ಸಾರಾಂಶ
ಮನುಷ್ಯ ಕುಳಿತು ತಿನ್ನುವುದಕ್ಕಿಂತ ದುಡಿದು ತಿನ್ನುವುದೇ ಲೇಸು. ಈ ನಿಟ್ಟಿನಲ್ಲಿ ಕಾಯಕದ ಮೂಲಕ ಸಮಾಜದ ಸೇವೆ ಮಾಡುವುದು ಬಹಳ ಮುಖ್ಯ. ಇಂತಹ ಅದ್ಭುತ ಪರಿಕಲ್ಪನೆ ನೀಡಿದ ಅಪ್ಪಣ್ಣರ ವಿಚಾರ ನಮಗೆಲ್ಲ ಸ್ಫೂರ್ತಿ ತಂದಿವೆ.
ಕನಕಗಿರಿ:
ವಚನಕಾರ ಹಡಪದ ಅಪ್ಪಣ್ಣನವರು ಕಾಯಕ ಹಾಗೂ ದಾಸೋಹದ ಪರಿಕಲ್ಪನೆ ನೀಡಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಸುಳೇಕಲ್ ರಾಜರಾಜೇಶ್ವರಿ ಬ್ರಹನ್ಮಠದ ಪದ್ಮಾಕ್ಷರಯ್ಯಶ್ರೀ ಹೇಳಿದರು.ಇಲ್ಲಿನ ಎಪಿಎಂಸಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಸಮಾಜ ಕ್ಷೌರಿಕ ತಾಲೂಕು ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮನುಷ್ಯ ಕುಳಿತು ತಿನ್ನುವುದಕ್ಕಿಂತ ದುಡಿದು ತಿನ್ನುವುದೇ ಲೇಸು. ಈ ನಿಟ್ಟಿನಲ್ಲಿ ಕಾಯಕದ ಮೂಲಕ ಸಮಾಜದ ಸೇವೆ ಮಾಡುವುದು ಬಹಳ ಮುಖ್ಯ. ಇಂತಹ ಅದ್ಭುತ ಪರಿಕಲ್ಪನೆ ನೀಡಿದ ಅಪ್ಪಣ್ಣರ ವಿಚಾರ ನಮಗೆಲ್ಲ ಸ್ಫೂರ್ತಿ ತಂದಿವೆ. ವಚನ ಸಾಹಿತ್ಯಕ್ಕೆ ಅಪ್ಪಣ್ಣರ ಕೊಡುಗೆ ಅಪಾರವಾಗಿದ್ದು, ಇವರ ಹಾದಿಯಲ್ಲಿ ನಾವೆಲ್ಲ ನಡೆದು ನಮ್ಮವರಿಗಾಗಿ ಸೇವೆ ಮಾಡಬೇಕು ಎಂದರು.ಮಾಜಿ ಶಾಸಕ ಬಸವರಾಜ ದಢೇಸುಗೂರು ಮಾತನಾಡಿ, ಹಡಪದ ಅಪ್ಪಣ್ಣನವರ ಆದರ್ಶಗಳಡಿ ಜೀವನ ಸಾಗಿಸುತ್ತಿದ್ದಾರೆ. ಈ ಸಮುದಾಯಕ್ಕೆ ಪಪಂ ವ್ಯಾಪ್ತಿಯ ಸಿಎ ನಿವೇಶನ ನೀಡಲು ಈಗಾಗಲೇ ಮನವಿ ಸಲ್ಲಿಸಿದ್ದು, ಅದರಂತೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ಸಮಾಜದ ಬೇಡಿಕೆ ಈಡೇರಿಸಬೇಕು. ಸರ್ಕಾರದ ನಿಯಮನುಸಾರ ನಿವೇಶನಕ್ಕೆ ಭರಿಸಬೇಕಾದ ಮೊತ್ತವನ್ನು ನೀಡುವುದಾಗಿ ತಿಳಿಸಿದರು.
ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ, ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಮಹಾಂತೇಶ ಸಜ್ಜನ, ಪರುಷೋತ್ತಮರೆಡ್ಡಿ, ಶರಣಪ್ಪ ಭತ್ತದ, ರವಿ ಭಜಂತ್ರಿ, ರವಿ ಪಾಟೀಲ್, ಸಮಾಜದ ಜಿಲ್ಲಾಧ್ಯಕ್ಷ ಹನುಮಂತಪ್ಪ ಸರಿಗಮ, ತಾಲೂಕು ಅಧ್ಯಕ್ಷ ದೊಡ್ಡಬಸವ ಸೇರಿ ಇದ್ದರು.