ಸಾರಾಂಶ
ಶಿವಯೋಗ ಮಂದಿರದಲ್ಲಿ ಹಾನಗಲ್ ಕುಮಾರ ಶಿವಯೋಗಿಗಳು ಸಮಾಜ ಸುಧಾರಣೆಗಾಗಿ ಉತ್ತಮ ವಟುಗಳನ್ನು ನಿರ್ಮಾಣಗೊಳಿಸಲು ಶ್ರಮಿಸಿದ ಫಲವಾಗಿ ಸಮಾಜಕ್ಕೆ ಅತ್ಯಂತ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಗಜೇಂದ್ರಗಡ: ಶಿವಯೋಗ ಮಂದಿರದಲ್ಲಿ ಹಾನಗಲ್ ಕುಮಾರ ಶಿವಯೋಗಿಗಳು ಸಮಾಜ ಸುಧಾರಣೆಗಾಗಿ ಉತ್ತಮ ವಟುಗಳನ್ನು ನಿರ್ಮಾಣಗೊಳಿಸಲು ಶ್ರಮಿಸಿದ ಫಲವಾಗಿ ಸಮಾಜಕ್ಕೆ ಅತ್ಯಂತ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ವೀರಶೈವ ಲಿಂಗಾಯತ ಸಮಾಜ ಗಜೇಂದ್ರಗಡ-ಉಣಚಗೇರಿ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಹಾನಗಲ್ ಕುಮಾರೇಶ್ವರ ಪುರಾಣ ಮಂಗಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಾನಗಲ್‌ಕುಮಾರ ಶ್ರೀಗಳು ಶ್ರಮಿಸಿದ ಪರಿಣಾಮ ಸಮಾಜ ಸುಸ್ಥಿರವಾಗಿ ಹಾಗೂ ಸದೃಢವಾಗಿ ಬೆಳೆಯುತ್ತಿದೆ. ಸಮಾಜ ಸಂಘಟನೆಗಾಗಿ ಅಖಿಲ ಬಾರತ ವೀರಶೈವ ಲಿಂಗಾಯತ ಮಹಾಸಭಾ ಸ್ಥಾಪನೆ, ಗದುಗಿನ ವೀರೇಶ್ವರ ಪುಣ್ಯಾಶ್ರಮವನ್ನು ಎತ್ತರಕ್ಕೆ ಬೆಳೆಸಿದರು. ಹಳ್ಳಿ ಹಳ್ಳಿಗಳಿಗೆ ಸಂಚರಿಸಿ ಆಧ್ಯಾತ್ಮದ ಒಲವು ಬೆಳೆಸಿದ್ದರು ಎಂದರು. ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಮಾತನಾಡಿ, ವೀರಶೈವ ಲಿಂಗಾಯತ ಸಮಾಜ ವತಿಯಿಂದ ಪ್ರತಿ ವರ್ಷ ಶ್ರಾವಣ ಮಾಸದ ಅಂಗವಾಗಿ ಶಿವಯೋಗಿಗಳ ದಾರ್ಶನಿಕರ ಪುರಾಣಗಳನ್ನು ಆಯೋಜಿಸುತ್ತಾ ಬಂದಿದ್ದೇವೆ. ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ ಸದಸ್ಯರಿಗೆ ಸಮಾಜದ ವತಿಯಿಂದ ಅನುದಾನ ನೀಡಲು ಸಂಪರ್ಕಿಸಿದ್ದೇವೆ. ಸ್ವಲ್ಪ ಸಮಯದಲ್ಲೇ ಸಮಾಜದ ವತಿಯಿಂದ ಭವ್ಯ ಸಮುದಾಯ ಭವನ ನಿರ್ಮಾಣವಾಗಲಿದೆ ಎಂದರು. ಹಾಲಕೆರೆಯ ಮುಪ್ಪಿನ ಬಸವಲಿಂಗ ಸ್ವಾಮಿಜಿ, ಮೈಸೂರಿನ ಪುರಾಣಿಕರಾದ ನಿರಂಜನ ದೇವರು ಆಶೀರ್ವಚನ ನೀಡಿದರು. ಪುರಾಣ ಸಮಿತಿ ಅಧ್ಯಕ್ಷ ದೇವಪ್ಪ ಮಡಿವಾಳರ, ಸಮಾಜದ ಯುವ ಘಟಕದ ಅಧ್ಯಕ್ಷ ಅಪ್ಪು ಮತ್ತಿಕಟ್ಟಿ, ಎಸ್.