ಸಾರಾಂಶ
ಪತಂಜಲಿ ಯೋಗ ಶಿಕ್ಷಣ ಸಮಿತಿಯ ವತಿಯಿಂದ 48 ದಿನಗಳ ಉಚಿತ ಯೋಗ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಗುರುವಾರನಕೆರೆ ಪಾಂಡುರಂಗ ಮಂದಿರದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಪತಂಜಲಿ ಯೋಗ ಶಿಕ್ಷಣ ಸಮಿತಿಯ ವತಿಯಿಂದ 48 ದಿನಗಳ ಉಚಿತ ಯೋಗ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಗುರುವಾರನಕೆರೆ ಪಾಂಡುರಂಗ ಮಂದಿರದಲ್ಲಿ ನಡೆಯಿತು.ಮಂಗಳೂರು ಪತಂಜಲಿ ಯೋಗ ಶಿಕ್ಷಣ ಸಮಿತಿ ಮಕ್ಕಳ ವಿಭಾಗದ ಪ್ರಮುಖ ಪ್ರಸಾದ್ ದೀಪ ಬೆಳಗಿಸಿ ಬೌದ್ಧಿಕ್ ನೀಡಿ ಯೋಗದ ಮಹತ್ವ, ಯೋಗ ನಡೆದು ಬಂದ ದಾರಿ, ಪ್ರಸ್ತುತ ದಿನಗಳಲ್ಲಿ ಮಾನಸಿಕ ಹಾಗು ದೈಹಿಕ ಆರೋಗ್ಯಕ್ಕೆ ಯೋಗ ಶಿಕ್ಷಣದ ಅನಿವಾರ್ಯತೆಯ ಕುರಿತು ಮಾಹಿತಿ ನೀಡಿದರು.ನಾಗರಿಕ ಸೇವಾ ಟ್ರಸ್ಟೀ ವಿದ್ಯಾ ನಾಯಕ್ ಮುಖ್ಯ ಅತಿಥಿಯಾಗಿ ಮಾತನಾಡಿ, ಸಂಸ್ಕಾರ, ಸಂಘಟನೆ, ಸೇವೆಯಂತಹ ಶಿಕ್ಷಣ ನೀಡುವುದರೊಂದಿಗೆ ಉತ್ತಮ ನಾಗರಿಕರನ್ನು ರೂಪಿಸುವ ಕೆಲಸವನ್ನು ಸಮಿತಿ ಮಾಡುತ್ತಿದೆ ಎಂದರು.
ನಮ್ಮ ಮನೆ ಯೋಗ ಶಿಕ್ಷಕ ಭುಜಂಗ ಅಧ್ಯಕ್ಷತೆ ವಹಿಸಿದ್ದರು.ಯೋಗ ಶಿಕ್ಷಣ ಸಮಿತಿಯ ಮಂಗಳೂರು ಪ್ರಾಂತ ಪ್ರಮುಖ ರವೀಶ, ಯೋಗ ಶಿಕ್ಷಣ ಸಮಿತಿಯ ಆನಂದ, ಮಾರ್ಗದರ್ಶಕರು ಯೋಗ ಶಿಕ್ಷಣ ಸಮಿತಿ ಉಪ್ಪಿನಂಗಡಿ ತಾಲೂಕು , ಪ್ರದೀಪ ಯೋಗ ಶಿಕ್ಷಣ ಸಮಿತಿ ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರು ಸೇರಿ 105 ಮಂದಿ ಉಪಸ್ಥಿತರಿದ್ದರು.
ನಮ್ಮ ಮನೆ ಶಾಖೆಯ ಶಿಕ್ಷಕ ಶಿವಣ್ಣ ಸ್ವಾಗತಿಸಿದರು. ಶಿಕ್ಷಕಿ ದಮಯಂತಿ ವಂದಿಸಿದರು. ಶಿಕ್ಷಕಿ ಭಾರತಿ ನಿರೂಪಿಸಿದರು. ನಮ್ಮ ಮನೆ ಯೋಗ ಬಂಧುಗಳಾದ ಪುರಂದರ, ಗಿರೀಶ , ಅಶೋಕ, ಪ್ರಿಯ ,ಆಶಾ ಯೋಗದ ಅನುಭವಗಳನ್ನು ಹಂಚಿಕೊಂಡರು. ನಮ್ಮ ಮನೆ ಗುರುವಾಯನಕೆರೆ ಶಾಖೆಯ ಯೋಗ ಶಿಕ್ಷಕ ಬಂಧುಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.