ಸಾರಾಂಶ
ಮೂಲತಃ ಅಥ್ಲೆಟಿಕ್ ಕ್ರೀಡಾಪಟುವಾದ ನಾನು ಆಸ್ಟ್ರೇಲಿಯಾದಲ್ಲಿ ನಡೆದ ಐರನ್ ಮ್ಯಾನ್ ಟ್ರಯಥ್ಲಾನ್ನಲ್ಲಿ ಪಾಲ್ಗೊಂಡಿದ್ದೆ. ಬಳಿಕ ಕೊರೋನಾ ಕಾರಣಕ್ಕೆ ಈ ಮಾದರಿಯ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.
ಕನ್ನಡಪ್ರಭ ವಾರ್ತೆ ಮೈಸೂರು
ಶ್ರದ್ಧೆ, ಶಿಸ್ತಿನಿಂದ ಮಾಡಿದ ಪ್ರಯತ್ನಗಳು ಫಲಿಸುತ್ತವೆ ಎಂದು ಮೌಂಟ್ ಎವರೆಸ್ಟ್ ಶಿಖರ ಏರಿದ ಡಾ. ಉಷಾ ಹೆಗ್ಡೆ ತಿಳಿಸಿದರು.ನಗರದ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ, ಜೆಎಸ್ಎಸ್ ದಂತ ವೈದ್ಯಕೀಯ ಕಾಲೇಜಿನ ಸಹಯೋಗದಲ್ಲಿ ಜೆಎಸ್ಎಸ್ ಔಷಧ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅವರು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮೂಲತಃ ಅಥ್ಲೆಟಿಕ್ ಕ್ರೀಡಾಪಟುವಾದ ನಾನು ಆಸ್ಟ್ರೇಲಿಯಾದಲ್ಲಿ ನಡೆದ ಐರನ್ ಮ್ಯಾನ್ ಟ್ರಯಥ್ಲಾನ್ನಲ್ಲಿ ಪಾಲ್ಗೊಂಡಿದ್ದೆ. ಬಳಿಕ ಕೊರೋನಾ ಕಾರಣಕ್ಕೆ ಈ ಮಾದರಿಯ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಈಗ ವಿಶ್ವದ ಅತಿ ಎತ್ತರದ ಪ್ರದೇಶವಾದ ಮೌಂಟ್ಎವರೆಸ್ಟ್ ಏರುವ ಕನಸು ಹುಟ್ಟಿತು. ಸದೃಢ ದೇಹ, ಆರೋಗ್ಯ ಹೊಂದಿರುವ ಸಾಮಾನ್ಯ ಮನುಷ್ಯನೂ ತರಬೇತಿ ಪಡೆದು ಈ ಸಾಧನೆ ಮಾಡಬಹುದು ಎಂಬುದು ಅರಿವಾಗಿ, ಮೂರು ವರ್ಷಗಳ ಹಿಂದೆ ಈ ಕನಸನ್ನು ಸಾಕಾರಗೊಳಿಸಲು ಆರಂಭಿಸಿದೆ. ಅಗತ್ಯ ತರಬೇತಿ ಪಡೆದೆ, ಕೆಲಸದ ಜತೆ ಅಭ್ಯಾಸವೂ ಮುಂದುವರೆಯಿತು.ಶ್ರದ್ಧೆ, ಶಿಸ್ತಿನಿಂದ ಮಾಡಿದ ಪ್ರಯತ್ನ ಫಲಿಸಿತು. ಅಂತಿಮವಾಗಿ ಗುರಿ ಮುಟ್ಟಿದ್ದಾಗಿ ಅವರು ಹೇಳಿದರು.
ಜೆಎಸ್ಎಸ್ ಎಎಚ್ಇಆರ್ಕುಲಪತಿ ಡಾ. ಸುರಿಂದರ್ಸಿಂಗ್, ಕುಲಸಚಿವ ಡಾ.ಬಿ. ಮಂಜುನಾಥ್, ಜೆಎಸ್ಎಸ್ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ಪ್ರಾಂಶುಪಾಲೆ ಡಾ. ದಾಕ್ಷಾಯಿಣಿ, ಉಪ ಪ್ರಾಂಶುಪಾಲೆ ಡಾ. ಜಯಶಂಕರ್ ಮೊದಲಾದವರು ಇದ್ದರು.