ಸಾರಾಂಶ
ಗುಳೇದಗುಡ್ಡ ತಾಲೂಕಿನ ಹಳದೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಿತು.
ಗುಳೇದಗುಡ್ಡ: ತಾಲೂಕಿನ ಹಳದೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಬೂದನಗಡ ಗ್ರಾಮದ ಹನಮವ್ವ ಉಳ್ಳಾಗಡ್ಡಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪಾದನಕಟ್ಟಿ ಗ್ರಾಮದ ಹನಮಂತ ದನದಮನಿ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ ಘೋಷಿಸಿದ್ದಾರೆ. ಈ ವೇಳೆ ಸದಸ್ಯರಾದ ಭೀರಪ್ಪ ಕುರಿ, ಈರಯ್ಯ ಹೊಸಮಠ, ಮುತ್ತವ್ವ ಕೊಳಮೇಲಿ, ಬಸನಗೌಡ ಗೌಡರ, ಲಕ್ಷ್ಮೀ ವಾಲ್ಮೀಕಿ, ಲಚಮಪ್ಪ ನಾಗರಾಳ, ಸಾವಿತ್ರಿ ಗುಡದಾರಿ ಇದ್ದರು. ಒಟ್ಟು 15 ಸದಸ್ಯಬಲ ಹೊಂದಿರುವ ಗ್ರಾಪಂಗೆ ಚುನಾವಣೆ ಸಂದರ್ಭದಲ್ಲಿ 06 ಜನ ಸದಸ್ಯರು ಗೈರಾಗಿದ್ದರು. 09 ಜನ ಸದಸ್ಯರು ಹಾಜರಿದ್ದರು.ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳಿಗೆ ಹೆಸರುಗಳು ಘೋಷಣೆಯಾಗುತ್ತಿದ್ದಂತೆ ಅಭಿಮಾನಿಗಳು ಗ್ರಾಪಂ ಹೊರಗಡೆ ಪರಸ್ಪರ ಗುಲಾಲ್ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹಿರಿಯ ಮುಖಂಡರಾದ ತಿಪ್ಪಣ್ಣ ಗೌಡರ, ಶಂಕರಗೌಡ ಗೌಡರ, ಮಲ್ಲಪ್ಪ ನಿಂಬಲಗುಂದಿ, ಮೂಕನಗೌಡ ಗೌಡ್ರ, ಶಿವಾನಂದ ಮಾಗಿ, ಅನೀಲಕುಮಾರ ಬಳಬಟ್ಟಿ, ಸುರೇಶ ಕುರಿ, ರಮೇಶ ತಿಮ್ಮಣ್ಣವರ್, ತಿಪ್ಪನಗೌಡ ಗೌಡರ, ಚಂದಪ್ಪ ಡುಳ್ಳಿ, ಯಂಕಣ್ಣ ಭೀಮನಗಡೆ, ಶಿವಲಿಂಗಪ್ಪ ಚಲವಾದಿ ಸೇರಿ ಅನೇಕರಿದ್ದರು.