ಪಟ್ಟಣದ ಕೆಎಲ್ಎಸ್ ಸಂಸ್ಥೆಯ ವಿಡಿಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಹ್ಯಾಕಥಾನ್ ಸ್ಪರ್ಧೆಯು ಯಶಸ್ವಿಯಾಗಿ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಹಳಿಯಾಳ

ಪಟ್ಟಣದ ಕೆಎಲ್ಎಸ್ ಸಂಸ್ಥೆಯ ವಿಡಿಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಹ್ಯಾಕಥಾನ್ ಸ್ಪರ್ಧೆಯು ಯಶಸ್ವಿಯಾಗಿ ಸಂಪನ್ನಗೊಂಡಿತು.

ಸ್ಪರ್ಧೆಯಲ್ಲಿ ರಾಜ್ಯ ಹಾಗೂ ಹೊರರಾಜ್ಯದ 357 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸುಸ್ಥಿರ ಜೀವನ ವಿಷಯದ ಕುರಿತಾಗಿ ನೀಡಿದ ಸವಾಲಿಗೆ ಪರಿಹಾರ ಒದಗಿಸುವಲ್ಲಿ ಧಾರವಾಡ ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯದ ಸುಪ್ರೀತ, ಸುಚೇಂದ್ರ ಪ್ರಥಮ್, ಧ್ರುವಕುಮಾರ್, ಅಹಮದ್ ಪ್ರಥಮ, ಹಳಿಯಾಳದ ವಿಡಿಐಟಿ ಮಹಾವಿದ್ಯಾಲಯದ ಮನೋಜ್, ಅಭಿಷೇಕ್, ಹೀನ್, ನಿವೇಧಿತಾ, ಹರ್ಷಿಣಿ ದ್ವಿತೀಯ, ಹೀನಾ ಅತ್ತಾರ, ಸುರಭಿ, ರೀತು, ಸಂಗೀತಾ, ನವೀನ್ ಗೌಡ ತೃತೀಯ ಸ್ಥಾನ ಪಡೆದರು.

ಹ್ಯಾಟ್ ಸೆಕ್ಯೂರ್ ವಿಷಯದ ಕುರಿತಾಗಿ ನೀಡಿದ ಸವಾಲನ್ನು ಪರಿಹರಿಸಿದ ಎಸ್.ಐ.ಟಿ ಯಡ್ರಾವ್ ಇಚಲ್ ಕರಂಜಿಯ ರಿಷಿಕೇಶ್, ಓಂಕಾರ್, ಶಿವಂ, ಓಂಕಾರ್ ಕೆ. ಪ್ರಥಮ, ಹಳಿಯಾಳದ ವಿಡಿಐಟಿ ಮಹಾವಿದ್ಯಾಲಯದ ಭಕ್ತಿ, ಸೃಷ್ಟಿ, ಪೂಜಾ, ಸಾಕ್ಷಿ, ದ್ವಿತೀಯ ಸ್ಥಾನ, ಅನನ್ಯ, ಸುಪ್ರೀತ್, ಆದಿತ್ಯ, ಪ್ರಥಮ ತೃತೀಯ ಸ್ಥಾನ ಪಡೆದರು.

ಕೃತಕ ಬುದ್ಧಿಮತ್ತೆ ಅವಿಷ್ಕಾರ ಕುರಿತಾಗಿ ನೀಡಿದ ಸವಾಲನ್ನು ಪರಿಹರಿಸಿದ ಎ.ಜಿ.ಎಂ.ಆರ್ ತಾಂತ್ರಿಕ ಮಹಾವಿದ್ಯಾಲಯ ವರೂರಿನ ಪ್ರದೀಪ್, ರುಮ್ಮನ್, ಪರಶುರಾಮ್, ಸಾಕೀಬ್ ಪ್ರಥಮ, ದೀಪ್ ಎಸ್., ದೀಪ್ ಎನ್., ಅಂಜಲಿ, ಚೈತ್ರ ದ್ವಿತೀಯ, ವಿಡಿಐಟಿಯ ಅಭಯ್, ಆದಿತ್ಯ, ಅನಂತ, ಓಂಕಾರ್ ತೃತೀಯ ಸ್ಥಾನ ಪಡೆದರು.

ಈ ಕಾರ್ಯಕ್ರಮಕ್ಕೆ ಥಿಟಾ ಡೈನಾಮಿಕ್ಸ್‌ನ ಗಜೇಂದ್ರ ದೇಶಪಾಂಡೆ, ಐಸ್ಟಾಪ್ ಎಲ್.ಎಲ್.ಪಿ.ಯು ಹನುಮಂತ ಕುಲಕರ್ಣಿ, ವಿಪ್ರೋದ ಅನಿಲ ಹರಿಹರ್, ಇನ್ಫೋಸಿಸ್‌ನ ಸೌರಭ್ ಕುಲಕರ್ಣಿ, ಅರ್ಕಿಟೆಕ್ಟ್‌ ಭರತ್ ಐ. ನಿರ್ಣಾಯಕರಾಗಿದ್ದರು.

ಸ್ಪರ್ಧೆಯ ವಿಜೇತರಿಗೆ ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ನಗದು ಬಹುಮಾನ ನೀಡಿ ಗೌರವಿಸಿದರು. ಕಂಪ್ಯೂಟರ್ ಸೈನ್ಸ್ ಹಾಗೂ ಕಂಪ್ಯೂಟರ್ ಸೈನ್ಸ್ (ಎಐಎಂಎಲ್) ಜಂಟಿ ಸಹಯೋಗದಲ್ಲಿ ಆಯೋಜಿಸಿದ ಸ್ಪರ್ಧೆಯನ್ನು ಡಾ. ವೆಂಕಟೇಶ್ ಶಂಕರ್, ಡಾ. ಪೂರ್ಣಿಮಾ ರಾಯ್ಕರ್ ಕಾರ್ಯಕ್ರಮ ಆಯೋಜಿಸಿದ್ದರು.