ಎಸ್. ವಾಲಿ, ಶಿವಕುಮಾರ ಕೋರಧಾನ್ಯಮಠ, ಶರಣಪ್ಪ ರೇವಡಿ, ಸಂಗಪ್ಪ ಕುಂಬಾರ, ಚಿದಾನಂದಪ್ಪ ಹಡಪದ, ಪ್ರಭು ಚವಡಿ, ಬಸವರಾಜ ಚನ್ನಿ, ನಿಂಗಪ್ಪ ಹೂಗಾರ, ಗಂಗಪ್ಪ ಅಗ್ನೂರ, ಎಸ್.ಎಸ್. ನರೇಗಲ್ಲ ಇದ್ದರು. "ವೀರಶೈವ ಲಿಂಗಾಯತ ಸಮಾಜ ಗಜೇಂದ್ರಗಡ-ಉಣಚಗೇರಿ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ನಡೆದ ಹಾನಗಲ್ ಕುಮಾರ ಸ್ವಾಮಿಗಳ ಪುರಾಣ ಮಹಾ ಮಂಗಾಲೋತ್ಸವ ನಿಮಿತ್ತ ಮೈಸೂರ ಮಠದಿಂದ ಸಕಲ ವಾದ್ಯಮೇಳಗಳು, ಸುಮಂಗಲೆಯರಿಂದ ಪೂರ್ಣ ಕುಂಭದೊಂದಿಗೆ ಹಾನಗಲ್ ಕುಮಾರ ಮಹಾಸ್ವಾಮಿಗಳ ಭಾವಚಿತ್ರದ ಮೆರವಣಿಗೆಯು ಶನಿವಾರ ನಡೆಯಿತು.ಪಟ್ಟಣದ ಮೈಸೂರ ಮಠದಿಂದ ಪ್ರಾರಂಭವಾದ ಹಾನಗಲ್ ಕುಮಾರ ಮಹಾಸ್ವಾಮಿಗಳ ಭಾವಚಿತ್ರದ ಮೆರವಣಿಗೆಯು ಬಸವೇಶ್ವರ ವೃತ್ತ, ಬಜರಂಗ ವೃತ್ತ, ಕೊಳ್ಳಿಯವರ ಕತ್ರಿ, ಕಟ್ಟಿಬಸವೇಶ್ವರ ವೃತ್ತ, ಹಿರೇಬಜಾರ ಮಾರ್ಗವಾಗಿ ಅಗಸಿ ಮೂಲಕ ಮೈಸೂರ ಮಠವನ್ನು ತಲುಪಿತು. ಬಳಿಕ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೂ ಮುನ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ, ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಬಸವರಾಜ ಶೀಲವಂತರ, ಅಮರೇಶ ಗಾಣಿಗೇರ, ಅಮರೇಶಪ್ಪ ಬೂದಿಹಾಳ, ಪ್ರಭು ಚವಡಿ, ಮುತ್ತಣ್ಣ ಚಟ್ಟೇರ, ಬಸವರಾಜ ವಾಲಿ, ಅಪ್ಪು ಮತ್ತಿಕಟ್ಟಿ, ವೀರೇಶ ರಾಜೂರ, ಮಲ್ಲು ಮುದಿಯಪ್ಪಣವರ, ಶೇಖಣ್ಣ ಇಟಗಿ, ಶರಣಪ್ಪ ರೇವಡಿ, ಮಹೇಶ ಪಲ್ಲೇದ, ಜಗದೀಶ ಹೊಸಳ್ಳಿ ಸೇರಿ ಇತರರು ಇದ್ದರು.