ಸಾರಾಂಶ
ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಮಹಾ ಗಣಪತಿ ಟ್ರಸ್ಟ್ ವತಿಯಿಂದ ನಡೆಯುತ್ತಿರುವ 5ನೇ ವರ್ಷದ ಗಣೇಶೋತ್ಸವ ಅಂಗವಾಗಿ ಭಾನುವಾರ ನಗರದ ಪೇಟೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಭಾರತ ಮಾತಾ ಹಾಗೂ ಗೋಮಾತಾ ಪೂಜೆಯೊಂದಿಗೆ ಹಂದರಗಂಬ ಪೂಜೆ ನೇರವೇರಿಸಲಾಯಿತು.
- ಪೇಟೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಸಂಪನ್ನ - - - ಹರಿಹರ: ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಮಹಾ ಗಣಪತಿ ಟ್ರಸ್ಟ್ ವತಿಯಿಂದ ನಡೆಯುತ್ತಿರುವ 5ನೇ ವರ್ಷದ ಗಣೇಶೋತ್ಸವ ಅಂಗವಾಗಿ ಭಾನುವಾರ ನಗರದ ಪೇಟೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಭಾರತ ಮಾತಾ ಹಾಗೂ ಗೋಮಾತಾ ಪೂಜೆಯೊಂದಿಗೆ ಹಂದರಗಂಬ ಪೂಜೆ ನೇರವೇರಿಸಲಾಯಿತು. ಸೆ.7ರಂದು ಬೆಳಗ್ಗೆ 11 ಗಂಟೆಗೆ ಭವ್ಯ ಮಂಟಪದಲ್ಲಿ ಗಣೇಶನ ಪ್ರತಿಷ್ಠಾಪನೆಯೊಂದಿಗೆ ಆರಂಭವಾಗುವ 5ನೇ ವರ್ಷದ ಗಣೇಶೋತ್ಸವವು ಸೆ.29ರಂದು ನಡೆಯುವ ಬೃಹತ್ ಶೋಭಾ ಯಾತ್ರೆಯೊಂದಿಗೆ ಮುಕ್ತಾಯಗೊಳ್ಳಲಿದೆ.
ನಗರಸಭಾ ಸದಸ್ಯರಾದ ಶಂಕರ್ ಕಟಾವಕರ್, ಎಬಿಎಂ ವಿಜಯಕುಮಾರ್, ಕಾಂಗ್ರೇಸ್ ಮುಖಂಡ ಎನ್.ಎಚ್. ಶ್ರೀನಿವಾಸ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಅರ್ಜುನ್ ಪಾಟೀಲ್, ಜೆಡಿಎಸ್ ಮುಖಂಡ ಜಿ.ನಂಜಪ್ಪ, ಹಿಂದೂ ಮಹಾಗಣಪತಿ ಟ್ರಸ್ಟ್‌ನ ಶಶಿಕುಮಾರ್ ಮೆಹರ್ವಾಡೆ, ರವಿ ಹೋವಳೆ, ಬಸವನಗೌಡ, ಮಂಜುನಾಥ್ ರಟ್ಟಿಹಳ್ಳಿ, ಎಚ್.ದಿನೇಶ್, ಸ್ವಾತಿ ಹನುಮಂತ, ಚಂದ್ರಕಾಂತ್, ಪ್ರಸನ್ನ, ಚಂದನ್ ಮೂರ್ಕಲ್, ಕಾರ್ತಿಕ್,ಮಹೇಶ್, ಶಿವು, ಬಾಡಿ ನಾಗರಾಜ್, ಕೃಷ್ಣಮೂರ್ತಿ ಶ್ರೇಷ್ಠಿ, ರಾಘವೇಂದ್ರ ಉಪಾದ್ಯಾಯ, ದರಣೇಂದ್ರ, ರವಿ ತಾವರಗಿ, ಶ್ರೀನಿವಾಸ್ ಚಂದಾಪೂರ, ಮಾಲತೇಶ್ ಬಂಡಾರಿ,ನಿರಂಜನ ಸೇರಿದಂತೆ ಇತರರಿದ್ದರು.- - - -11ಎಚ್‍ಆರ್‌ಆರ್2:
ಹರಿಹರ ನಗರದ ಪೇಟೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಹಿಂದೂ ಮಹಾಗಣಪತಿ ಟ್ರಸ್ಟ್ ವತಿಯಿಂದ ಭಾನುವಾರ 5ನೇ ವರ್ಷದ ಗಣೇಶೋತ್ಸವ ಅಂಗವಾಗಿ ಹಂದರಗಂಬ ಪೂಜೆ ನೇರವೇರಿಸಲಾಯಿತು.