ಹಳೇಬೀಡು ದೇವಸ್ಥಾನ ರಸ್ತೆ ಅಗಲೀಕರಣ ಗೊಂದಲಕ್ಕೆ ತೆರೆ
KannadaprabhaNewsNetwork | Published : Nov 01 2023, 01:02 AM IST / Updated: Nov 01 2023, 01:03 AM IST
ಹಳೇಬೀಡು ದೇವಸ್ಥಾನ ರಸ್ತೆ ಅಗಲೀಕರಣ ಗೊಂದಲಕ್ಕೆ ತೆರೆ
ಸಾರಾಂಶ
ಶಾಸಕರಾದ ಹುಲ್ಲಳ್ಳಿ ಸುರೇಶ್ ಸ್ಥಳೀಯರೊಂದಿಗೆ ಸಭೆ ನಡೆಸಿದ ಬಳಿಕ ಹಳೇಬೀಡು ದೇವಸ್ಥಾನ ರಸ್ತೆ ಅಗಲೀಕರಣ ವಿಚಾರ ಸಂಬಂಧ ಇದ್ದ ಗೊಂದಲಕ್ಕೆ ತೆರೆ ಬಿದ್ದಿದೆ.
ಕನ್ನಡಪ್ರಭ ವಾರ್ತೆ ಹಳೇಬೀಡು ಸ್ಥಳೀಯ ವರ್ತಕರ ವಿರೋಧದಿಂದಾಗಿ ಸ್ಥಗಿತವಾಗಿದ್ದ ಇಲ್ಲಿನ ಹೊಯ್ಸಳೇಶ್ವರ ದೇವಸ್ಥಾನದ ಮುಖ್ಯ ರಸ್ತೆಯ ಅಗಲೀಕರಣ ಕಾಮಗಾರಿ ವಿಷಯವಾಗಿ ಮಂಗಳವಾರ ಶಾಸಕರಾದ ಹುಲ್ಲಳ್ಳಿ ಸುರೇಶ್ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸ್ಥಳೀಯರೊಂದಿಗೆ ಸಭೆ ನಡೆಸಿ ಹೆದ್ದಾರಿ ನಿಯಮಗಳ ಪ್ರಕಾರ ರಸ್ತೆ ಅಗಲೀಕರಣದಿಂದ ತೊಂದರೆಯಾಗುತ್ತದೆ. ಹಾಗಾಗಿ 9.8 ಮೀಟರ್ ಅಗಲದ ರಸ್ತೆ ಮಾತ್ರ ಸಾಕು ಎಂದು ತೀರ್ಮಾನಿಸಲಾಯಿತು. ದೇವಾಲಯ ರಸ್ತೆಯಲ್ಲಿ ವಾಹನಗಳ ದಟ್ಟಣೆಯಿಂದ ಸಂಚಾರಕ್ಕೆ ತೊಂದರೆ ಆಗುತ್ತಿತ್ತು. ಹಾಗಾಗಿ ಹಿಂದಿನ ಶಾಸಕರಾದ ಕೆ. ಎಸ್. ಲಿಂಗೇಶ್ ಸುಮಾರು ೯ ಕೋಟಿ ರು. ಅನುದಾನದಲ್ಲಿ ಹಳೇಬೀಡಿನಿಂದ ಸಿದ್ದಾಪುರ ಮಾರ್ಗವಾಗಿ ಹಗರೆವರೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ಅಗಲೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಲಾಗಿತ್ತು. 2023ರ ಚುನಾವಣೆಯಲ್ಲಿ ಬಿಜೆಪಿ ಶಾಸಕರಾದ ಸುರೇಶ್ ಆಯ್ಕೆಯಾದರು. ನೂತನ ಶಾಸಕರು ಕೂಡ ರಸ್ತೆ ಅಭಿವೃದ್ಧಿಗೊಳಿಸಬೇಕು ಎಂಬ ನಿಟ್ಟಿನಲ್ಲಿ ಐದು ಕೋಟಿ ಅನುದಾನದಲ್ಲಿ ಹಳೇಬೀಡಿನ ಹೊಯ್ಸಳ ವೃತ್ತದಿಂದ ಬಸವೇಶ್ವರ ವೃತ್ತ (ಕರಿಯಮ್ಮಮಹಾದ್ವಾರ)ವರಿಗೆ ಎರಡು ಕಡೆ ಹೆಬ್ಬಾಳು ಮಾದರಿಯಲ್ಲಿ ಲೈಟಿಂಗ್ ವ್ಯವಸ್ಥೆ ೧೨.