ನ.೯-೧೦ರಂದು ಹಳಗನ್ನಡ ಕಾವ್ಯ ಕಮ್ಮಟ ಕಾರ್ಯಕ್ರಮ

| Published : Nov 07 2024, 11:55 PM IST

ಸಾರಾಂಶ

ನ.೯ರಂದು ಬೆಳಗ್ಗೆ ೧೦.೩೦ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವನ್ನು ಕನಕಪುರ ದೇಗುಲ ಮಠದ ಶ್ರೀ ಚನ್ನಬಸವಸ್ವಾಮೀಜಿ ಉದ್ಘಾಟಿಸುವರು. ಗವಿಮಠದ ಶ್ರೀ ಷಡಕ್ಷರಿ ಸ್ವಾಮೀಜಿ, ಧನಗೂರು ಮಠದ ಶ್ರೀಮುಮ್ಮಡಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ವಹಿಸುವರು.

ಕನ್ನಡಪ್ರಭ ವಾರ್ತೆ ಮಂಡ್ಯ

ಷಡಕ್ಷರ ಪೀಠ, ಧನಗೂರು, ಮಳವಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಂಸ ಥಿಯೇಟರ್, ಬೆಂಗಳೂರು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಇವರ ವತಿಯಿಂದ ನ.೯ ಹಾಗೂ ೧೦ರಂದು ಮಳವಳ್ಳಿ ತಾಲೂಕು ಧನಗೂರು ಷಡಕ್ಷರ ಗವಿಮಠದಲ್ಲಿ ಹಳಗನ್ನಡ ಕಾವ್ಯ ಕಮ್ಮಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪೀಠದ ಅಧ್ಯಕ್ಷ ಡಾ.ಕುಡ್ಲೂರು ವೆಂಕಟಪ್ಪ ತಿಳಿಸಿದರು.

ನ.೯ರಂದು ಬೆಳಗ್ಗೆ ೧೦.೩೦ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವನ್ನು ಕನಕಪುರ ದೇಗುಲ ಮಠದ ಚನ್ನಬಸವಸ್ವಾಮೀಜಿ ಉದ್ಘಾಟಿಸುವರು. ಗವಿಮಠದ ಶ್ರೀ ಷಡಕ್ಷರಿ ಸ್ವಾಮೀಜಿ, ಧನಗೂರು ಮಠದ ಮುಮ್ಮಡಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಸಮಾರಂಭ ಉದ್ಘಾಟಿಸುವರು. ಡಾ.ಕುಡ್ಲೂರು ವೆಂಕಟಪ್ಪ ಅಧ್ಯಕ್ಷತೆ ವಹಿಸುವರು. ನಿವೃತ್ತ ಮುಖ್ಯ ಶಿಕ್ಷಕ ಡಿ.ರಾಮು, ಮುಖ್ಯ ಶಿಕ್ಷಕಿ ಜಿ.ಬಿ.ಶೈಲಜ, ಅಂತಾರಾಷ್ಟ್ರೀಯ ಜಾನಪದ ಕಲಾವಿದ ಸಿ.ಎಂ.ನರಸಿಂಹಮೂರ್ತಿ, ಸಂಸ ಥಿಯೇಟರ್‌ನ ಗೌರವಾಧ್ಯಕ್ಷ ಜಯರಾಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ನುಡಿದರು.

ಅಂದು ಮಧ್ಯಾಹ್ನ ೨.೧೫ಕ್ಕೆ ಭಾರತಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಮ.ರಾಮಕೃಷ್ಣ ಅಧ್ಯಕ್ಷತೆಯಲ್ಲಿ ಷಡಕ್ಷರ ಕವಿಯ ಕವಿ-ಕಾವ್ಯ-ಪರಿಚರ ಕುರಿತು ಗೋಷ್ಠಿ ನಡೆಯಲಿದ್ದು, ಷಡಕ್ಷರ ಕವಿಯ ಪರಿಚಯವನ್ನು ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಹಾಯಕರ ನಿರ್ದೇಶಕ ಎನ್.ಆರ್.ವೇಣುಗೋಪಾಲ್, ರಾಜಶೇಖರ ವಿಲಾಸಂ ಅನ್ನು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಡಿ.ದೊಡ್ಡಲಿಂಗೇಗೌಡ, ಶಬರ ಶಂಕರ ವಿಳಾಸಂ ಅನ್ನು ವಿಶ್ರಾಂತ ಪ್ರಾಂಶುಪಾಲ ಚಂದ್ರಶೇಖರ ನಾದೂರು, ವೃಷಭೇಂದ್ರ ವಿಜಯಂ ಅನ್ನು ಕನ್ನಡ ಸಹಾಯಕ ಪ್ರಾಧ್ಯಾಪಕಿ ಮಮತಾ ನಾಗ್ ಮಂಡನೆ ಮಾಡುವರು ಎಂದು ವಿವರಿಸಿದರು.

