ಪುರಸಭೆ ಗದ್ದುಗೆಗೆ ಕೈ, ಕಮಲ ಮಧ್ಯೆ ಫೈಟ್‌

| Published : Aug 09 2024, 12:49 AM IST

ಸಾರಾಂಶ

27 ಸದಸ್ಯರನ್ನು ಹೊಂದಿರುವ ಸ್ಥಳೀಯ ಪುರಸಭೆಯ ಉಳಿದ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರ ಮೀಸಲಾತಿ ನಿಗದಿಪಡಿಸಿದೆ. ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ಬ ವರ್ಗದ ಮಹಿಳೆಗೆ ಮೀಸಲಾಗಿದೆ.

ಕನ್ನಡಪ್ರಭ ವಾರ್ತೆ ರಾಮದುರ್ಗ

27 ಸದಸ್ಯರನ್ನು ಹೊಂದಿರುವ ಸ್ಥಳೀಯ ಪುರಸಭೆಯ ಉಳಿದ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರ ಮೀಸಲಾತಿ ನಿಗದಿಪಡಿಸಿದೆ. ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ಬ ವರ್ಗದ ಮಹಿಳೆಗೆ ಮೀಸಲಾಗಿದೆ.

27 ಸದಸ್ಯರನ್ನು ಹೊಂದಿರುವ ರಾಮದುರ್ಗ ಪುರಸಭೆಯಲ್ಲಿ ಬಿಜೆಪಿ 16 ಸದಸ್ಯರನ್ನು ಹೊಂದಿದ್ದರೆ, ಕಾಂಗ್ರೆಸ್ 10 ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಬಿಜೆಪಿಯ 16 ಸದಸ್ಯರಲ್ಲಿ ಹಿಂದಿನ ಅಧ್ಯಕ್ಷ ರಘುನಾಥ ರೇಣಕೆ, ವಾರ್ಡ ನಂ.6ರ ಲಕ್ಷ್ಮೀ ಜಗದೀಶ ಕಟಕೋಳ, ವಾರ್ಡ ನಂ.11ರ ರಾಣಿ ಸಂಜಯ ಬೋಕರೆ, ವಾರ್ಡ 27ರ ಗೀತಾ ಲಕ್ಷ್ಮಣ ದೊಡಮನಿ ಅಧ್ಯಕ್ಷ ಸ್ಥಾನದ ಮೀಸಲಾತಿಯಲ್ಲಿ ಬರಲಿದ್ದು, ಉಪಾಧ್ಯಕ್ಷ ಸ್ಥಾನದ ಮೀಸಲಾತಿಯಲ್ಲಿ ಸರಿತಾ ಗೋವಿಂದ ದೂತ, ನೀತಾ ರಾಜೇಶ ಬೀಳಗಿ ಹಿಂದುಳಿದ ಬ ವರ್ಗದ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.ಪುರಸಭೆಯಲ್ಲಿ ಕಳೆದ ಎರಡು ಅವಧಿಯಲ್ಲಿ ಬಿಜೆಪಿ ಅಧಿಕಾರ ನಡೆಸಿದೆ. ಆದರೆ ರಾಜಕೀಯ ಬದಲಾವಣೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಕಾಂಗ್ರೆಸ್‌ನ ಅಶೋಕ ಪಟ್ಟಣ ಶಾಸಕರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪುರಸಭೆ ಸದಸ್ಯರಲ್ಲಿ ಎರಡು ಬಣಗಳಾಗಿದ್ದು, ಶಾಸಕ ಅಶೋಕ ಪಟ್ಟಣ ಇದರ ಲಾಭ ಪಡೆದು ಕೈಗೆ ಅಧಿಕಾರ ಕೊಡಿಸುವರೇ ಅಥವಾ ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಜಿಲ್ಲಾ ಬಿಜೆಪಿ ನಾಯಕರು ಮದ್ದು ಅರೆದು ಮತ್ತೆ ಕಮಲ ಅರಳಿಸುವರೇ ಕಾದು ನೋಡಬೇಕಿದೆ.