ಹಾಲೆರಿ ಕೆರೆ ಹೂಳು ತೆಗೆದು ಅಭಿವೃದ್ಧಿ: ಶಾಸಕ ಮಂಜುನಾಥ್‌

| Published : Nov 16 2025, 01:45 AM IST

ಹಾಲೆರಿ ಕೆರೆ ಹೂಳು ತೆಗೆದು ಅಭಿವೃದ್ಧಿ: ಶಾಸಕ ಮಂಜುನಾಥ್‌
Share this Article
  • FB
  • TW
  • Linkdin
  • Email

ಸಾರಾಂಶ

ಹನೂರು: ಹಾಲೆರಿ ಕೆರೆ ಹೂಳು ತೆಗೆದು ಅಭಿವೃದ್ಧಿಪಡಿಸುವುದರಿಂದ ಈ ಭಾಗದ ರೈತರಿಗೆ ಹಾಗೂ ಜನಜಾನುವಾರುಗಳಿಗೆ ನೀರಾವರಿ ಅನುಕೂಲವಾಗಲಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.

ಹನೂರು: ಹಾಲೆರಿ ಕೆರೆ ಹೂಳು ತೆಗೆದು ಅಭಿವೃದ್ಧಿಪಡಿಸುವುದರಿಂದ ಈ ಭಾಗದ ರೈತರಿಗೆ ಹಾಗೂ ಜನಜಾನುವಾರುಗಳಿಗೆ ನೀರಾವರಿ ಅನುಕೂಲವಾಗಲಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.

ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಲಯ ವಿಭಾಗದ ರಾಮಪುರ ವಲಯಕ್ಕೆ ಸೇರಿರುವ ಅರಣ್ಯ ಪ್ರದೇಶದ ಮಾರ್ಟಳ್ಳಿ ಹಾಲೆರಿ ಕೆರೆಗೆ ಅರಣ್ಯ ಇಲಾಖೆಯ ಅನುದಾನದಲ್ಲಿ 30 ಲಕ್ಷ ವೆಚ್ಚದ ಕೆರೆಯಲ್ಲಿರುವ ಹೂಳು ತೆಗೆಯಲು ಜೆಸಿಬಿ ಮೂಲಕ ಚಾಲನೆ ನೀಡಿ ನಂತರ ಅವರು ಮಾತನಾಡಿದರು.

ದಶಕಗಳ ಬೇಡಿಕೆ ರೈತರ ಅನುಕೂಲಕ್ಕಾಗಿ ಈ ಭಾಗದ ಮಾರ್ಟಳ್ಳಿ ತಾಂಡಾಮೇಡು, ಕೋಟೆ ಪೊದೆ, ಮೇಟುತ್ತೇರು, ಸುಳ್ವಾಡಿ, ಸಂದನ ಪಾಳ್ಯ ಹಾಗೂ ಇನ್ನಿತರ ಈ ಪ್ರದೇಶಗಳಲ್ಲಿ ಅರಣ್ಯ ಪ್ರದೇಶ ಸೇರಿದಂತೆ ಜನ ಜಾನುವಾರುಗಳಿಗೆ ರೈತರಿಗೆ ಹಾಲೆರಿ ಕೆರೆ, ಹೂಳುತೆಗೆಯುವುದರಿಂದ ಮಳೆಗಾಲದಲ್ಲಿ ನೀರು ತುಂಬಿ ಈ ಭಾಗದ ರೈತರ ಜೀವನಾಡಿಯಾದ ವ್ಯವಸಾಯಕ್ಕೆ ಅನುಕೂಲದಾಯಕವಾಗುತ್ತದೆ.

ಕೆರೆಯ ಹೂಳು ತೆಗೆದು ರೈತರ ಬದುಕನ್ನು ಹಸನುಗೊಳಿಸಲು ಕೆರೆಯ ಹೂಳು ತೆಗೆಯಲು ಕ್ರಮವಹಿಸಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಈ ಭಾಗದ ಜನತೆಗೆ ಅನುಕೂಲದಾಯಕವಾಗುತ್ತದೆ ಎಂದು ತಿಳಿಸಿದರು.

ದಶಕಗಳ ಬೇಡಿಕೆ ನೀರಾವರಿ ಅನುಕೂಲಕ್ಕೆ ಅಸ್ತು:

ತಾಲೂಕಿನಲ್ಲಿ ಬಹುತೇಕ ಮಳೆಯಾಶ್ರಿತ ಪ್ರದೇಶ ಆಗಿರುವುದರಿಂದ ರೈತರಿಗೆ ನೀರಾವರಿ ಕಲ್ಪಿಸಲು ಮಳೆಗಾಲದಲ್ಲಿ ಜೀವ ಜಲವನ್ನು ಶೇಖರಣೆ ಮಾಡಲು ಕೆರೆಕಟ್ಟೆಗಳ ಅಭಿವೃದ್ಧಿ ಮಾಡುವುದರ ಮೂಲಕ ಜಲ ಸಂಗ್ರಹಕ್ಕೆ ಮುಂದಾಗಿದ್ದೇವೆ ರೈತರು ತಾಲೂಕಿನ ವಿವಿಧ ಭಾಗಗಳಲ್ಲಿ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಡಿಸಿಎಫ್ ಭಾಸ್ಕರ್, ಎಸಿಎಫ್ ವಿರಾಜ್ ಶೇಖರ್ ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತ ಮುಖಂಡರು ಗ್ರಾಮಸ್ಥರು ವಿವಿಧ ಇಲಾಖೆಯ ಅಧಿಕಾರಿಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

15ಸಿಎಚ್ಎನ್‌17

ಹನೂರು ಹಾಲೆರಿ ಕೆರೆ ಅಭಿವೃದ್ಧಿ ಹೊಳುತಗಿಸಲು ಶಾಸಕ ಎಂ.ಆರ್. ಮಂಜುನಾಥ್ ಚಾಲನೆ ನೀಡಿದರು.