ಆರ್‌ವಿ ಮಹಾವಿದ್ಯಾಲಯದಿಂದ ಹ್ಯಾಕಥಾನ್‌

| Published : Feb 07 2024, 01:45 AM IST

ಸಾರಾಂಶ

ಆರ್‌.ವಿ.ತಾಂತ್ರಿಕ ಮಹಾವಿದ್ಯಾಲಯದ ಐಇಇಇ ಕಂಪ್ಟೂಟರ್‌ ಸೊಸೈಟಿ ವತಿಯಿಂದ ರಾಷ್ಟ್ರಮಟ್ಟದ ಹ್ಯಾಕ್‌ 4 ಸಾಕ್‌ 2.0 ಹ್ಯಾಕಥಾನ್‌ ಯಶಸ್ವಿಯಾಗಿ ನೆರವೇರಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆರ್‌.ವಿ.ತಾಂತ್ರಿಕ ಮಹಾವಿದ್ಯಾಲಯದ ಐಇಇಇ ಕಂಪ್ಟೂಟರ್‌ ಸೊಸೈಟಿ ವತಿಯಿಂದ ‘ತಂತ್ರಜ್ಞಾನ ಮಾನವೀಯತೆಯನ್ನು ಸಂಧಿಸಿದಾಗ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುತ್ತದೆ’ ಧ್ಯೇಯ ವಾಕ್ಯದಡಿ ನಡೆದ ರಾಷ್ಟ್ರಮಟ್ಟದ ಹ್ಯಾಕ್‌ 4 ಸಾಕ್‌ 2.0 ಹ್ಯಾಕಥಾನ್‌ ಯಶಸ್ವಿಯಾಗಿ ನೆರವೇರಿತು.

ಇನ್‌ಸ್ಟಿಟ್ಯೂಟ್‌ ಆಫ್‌ ಎಲೆಕ್ಟ್ರಿಕಲ್‌ ಆ್ಯಂಡ್‌ ಎಲೆಕ್ಟ್ರಾನಿಕ್‌ ಎಂಜಿನಿಯರಿಂಗ್‌ (ಐಇಇಇ) ಆರ್‌ವಿಸಿಇ ಕಂಪ್ಯೂಟರ್‌ ಸೊಸೈಟಿಯ ಅಧ್ಯಕ್ಷ ಲಿಖಿತ್‌ ಅವರು ಹ್ಯಾಕಥಾನ್‌ ಉದ್ಘಾಟಿಸಿ, ತಂತ್ರಜ್ಞಾನವು ಮಾನವನ ಜೀವನಶೈಲಿಯನ್ನು ಸುಧಾರಿಸುತ್ತದೆ. ಈ ಮೂಲಕ ತಾಂತ್ರಿಕತೆಯಲ್ಲಿ ನಾವೀನ್ಯತೆ ಸಾಧಿಸುವ ಗುರಿಯೊಂದಿಗೆ ಹ್ಯಾಕ್‌4ಸಾಕ್‌ 2.0 ಕಾರ್ಯಕ್ರಮ ಆಯೋಜಿಸಲಾಗಿದೆ. . ಇದರಿಂದ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ ಎಂದರು.

ಸ್ಟೂಡೆಂಟ್ಸ್‌ ಅಫೇರ್ಸ್‌ ಡೀನ್‌ ಡಾ। ಬಿ.ವಿ.ಉಮಾ ಈ ಬಾರಿ ಹ್ಯಾಕ್‌ 4 ಸಾಕ್‌ 2.0 ಹ್ಯಾಕಥಾನ್‌ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದ್ದು ಮೊದಲ ಹಂತದಲ್ಲಿ 250ಕ್ಕೂ ಹೆಚ್ಚು ತಂಡಗಳು ಪಾಲ್ಗೊಳ್ಳಲಿವೆ. ಆ ನಂತರ 2ನೇ ಹಂತಕ್ಕೆ ಕೇವಲ 43 ತಂಡಗಳು ಆಯ್ಕೆಯಾಗಲಿವೆ ಎಂದರು.

ಐಇಇಇ ಬೆಂಗಳೂರು ವಿಭಾಗದ ಉಪಾಧ್ಯಕ್ಷ ಡಾ। ಪ್ರಶಾಂತ್‌ ಮಿಶ್ರಾ ಮಾತನಾಡಿದರು. ಐಇಇಇ ಆರ್‌ವಿಸಿಇ ಕಂಪ್ಯೂಟರ್ ಸೊಸೈಟಿಯ ಮಾಜಿ ಅಧ್ಯಕ್ಷ ಪ್ರಜ್ವಲ್ ಪವಾರ್ ವಂದಿಸಿದರು. ಶಾಖೆಯ ಸಲಹೆಗಾರ್ತಿ ಡಾ। ಎನ್‌.ಶೈಲಶ್ರೀ ಸ್ವಾಗತಿಸಿದರು.