ಸಾರಾಂಶ
ಕೊಟ್ಟೂರು: ಅನುದಾನ ಕೊರತೆಯಿಂದ ಪಟ್ಟಣದಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಂಪೌಂಡ್ ನ್ನು ಹ್ಯಾಬಿಟೆಡ್ ಸಂಸ್ಥೆ ಬೇಕಾಬಿಟ್ಟಿಯಾಗಿ ನಿರ್ಮಿಸಿ ಅರ್ಧಂಬರ್ಧ ಕಾಮಗಾರಿ ಕೈಗೊಂಡಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಖಾಸಗಿ ಕಾಲೇಜುಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಇಲ್ಲಿನ ಗೊರ್ಲಿ ಶರಣಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಲವು ಬಗೆಯ ತೊಂದರೆಗಳ ಮಧ್ಯೆಯೇ ವಿಧ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ ಗಮನ ಸೆಳೆಯುತ್ತಿದ್ದಾರೆ. ಇಂತಹ ಕಾಲೇಜಿಗೆ ಶಾಸಕರು ಕಟ್ಟಡಗಳಿಗೆ ಮತ್ತು ಕಾಲೇಜಿಗೆ ಸೂಕ್ತ ಬಗೆಯ ರಕ್ಷಣೆ ಅವಶ್ಯ ಎಂದು ತಿಳಿದು ಕಳೆದ ಸಾಲಿನಲ್ಲಿ ಕೆಕೆಆರ್ ಡಿಬಿಯಿಂದ ಅನುದಾನ ಬಿಡುಗಡೆಗೊಳಿಸಿ ಕಂಪೌಂಡ್ ನಿರ್ಮಾಣ ಕಾರ್ಯಕ್ಕೆ ಅನುವು ಮಾಡಿಕೊಟ್ಟಿದ್ದರು.
ನಿರ್ಮಾಣ ಕಾರ್ಯದ ಹೊಣೆಗಾರಿಕೆ ಪಡೆದುಕೊಂಡ ಹ್ಯಾಬಿಟೆಡ್ ಕಂಪನಿ ಕಾಲೇಜಿನ ಕಂಪೌಂಡ್ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದೆ. ತಮಗೆ ತೋಚಿದಂತೆ ಕಾಮಗಾರಿ ಕೈಗೊಂಡು ಇನ್ನು ಕೆಲವೇ ಮೀಟರ್ ಪ್ರಮಾಣದ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ.ಕಂಪೌಂಡ್ ಜತೆ ಗೇಟ್ ನಿರ್ಮಾಣ: ಕಾಲೇಜಿಗೆ ಕಂಪೌಂಡ್ ಜತೆ ಗೇಟ್ ನಿರ್ಮಾಣ ಕಾರ್ಯ ಕೈಗೊಳ್ಳಬೇಕಿದೆ. ಅನುದಾನ ಕೊರತೆ ನಿವಾರಿಸಲು ಖಾಸಗಿ ವ್ಯಾಪಾರಸ್ಥರನ್ನು ಸಂಪರ್ಕಿಸಲಾಗಿದೆ. ಅವರು ಗೇಟ್ ನಿರ್ಮಾಣ ಕಾರ್ಯ ಕೈಗೊಳ್ಳಲು ಸಹಕರಿಸುವುದಾಗಿ ತಿಳಿಸಿದ್ದಾರೆ ಎನ್ನುತ್ತಾರೆ ಕೊಟ್ಟೂರು ಸರ್ಕಾರಿ ಪಿಯು ಕಾಲೇಜಿನ ಡಾ.ಜಿ.ಸೋಮಶೇಖರ
ಅನುದಾನಕ್ಕೆ ಅನುಗುಣವಾಗಿ ಕಂಪೌಂಡ್ ನಿರ್ಮಾಣ ಕಾರ್ಯವನ್ನು ಈಗಾಗಲೇ ಬಹುತೇಕ ಮಾಡಿ ಮುಗಿಸಿದ್ದೇವೆ. ಕಾಲು ಪ್ರಮಾಣದ ಕಾಮಗಾರಿ ಮಾತ್ರ ಬಾಕಿ ಇದೆ. ಅನುದಾನ ಬಂದ ತಕ್ಷಣ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎನ್ನುತ್ತಾರೆ ಹ್ಯಾಬಿಟೆಡ್ ಕಂಪನಿ ಎಂಜಿನಿಯರ್ ರಾಜೇಶ್.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))