ಸಾರಾಂಶ
ಚಾಮರಾಜನಗರ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಮಾಜಿ ಸಚಿವ ಮುನಿರತ್ನ ಅವರ ಭಾವಚಿತ್ರ ದಹಿಸುವುದರ ಮೂಲಕ ಪ್ರತಿಭಟನೆ ನಡೆಸಲಾಯಿತು.
ಚಾಮರಾಜನಗರ: ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಮಾಜಿ ಸಚಿವ ಮುನಿರತ್ನ ಅವರ ಭಾವಚಿತ್ರ ದಹಿಸುವುದರ ಮೂಲಕ ಪ್ರತಿಭಟಿಸಿದರು.
ನಗರದ ಭುವನೇಶ್ವರಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ದಲಿತ ಸಂಘಟನೆಗಳ ಒಕ್ಕೂಟದ ರಾಮಸಮುದ್ರ ಸುರೇಶ್, ಲಂಚ ಬೇಡಿಕೆ ವಿಚಾರದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಮುನಿರತ್ನ ಘನತ್ಯಾಜ್ಯ ವಿಲೇವಾರಿಯ ವಿಚಾರಕ್ಕೆ ಸಂಬಂಧ ಗುತ್ತಿಗೆದಾರನಿಂದ ಲಂಚ ಕೇಳುವ ಸಂದರ್ಭದಲ್ಲಿ ಗುತ್ತಿಗೆದಾರನಿಗೆ ಅವಾಚ್ಯ ಶಬ್ದಗಳಿಂದ ಬೈಯುವಾಗ ದಲಿತ ಸಮುದಾಯವನ್ನು ವಿನಾಕಾರಣ ಮದ್ಯ ತಂದು ನಿಂದಿಸಿ ಬೈದು ಅವಮಾನ ಮಾಡಿದ್ದಾರೆ. ಇದು ಇಡಿ ದಲಿತ ಸಮುದಾಯಕ್ಕೆ ಮಾಡಿರುವ ಅವಮಾನವಾಗಿದೆ. ಮುನಿರತ್ನ ಮಾಡುತ್ತಿರುವುದೇ ಭ್ರಷ್ಟಾಚಾರ. ಅದರಲ್ಲೂ ಕೀಳುಮಟ್ಟಕ್ಕೆ ಇಳಿದು ಮಹಿಳೆಯನ್ನು ಅವಮಾನಿಸಿ ಮಾತನಾಡುವುದರ ಜೊತೆ ಕೊಲೆ ಬೆದರಿಕೆ ಹಾಕಿರುವ ಈತನನ್ನು ಗಲ್ಲು ಶಿಕ್ಷಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಎಂಬವರಿಗೆ ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡುವ ಮೂಲಕ ಗುತ್ತಿಗೆದಾರನ ಪತ್ನಿ, ತಾಯಿಯ ಬಗ್ಗೆ ಅಶ್ಲೀಲವಾಗಿ ಮಾತನಾಡುವಾಗ ಮಾತಿನ ಮಧ್ಯ ದಲಿತ ಸಮುದಾಯವನ್ನು ವಿನಾಕಾರಣ ಬಳಸಿಕೊಂಡು ಸಮುದಾಯವನ್ನು ಅವಮಾನ ಪಡಿಸಿರುವ ಮುನಿರತ್ನನನ್ನು ಈ ಕೂಡಲೇ ಶಾಸಕ ಸ್ಥಾನದಿಂದ ರದ್ದು ಗೊಳಿಸಿ, ಎಸ್ಸಿ. ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಶಿಕ್ಷೆಗೆ ಒಳ ಪಡಿಸಬೇಕೆಂದು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಒತ್ತಾಯಿಸಲಾಗಿದೆ.ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಯರಿಯೂರು ಸಿ.ರಾಜಣ್ಣ, ಕೆ.ಎಂ.ನಾಗರಾಜು, ಗುಂಡ್ಲುಪೇಟೆ ನಂಜುಂಡಸ್ವಾಮಿ, ಮಾಡ್ರಳ್ಳಿ ರಂಗಸ್ವಾಮಿ, ಶಾಂತರಾಜು, ಮರಿಯಲದ ಹುಂಡಿ ಕುಮಾರ, ಅಣಗಳ್ಳಿ ಬಸವರಾಜು, ನಾಗಶೇಖರ್, ಸಿ.ಎಂ.ಶಿವಣ್ಣ, ಕಾಡಳ್ಳಿ ನಾಗರಾಜು, ಶಿವಕುಮಾರ್, ವರದರಾಜು, ಹಾಗೂ ಇನ್ನು ಮುಂತಾದವರು ಭಾಗವಹಿಸಿದ್ದರು.