪುನಃಶ್ಚೇತನ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎನ್. ಶರಣಪ್ಪ, ಸರ್ವಜ್ಞ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಪ್ರೊ.ಚನ್ನಾರೆಡ್ಡಿ ಪಾಟೀಲ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ನ್ಯಾಯಮೂರ್ತಿ ಶಿವರಾಜ ಪಾಟೀಲ ಪ್ರತಿಷ್ಠಾನ, ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪ.ಪೂ ವಿಜ್ಞಾನ ಕಾಲೇಜು (ಕಲಬುರಗಿ–ರಾಯಚೂರು) ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಸೆ.7 ರಂದು ಬೆ.9ಕ್ಕೆ ಸರ್ವಜ್ಞ ಶಾಲೆಯ ಆವರಣದಲ್ಲಿನ ಜಸ್ಟಿಸ್ ಪಾಟೀಲ ಸಾಂಸ್ಕೃತಿಕ ಭವನದಲ್ಲಿ “ಗುರುವೇ ನಮಃ” - ಕಲ್ಯಾಣ ಕರ್ನಾಟಕದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಹಾಗೂ ಮೌಲ್ಯಾಧಾರಿತ ಶಿಕ್ಷಣ ಕುರಿತು ಪ್ರೌಢ ಶಾಲಾ ಶಿಕ್ಷಕರಿಗೆ ಪುನಃಶ್ಚೇತನ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎನ್. ಶರಣಪ್ಪ, ಸರ್ವಜ್ಞ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಪ್ರೊ.ಚನ್ನಾರೆಡ್ಡಿ ಪಾಟೀಲ ತಿಳಿಸಿದ್ದಾರೆ.ನಾಡೋಜ ಶಿವರಾಜ ವಿ. ಪಾಟೀಲರು ಆನ್ಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾರ್ಗದರ್ಶಿ ನುಡಿಗಳನ್ನಾಡುವರು. ನ್ಯಾ. ಟಿ.ಎನ್. ಇನವಳ್ಳಿ ಉದ್ಘಾಟಿಸಲಿದ್ದು, ಪ್ರತಿಷ್ಠಾನದ ಅಧ್ಯಕ್ಷ ಎನ್. ಶರಣಪ್ಪ, ನಟ ರಮೇಶ್ ಅರವಿಂದ್ ಅವರು ಮೌಲಿಕ ಶಿಕ್ಷಣದಲ್ಲಿ ಶಿಕ್ಷಕರ ಪಾತ್ರ ಕುರಿತುಮಾತನಾಡುವರು.
ಎಸ್ಸೆಸೆಲ್ಸಿ ಫಲಿತಾಂಶ ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಕುರಿತು ಧಾರವಾಡ ಐ.ಐ.ಟಿ. ಪ್ರಾಧ್ಯಾಪಕ ಪ್ರೊ.ಎಸ್. ಎಂ. ಶಿವಪ್ರಸಾದ, ಹ್ಯೂಮನ್ ಮೈಂಡ್ಸೆಟ್ ಖ್ಯಾತ ತರಬೇತುದಾರ ಮಹೇಶ್ ಮಸಾಳ ಉಪನ್ಯಾಸ ನೀಡುವರು. ಯಾದಗಿರಿ ಡಿಡಿಪಿಐ ಸಿ.ಎಸ್. ಮುಧೋಳ್ ಹಾಗೂ ಕಲಬುರಗಿಯ ಶಂಕ್ರಮ್ಮ ಢವಳಗಿ ಭಾಗವಹಿಸಲಿದ್ದಾರೆ.ಕಲ್ಯಾಣ ಕರ್ನಾಟಕ ಭಾಗದ ಪ್ರೌಢಶಾಲಾ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಪ್ರಗತಿ ತರಲು ಶಿಕ್ಷಕರಿಗೆ ಆಧುನಿಕ ಬೋಧನಾ ಕೌಶಲ್ಯ ಮತ್ತು ನೈತಿಕ ಶಿಕ್ಷಣ ಮಹತ್ವ ಕುರಿತು ಪ್ರೇರಣೋಪನ್ಯಾಸ ನಡೆಯಲಿದೆ. ಶಿಕ್ಷಕರ ಕೌಶಲ್ಯ ಹೆಚ್ಚಿಸುವದರ ಮೂಲಕ ಅವರನ್ನು ಗೌರವಿಸುವುದು ಈ ಸಮಾವೇಶದ ಪ್ರಮುಖ ಧ್ಯೇಯವೆಂದು ಎಂದು ಪ್ರೊ. ಚನ್ನಾರೆಡ್ಡಿ ಪಾಟೀಲ ಹೇಳಿದ್ದಾರೆ.