ಹಾನಗಲ್ಲ ಕುಮಾರ ಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾಸಭಾದ ಸಂಸ್ಥಾಪಕರಾಗಿ, ಶಿವಯೋಗ ಮಂದಿರದ ಮೂಲಕ ವೀರಶೈವ ಪರಂಪರೆಯ ಚಿಂತನೆಗಳಿಗೆ ಮರು ಜೀವ ನೀಡಿದರು ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು.
ರಾಣಿಬೆನ್ನೂರು: ಹಾನಗಲ್ಲ ಕುಮಾರ ಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾಸಭಾದ ಸಂಸ್ಥಾಪಕರಾಗಿ, ಶಿವಯೋಗ ಮಂದಿರದ ಮೂಲಕ ವೀರಶೈವ ಪರಂಪರೆಯ ಚಿಂತನೆಗಳಿಗೆ ಮರು ಜೀವ ನೀಡಿದರು ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು. ನಗರದ ಚನ್ನೇಶ್ವರ ಮಠದಲ್ಲಿ ಆಯೋಜಿಸಿದ್ದ ಜ್ಞಾನವಾಹಿನಿ ಮಾಸಿಕ ಧರ್ಮಸಭೆ ಹಾಗೂ ಅಖಿಲಭಾರತ ವೀರಶೈವ ಮಹಾಸಭಾ ಸಂಸ್ಥಾಪಕ ಹಾನಗಲ್ಲ ಕುಮಾರ ಶಿವಯೋಗಿಗಳ 159ನೇ ಜಯಂತಿ ಉತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಹಿರಿಯ ನ್ಯಾಯವಾದಿ ಎಸ್. ಎಸ್. ರಾಮಲಿಂಗಣ್ಣನವರ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ವಿಶೇಷ ಆಹ್ವಾನಿತ ಸದಸ್ಯ ಶಿವಯೋಗಿ ಅಂಗಡಿ, ಸಿದ್ದಣ್ಣ ಚಿಕ್ಕಬಿದರಿ ಅವರುಗಳಿಗೆ ಗುರು ರಕ್ಷೆ ನೀಡಿ ಸನ್ಮಾನಿಸಲಾಯಿತು ಕಾರಣಿಕ ಪುರುಷ ಹಾನಗಲ್ಲ ಕುಮಾರ ಶಿವಯೋಗಿಗಳು ಕುರಿತು ಕಸ್ತೂರಮ್ಮ ಪಾಟೀಲ ಉಪನ್ಯಾಸ ನೀಡಿದರುಸ್ಥಳೀಯ ಕಲಾವಿದರುಗಳಾದ ನೀಲಮ್ಮ ಗಡೆದ, ಯುವರಾಜ ಹಿರೇಮಠ, ನಿಂಗರಾಜ ಕರಿಗಾರ ಭಕ್ತಿ ಸುದೆಯನ್ನು ಹರಿಸಿದರು.ಅಮೃತಗೌಡ ಹಿರೇಮಠ, ಚಂದ್ರಣ್ಣ ರಾಮಾಳದ ಸುನಂದಮ್ಮ ತಿಳುವಳ್ಳಿ, ವಿಜಯಾ, ಬಸವಾನಂದ ಎಸ್. ಬಿ.ಶೆಟ್ಟರ, ರಾಜೇಂದ್ರಕುಮಾರ ತಿಳವಳ್ಳಿ, ಕವಿತಾ ಸೋಮಶೇಖರಯ್ಯ, ಕಸ್ತೂರಮ್ಮ, ಶೇಖರಗೌಡ ಪಾಟೀಲ, ವಿ.ವಿ. ಹರಪನಹಳ್ಳಿ, ಜಗದೀಶ ಮಳಿಮಠ, ಬಸವರಾಜಪ್ಪ ಕುರವತ್ತಿ, ಸೋಮನಾಥ ಹಿರೇಮಠ, ಕೊಟ್ರೇಶಪ್ಪ ಎಮ್ಮಿ, ಬಿದ್ದಾಡೆಪ್ಪ ಚಕ್ರಸಾಲಿ, ಮುತ್ತಣ್ಣ ಪಾಟೀಲ, ಎಮ್.ಕೆ. ಹಾಲಸಿದ್ದಯ್ಯಾ ಶಾಸ್ತ್ರಿಗಳು, ಗೌರೀಶ ನೆಗಳೂರಮಠ, ಶಕುಂತಲಮ್ಮ, ಭಾಗ್ಯಮ್ಮ ಹಾಗೂ ಶ್ರೀ ದಾನೇಶ್ವರಿ ಜಾಗೃತಿ ಅಕ್ಕನ ಬಳಗ ಹಾಗೂ ಕದಳಿ ವೇದಿಕೆಯ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.