೫ ಮೀಟರ್ ಮಧ್ಯೆ ರಸ್ತೆಯಿಂದ ಅಗಲೀಕರಣ ಮಾಡಲು ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಕೆಲಸ ಪ್ರಾರಂಭವಾದಾಗ ಸ್ಥಳೀಯ ವ್ಯಾಪಾರಿಗಳು ನಮಗೆ ಯಾವ ಆದೇಶ ಇಲ್ಲದೆ ಕೆಲಸ ಪ್ರಾರಂಭ ಮಾಡಿದ್ದೀರಿ ಎಂದು ತಗಾದೆ ತೆಗೆದರು. ಹಾಗಾಗಿ ಕೆಲಸವು ಸ್ಥಗಿತಗೊಂಡಿತ್ತು. ಪ್ರವಾಸಿ ಮಂದಿರದಲ್ಲಿ ವ್ಯಾಪಾರಸ್ಥರನ್ನು ಕರೆಸಿ ರಸ್ತೆ ಅಗಲೀಕರಣ ಸಂಬಂಧ ಮುಕ್ತವಾಗಿ ಅನಿಸಿಕೆಗಳನ್ನು ಹೆಚ್ಚಿಕೊಳ್ಳಬೇಕೆಂದು ಶಾಸಕರಾದ ಎಚ್.ಕೆ.ಸುರೇಶ್ ಹೇಳಿದರು. ರಾಜ್ಯ ಹೆದ್ದಾರಿ ಆದೇಶ ೪೦ ಮೀಟರ್ ವ್ಯಾಪ್ತಿಗೆ ಬರತಕ್ಕದ್ದು. ಆದರೆ ಜನಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ೧೨.೫ ಮೀಟರ್‌ನ್ನು ಅಳವಡಿಸಲಾಗಿತ್ತು. ಆದರೆ ಇಲ್ಲಿಯ ಜನರು ನಮಗೆ ತೊಂದರೆಯಾಗುತ್ತದೆ ಜೀವನ ಮಾಡಲು ನಮಗೆ ಜಾಗ ಇಲ್ಲ ಎಂಬ ಮನವಿಯನ್ನು ಪರಿಗಣಿಸಿ ಕೊನೆಯಲ್ಲಿ ಶಾಸಕ ಸುರೇಶ್ ೯.೮ ಮೀ ಆದೇಶ ನೀಡಿ ನಿಮ್ಮ ಅನುಕೂಲವೇ ಮುಖ್ಯ ಎನ್ನುವುದಾದರೆ ೯.೮ ಮೀಟರ್‌ಗೆ ಫಿಕ್ಸ್ ಆಯ್ತು. ಇದಕ್ಕೆಲ್ಲ ಸ್ಥಳೀಯರು ಸಹಕಾರ ಒಪ್ಪಿಗೆ ಕೊಟ್ಟರು. ಮಾಜಿ ಶಾಸಕ ಲಿಂಗೇಶ್ ಅವರು ಸಹ ಸ್ಥಳಿಯ ಜನತೆಗೆ ಮನವಿ ಮಾಡಿದರು. ಹಳೇಬೀಡು ರಸ್ತೆ ವಾಹನ ದಟ್ಟಣೆಯಾಗಿದೆ. ಮುಂದೆ ಪ್ರವಾಸಿಗಳಿಗೆ ತೊಂದರೆಯಾಗುತ್ತದೆ. ಅಗಲೀಕರಣ ಮಾಡಿದರೆ ನಿಮಗೆಲ್ಲ ಅನುಕೂಲವಾಗುತ್ತದೆ ಎಂದು ಮನವಿ ಮಾಡಿಕೊಂಡರು. ಜನತೆ ನಮಗೆ ಈ ೯.೮ಮೀ ರಸ್ತೆ ಸಾಕು ಈ ರಸ್ತೆಗೆ ಒಳ್ಳೆಯ ಡಾಂಬರೀಕರಣ ಮಾಡಿ ರಸ್ತೆಯನ್ನು ಅಭಿವೃದ್ಧಿಪಡಿಸಿ ಹಾಗೂ ಚರಂಡಿಯಲ್ಲಿ ನೀರು ಹರಿಯುವಂತೆ ಮಾಡಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಮುಖ್ಯ ಎಂಜಿನಿಯರ್ ನಟೇಶ್, ಗ್ರಾ.ಪಂ. ಅಧ್ಯಕ್ಷ ನಿತ್ಯಾನಂದ ಪಿ.ಡಿ.ಒ.ವಿರುಪಾಕ್ಷ. ಸೋಮಣ್ಣ. ಪರಮೇಶ್,ಇಲಾಖೆಯ ಅಧಿಕಾರಿಗಳು ಹಾಜರಿದ್ದರು.