ಖಾಸಗಿ ಕಂಪನಿಗಳಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡಬಾರದು. ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ಒಪ್ಪಿಸುವುದು ಜನವಿರೋಧಿ ನೀತಿಯಾಗಿದೆ. ಇದರಿಂದಾಗಿ ರೈತರು, ಮಧ್ಯಮ ವರ್ಗದವರು ಬೆಲೆ ಏರಿಕೆ ಬಿಸಿ ಎದುರಿಸಬೇಕಾಗುತ್ತದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಹಿರೇಕೆರೂರು: ಖಾಸಗಿ ಕಂಪನಿಗಳಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡಬಾರದು. ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ಒಪ್ಪಿಸುವುದು ಜನವಿರೋಧಿ ನೀತಿಯಾಗಿದೆ. ಇದರಿಂದಾಗಿ ರೈತರು, ಮಧ್ಯಮ ವರ್ಗದವರು ಬೆಲೆ ಏರಿಕೆ ಬಿಸಿ ಎದುರಿಸಬೇಕಾಗುತ್ತದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಪಟ್ಟಣದ ಬಿ.ಸಿ. ಪಾಟೀಲ ಅವರ ಗೃಹ ಕಚೇರಿಯಲ್ಲಿ ಮಾಜಿ ಸಚಿವರೊಂದಿಗೆ ಹೆಸ್ಕಾಂ ಸಿಬ್ಬಂದಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನೂರ್ ಅಹ್ಮದ್ ಮಾತನಾಡಿ, ವಿದ್ಯುಚ್ಛಕ್ತಿ ಕಾಯ್ದೆ 2003ರ ಸೆಕ್ಷನ್ 108 ರನ್ವಯ ಸರ್ಕಾರಕ್ಕಿರುವ ಅಧಿಕಾರ ಚಲಾಯಿಸಿ, ಕೆಇಆರ್‌ಸಿಗೆ ಸಲ್ಲಿಕೆಯಾಗಿರುವ ಟಾಟಾ ಪವರ್ ಕಂಪನಿಯ ಅರ್ಜಿಯನ್ನು ತಕ್ಷಣವೇ ತಿರಸ್ಕರಿಸಬೇಕು. ರಾಜ್ಯದ ಸರ್ಕಾರಿ ವಿದ್ಯುತ್ ಕಂಪನಿಗಳ ಅಸ್ತಿತ್ವ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಎಂದು ಪತ್ರದ ಮೂಲಕ ಸಚಿವರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಶಾಖಾಧಿಕಾರಿ ಆರ್.ಎಚ್. ಬಣಕಾರ, ಕಿರಿಯ ಎಂಜಿನಿಯರ್ ಸತೀಶ್ ಅರಸಾಪುರ, ಜಯಪ್ರಕಾಶ್ ಬಿ.ಎಸ್., ಖಾದರ್ ಭಾಷಾ, ಕೆ. ಹನುಮಂತಪ್ಪ, ಡಿ. ನಾಗಪ್ಪ ಮೇದಾರ್, ಮಂಜು ಪೂಜಾರ್ ಹಾಗೂ ಸಿಬ್ಬಂದಿಗಳು ಇದ್ದರು.