ಹಾನಗಲ್ ಶ್ರೀಗಳ ಸಂಸ್ಕಾರಯುತ ಚಿಂತನೆ ಇಂದಿನ ಸಮಾಜಕ್ಕೆ ಅಗತ್ಯ: ಮಹಾಂತಶ್ರೀ

| Published : Sep 20 2024, 01:38 AM IST

ಹಾನಗಲ್ ಶ್ರೀಗಳ ಸಂಸ್ಕಾರಯುತ ಚಿಂತನೆ ಇಂದಿನ ಸಮಾಜಕ್ಕೆ ಅಗತ್ಯ: ಮಹಾಂತಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಸೊರಬ ಪಟ್ಟಣದ ಮುರುಘಾ ಮಠದಲ್ಲಿ ಅನಂತನ ಹುಣ್ಣಿಮೆ ಪ್ರಯುಕ್ತ ೨೨೫ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಹಮ್ಮಿಕೊಳ್ಳಗಿತ್ತು.

ಕನ್ನಡಪ್ರಭ ವಾರ್ತೆ ಸೊರಬ

ಹಾನಗಲ್ ಕುಮಾರ ಸ್ವಾಮಿಗಳು ಸಮಾಜಸೇವೆ, ದಾಸೋಹ, ಅಕ್ಷರ ದಾಸೋಹ, ದಾನ ಧರ್ಮವನ್ನು ಮಾಡಿ ಸಂಸ್ಕಾರದಿಂದ ಕೂಡಿದ ಬದುಕಿನ ಆದರ್ಶವನ್ನು ಸದ್ಭಕ್ತರಿಗೆ ನೀಡಿದ್ದಾರೆ. ಅವರ ಸಂಘಟನೆ ಮತ್ತು ಸಂಸ್ಕಾರಯುತ ಚಿಂತನೆ ಸಮಾಜಕ್ಕೆ ಅಗತ್ಯವಿದೆ ಎಂದು ಜಡೆ ಸಂಸ್ಥಾನ ಮಠದ ಹಾಗೂ ಸೊರಬ ಮುರುಘಾ ಮಠದ ಡಾ.ಮ.ನಿ.ಪ್ರ.ಮಹಾಂತ ಸ್ವಾಮೀಜಿ ಹೇಳಿದರು.

ಬುಧವಾರ ಪಟ್ಟಣದ ಮುರುಘಾ ಮಠದಲ್ಲಿ ಅನಂತನ ಹುಣ್ಣಿಮೆ ಪ್ರಯುಕ್ತ ಹಮ್ಮಿಕೊಂಡಿದ್ದ ೨೨೫ನೇ ಮಾಸಿಕ ಶಿವಾನುಭವ ಹಾಗೂ ವೈದ್ಯ ವೃತ್ತಿಯಲ್ಲಿ ೫೦ ವರ್ಷ ಪೂರೈಸಿದ ಖ್ಯಾತ ವೈದ್ಯ ಡಾ.ಎಂ.ಕೆ.ಭಟ್‌ರವರಿಗೆ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಆಯ್ಕೆಯಾದ ಜಿಲ್ಲಾ ನಿರ್ದೇಶಕರುಗಳಿಗೆ ಗುರು ಕಾರುಣ್ಯ ನೀಡುವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮನುಷ್ಯನ ಬದುಕಿನಲ್ಲಿ ಕಾಯಕ ಶ್ರೇಷ್ಠತೆ ಮುಖ್ಯವಾಗಿದ್ದು, ಮಾಡುವ ಕಾರ್ಯವು ಯಾವಾಗಲೂ ಇಷ್ಟದಿಂದ ಕೂಡಿರಬೇಕೆ ವಿನಃ ಸಂಕಷ್ಟಗಳ ವೃತ್ತದಿಂದ ಇರಬಾರದು ಇಷ್ಟದಿಂದ ಮಾಡುವ ಕಾಯಕದಲ್ಲಿ ಭಗವಂತನನ್ನು ಕಾಣಲು ಸಾಧ್ಯ ಎಂದರು.

ವೈದ್ಯ ಡಾ.ಎಂ.ಕೆ.ಭಟ್ ಗುರು ಕಾರುಣ್ಯ ಸ್ವೀಕರಿಸಿ ಮಾತನಾಡಿ, ಧಾರ್ಮಿಕ ನೆಲೆಗಟ್ಟಿನಲ್ಲಿ ಮಹಾನ್ ಚೈತನ್ಯ ಸ್ವರೂಪಿಯಾದ ಡಾ.ಮಹಾಂತ ಸ್ವಾಮಿಗಳ ಸಮಾಜಮುಖಿ ಚಿಂತನೆ ಕಾರ್ಯಗಳು ಯಾವಾಗಲೂ ಸ್ಮರಣೀಯ ಎಂದರು.

ಕಾರ್ಯಕ್ರಮದಲ್ಲಿ ಶಿವಾನುಭವ ಕಾರ್ಯಕ್ರಮದಲ್ಲಿ ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಗುರು ಕುಮಾರ್ ಪಾಟೀಲ್, ಹಾಪ್‌ಕಾಮ್ಸ್ ಅಧ್ಯಕ್ಷ ಕೆ.ವಿ.ಗೌಡ, ಡಿ.ಶಿವಯೋಗಿ, ರಾಜು ಪಾಟೀಲ್, ಅಕ್ಕನ ಬಳಗದ ರೇಣುಕಮ್ಮ ಗೌಳಿ, ಗುರುಬಸಪ್ಪಗೌಡ, ರೇಖಾ ಜಗದೀಶ್, ಸವಿತಾ, ಸುಮತಿ, ಜಯಮಾಲ ಸೇರಿದಂತೆ ಅಕ್ಕನ ಬಳಗದ ಸದಸ್ಯರು ಹಾಜರಿದ್ದರು.