ಸಾರಾಂಶ
ಕಾಂಗ್ರೆಸ್ ನವರು ಬಾಲರಾಜು ದುಡ್ಡು ಪಡೆದುಕೊಂಡಿದ್ದಾರೆ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ, ಆದರೆ ಆ ರೀತಿ ದುಡ್ಡಿಗೆ ನಮ್ಮ ಕೈ ಕತ್ತರಿಸಿದರೂ ಸಹ ಕೈಚಾಚುವುದಿಲ್ಲ. ಜನಗಳಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ, ಮುಂದೆಯೂಕೆಲಸ ಮಾಡಲು ನನ್ನನ್ನು ಗೆಲ್ಲಿಸಿ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಬೇಕು ಎಂದು ಬಹುತೇಕ ಭಾರತೀಯರು ಕನಸು ಕಾಣುತ್ತಿದ್ದು, ಇಂತಹ ಕನಸನ್ನು ನನಸು ಮಾಡಬೇಕಾದ ಕರ್ತವ್ಯ ನಮ್ಮ ಮೇಲಿದೆ ಎಂದು ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಹೇಳಿದರು.ಪಟ್ಟಣದ ಹ್ಯಾಂಡ್ ಪೋಸ್ಟ್ ನ ಖಾಸಗಿ ಸಮುದಾಯ ಭವನದಲ್ಲಿ ಎನ್.ಡಿಎ ಕಾರ್ಯಕರ್ತರ ಸಭೆಯಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು.
ಕಾಂಗ್ರೆಸ್ ನವರು ಬಾಲರಾಜು ದುಡ್ಡು ಪಡೆದುಕೊಂಡಿದ್ದಾರೆ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ, ಆದರೆ ಆ ರೀತಿ ದುಡ್ಡಿಗೆ ನಮ್ಮ ಕೈ ಕತ್ತರಿಸಿದರೂ ಸಹ ಕೈಚಾಚುವುದಿಲ್ಲ. ಜನಗಳಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ, ಮುಂದೆಯೂಕೆಲಸ ಮಾಡಲು ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.ಬಾಲರಾಜು ಗೆದ್ದರೆ ಸಂವಿಧಾನ ಬದಲಿಸುತ್ತೇನೆ ಎಂದು ಅಪಪ್ರಚಾರ ಮಾಡಿದ್ದಾರೆ, ಆದರೆ ಹರಿ ಹರ ಬ್ರಹ್ಮ ಬಂದರೂ ಸಹ ಸಂವಿಧಾನ ಬದಲಿಸಲು ಸಾಧ್ಯವಿಲ್ಲ, ಬದಲಿಸಲು ಒತ್ತಾಯ ಮಾಡಿದರೂ ಸಹ ನಾವು ಬಿಡುವುದಿಲ್ಲ ಎಂದು ಅವರು ತಿಳಿಸಿದರು.
ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೃಷ್ಣನಾಯಕ ಮಾತನಾಡಿದರು. ಅನೇಕ ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.ಮುಖಂಡರಾದ ಜಯಪ್ರಕಾಶ್, ದೊಡ್ಡನಾಯಕ, ಬಿಜೆಪಿ ತಾಲೂಕು ಅಧ್ಯಕ್ಷ ಶಂಭೇಗೌಡ, ಗುರುಸ್ವಾಮಿ, ಜೆಡಿಎಸ್ ಅಧ್ಯಕ್ಷರಾದ ರಾಜೇಂದ್ರ, ಗೋಪಾಲಸ್ವಾಮಿ, ದೊಡ್ಡನಾಯಕ, ಜೆ.ಪಿ. ಚಂದ್ರಶೇಖರ್, ಮೊತ್ತ ಬಸವರಾಜಪ್ಪ, ಸಿ.ಕೆ. ಗಿರೀಶ್, ಶ್ಯಾಂಸುಂದರ್, ಎಂ.ಡಿ. ಮಂಚಯ್ಯ, ನರಸಿಂಹೇಗೌಡ, ನಾಗೇಗೌಡ, ಸಿ.ವಿ. ನಾಗರಾಜು, ಸೋಮೆಶ್, ಮಳಲಿ ಶಾಂತಕುಮಾರ್, ಸುರೇಂದ್ರ, ಶಿವಸ್ವಾಮಿ, ಅಕ್ರಂ ಪಾಷ, ಯೋಗೇಶ್, ಶ್ರೀಧರಮೂರ್ತಿ, ನಾಗನಾಯಕ, ವೆಂಕಟಸ್ವಾಮಿ, ಓ.ಕೆ. ಮಹೇಂದ್ರ, ರಮೇಶ್ಕುಮಾರ್, ವೆಂಕಟೇಶ್, ರಾಜು, ಗೋಪಲಸ್ವಾಮಿ, ರಂಗೇಗೌಡ, ಪ್ರದೀಪ್ ಇದ್ದರು.