ಸಾರಾಂಶ
ಬಸವನಬಾಗೇವಾಡಿ: ತಾಲೂಕಿನ ಕಣಕಾಲ ಗ್ರಾಮದ ನಿರ್ಗತಿಕ ವಯೋವೃದ್ಧೆ ಈರಮ್ಮ ಬಡಿಗೇರ ಅವರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ನಿರ್ಮಿಸಿದ ವಾತ್ಸಲ್ಯ ಮನೆಯನ್ನು ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಪ್ಪುಗೌಡ ಪಾಟೀಲ ಮನಗೂಳಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಮಂಜುನಾಥ ಎಚ್.ಕೆ. ಮಾತನಾಡಿ, ದಾರಿಯಲ್ಲಿ ವಾಸ ಮಾಡುವವರಿಗೆ, ಯಾರೂ ನೋಡದೇ ಇರುವ ನಿರ್ಗತಿಕರ ಬದುಕನ್ನು ಹಸನ್ನಾಗಿಸಿ ಅವರ ಬದುಕನ್ನು ಕಟ್ಟಿಕೊಡುವ ಉದ್ದೇಶದಿಂದ ಮಾತೃಶ್ರೀ ಹೇಮಾವತಿ ಅಮ್ಮನವರು ನಿರ್ಗತಿಕರಿಗೆ ಮನೆಯನ್ನು ಕಟ್ಟಿಕೊಡುವುದು ಮನದಾಸೆ ಹೊಂದಿದ್ದಾರೆ. ವಯೋವೃದ್ಧೆಯಾಗಿರುವ ಈರಮ್ಮ ಬಡಿಗೇರ ಅವರಿಗೆ ಉಳಿಯಲು ಸರಿಯಾದ ಮನೆ ಇಲ್ಲದೇ ಇರುವುದರಿಂದಾಗಿ ಮಾತೃಶ್ರೀ ಹೇಮಾವತಿ ಅಮ್ಮನವರ ಆಶಯದಂತೆ ವಾತ್ಸಲ್ಯ ಎಂಬ ಮನೆಯನ್ನು ಕಟ್ಟಿಕೊಡುವ ಮೂಲಕ ಅವರಿಗೆ ಈ ಮನೆಯನ್ನು ಹಸ್ತಾಂತರ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಸುಮಾರು ೭೦ ಸದಸ್ಯರಿಗೆ ಪ್ರತಿ ತಿಂಗಳು ಮಾಶಾಸನ, ವರ್ಷದಲ್ಲಿ ಎರಡ್ಮೂರು ಸಲ ಪೌಷ್ಟಿಕ ಆಹಾರ ಸೇರಿ ಅವರಿಗೆ ಜೀವನಾವಶ್ಯಕ ಸಾಮಗ್ರಿಗಳನ್ನು ನೀಡಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಕಣಕಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶರಣಮ್ಮ ಕುಂಬಾರ, ಬಸವಸೈನ್ಯ ಮುಖಂಡ ಶ್ರೀಕಾಂತ ಕೊಟ್ರಶೆಟ್ಟಿ, ಸಂಸ್ಥೆಯ ವಲಯದ ಮೇಲ್ವಿಚಾರಕ ಅನಂತಗೌಡ ರಂಗೊಳ್ಳಿ, ಶ್ರೀದೇವಿ ಕಾಳಸಿಂಗೆ, ಸೇವಾ ಪ್ರತಿನಿಧಿಗಳಾದ ಅನುರಾಧ ಬೀರಲದಿನ್ನಿ, ಕೌಶಿಂಬಿ ಕನ್ನೂರ, ಭಾಗೀರಥಿ ಸಾಲವಾಡಗಿ, ಸಪ್ನಾ ನಾಯಕ ಇತರರು ಇದ್ದರು.