ಸಂಜೆ.೬ಕ್ಕೆ ಧನಗೂರು ಷಡಕ್ಷರ ಪೀಠದ ಸದಸ್ಯ ಕೆ.ಪುಟ್ಟಸ್ವಾಮಿ ಅವರು ಶಿಬಿರಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಡುವರು. ಸಂಜೆ ೭ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ೮ಕ್ಕೆ ದೃಶ್ಯ ಮೇಲುಕೋಟೆ ಸುಗ್ಗಿ ರಂಗ ಅಭಿನಯಿಸುವ ಕರ್ಣಭಾರ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

ನ. ೧೦ರ ಬೆಳಗ್ಗೆ ೬ಕ್ಕೆ ಯೋಗ ಗುರು ಎಂ.ಮಲ್ಲಿಕಾರ್ಜುನಸ್ವಾಮಿ ಅವರಿಂದ ಯೋಗ ಉಪನ್ಯಾಸ ನಡೆಯಲಿದ್ದು, ಬೆಳಿಗ್ಗೆ ೭ಕ್ಕೆ ಷಡಕ್ಷರ ಕವಿಯ ಹುಟ್ಟೂರು, ಧನಗೂರಿನ ಜನ್ಮಸ್ಥಳ ಹಾಗೂ ಷಡಕ್ಷರ ಮಂಟಪ ವೀಕ್ಷಣೆ ಕಾರ್ಯಕ್ರಮ ನಡೆಯಲಿದೆ ಎಂದರು.

ಬೆಳಗ್ಗೆ ೯.೪೫ ಕ್ಕೆ ಭಾರತಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್. ಮಹದೇವಸ್ವಾಮಿ ಅದ್ಯಕ್ಷತೆಯಲ್ಲಿ ಶಿಬಿರಾರ್ಥಿಗಳಿಂದ ರಾಜಶೇಖರ ವಿಲಾಸಂ ಕೃತಿಯ ಆಯ್ದ ಪದ್ಯಗಳ, ಓದು, ಅರ್ಥ ವಿವರಣೆ, ಕಥಾ ನಿರೂಪಣೆ ಮೂರನೇ ಗೋಷ್ಠಿ ನಡೆಯಲಿದೆ. ಬೆಳಗ್ಗೆ ೧೧.೩೦ಕ್ಕೆ ನಂಜನಗೂಡಿನ ಸ.ಪ್ರದ.ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಜಯಶಂಕರ್ ಹಲಗೂರು ಅಧ್ಯಕ್ಷತೆಯಲ್ಲಿ ಶಿಬಿರಾರ್ಥಿಗಳಿಂದ ಶಬರ ಶಂಕರ ವಿಳಾಸಂ ಕೃತಿಯ ಆಯ್ದ ಪದ್ಯಗಳ, ಓದು, ಅರ್ಥ ವಿವರಣೆ, ಕಥಾ ನಿರೂಪಣೆ ವಿಷಯದ ಕುರಿತು ನಾಲ್ಕನೇ ಗೋಷ್ಠಿ ನಡೆಯಲಿದೆ ಎಂದು ವಿವರಿಸಿದರು.

ಮಧ್ಯಾಹ್ನ ೨-೪೫ಕ್ಕೆ ಡಿ.ಹಲಸಹಳ್ಳಿಯ ಷಡಕ್ಷರಿ ಗವಿಮಠದ ಷಡಕ್ಷರಿ ಸ್ವಾಮೀಜಿ, ಧನಗೂರು ಷಡಕ್ಷರ ಮಠದ ಶ್ರೀ ಮುಮ್ಮಡಿ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ದಿವ್ಯಸಾನ್ನಿಧ್ಯದಲ್ಲಿ ಹಾಗೂ ಧನಗೂರು ಷಡಕ್ಷರ ಪೀಠದ ಅಧ್ಯಕ್ಷ ಡಾ.ಕೊಣ್ಣೂರು ವೆಂಕಟಪ್ಪ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಬಿ.ಎಂ.ಶ್ರೀ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಶಾಂತರಾಜು ಸಮಾರೋಪ ನುಡಿಗಳನ್ನಾಡುವರು ಎಂದರು.

ಕಾರ್ಯಕ್ರಮದಲ್ಲಿ ಧನಗೂರು ಷಡಕ್ಷರ ಪೀಠದ ಉಪಾಧ್ಯಕ್ಷ ಕೆ. ಕೆಂಡಗಯ್ಯ ಪ್ರಮಾಣ ಪತ್ರ ವಿತರಣೆ ಮಾಡಲಿದ್ದು, ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಡಾ.ಹುಸ್ಕೂರು ಕೃಷ್ಣೇಗೌಡ, ಡಿ.ಹಲಸಹಳ್ಳಿ ಗ್ರಾಪಂ ಅಧ್ಯಕ್ಷೆ ಕೆ.ಸುಜಾತ ಪತ್ರಕರ್ತ ಪರಶಿವ ಧನಗೂರು, ಧನಗೂರು ಷಡಕ್ಷರ ಪೀಠದ ಸದಸ್ಯ ಚಿಕ್ಕಯ್ಯ ಭಾಗವಹಿಸುವರು ಎಂದರು.

ಸಂಜೆ ೪.೪೫ಕ್ಕೆ ಕವಿಗೋಷ್ಠಿ ನಡೆಯಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್.ಚೇತನ್‌ಕುಮಾರ್ ಉದ್ಘಾಟಿಸುವರು, ಕನ್ನಡ ಪ್ರಾಧ್ಯಾಪಕ ಡಾ.ಎನ್.ಎಸ್.ಶಂಕರೇಗೌಡ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಸಿದ್ದನಾಗ್ ಸಂಸ್ಥೆಗಳ ಲಿಂಗೇಶ್ ಹೆಚ್.ಎಸ್, ಕಸಬಾ ಹೋಬಳಿ ಕಸಾಪ ಅಧ್ಯಕ್ಷ ಕೃಷ್ಣ ಅಗಸನಪುರ ಸೇರಿದಂತೆ ಹಲವು ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸುವರು ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ, ಮುಖಂಡರಾದ ಉಮೇಶ್, ರಾಮಕೃಷ್ಣ, ಚೇತನ್‌ಕುಮಾರ್, ಸುರೇಶ್ ಗೋಷ್ಠಿಯಲ್ಲಿದ್ದರು.