ಹಣಮಂತಗೌಡ ಚನ್ನಾಳ ಅವರಾದಿ ಗ್ರಾಪಂ ಅಧ್ಯಕ್ಷ

| Published : Aug 15 2024, 01:48 AM IST

ಸಾರಾಂಶ

ಮೂಡಲಗಿ ತಾಲೂಕಿನ ಅವರಾದಿ ಗ್ರಾಮ ಪಂಚಾಯತಿಗೆ ಮಂಗಳವಾರ ಜರುಗಿದ ಅಧ್ಯಕ್ಷರ ಚುನಾವಣೆಯಲ್ಲಿ ಅವರಾದಿ ಗ್ರಾಪಂ ವ್ಯಾಪ್ತಿಯ ಹಣಮಂತಗೌಡ ಚನ್ನಾಳ ಅವಿರೋಧ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ತಾಲೂಕಿನ ಅವರಾದಿ ಗ್ರಾಮ ಪಂಚಾಯತಿಗೆ ಮಂಗಳವಾರ ಜರುಗಿದ ಅಧ್ಯಕ್ಷರ ಚುನಾವಣೆಯಲ್ಲಿ ಅವರಾದಿ ಗ್ರಾಪಂ ವ್ಯಾಪ್ತಿಯ ಹಣಮಂತಗೌಡ ಚನ್ನಾಳ ಅವಿರೋಧ ಆಯ್ಕೆಯಾದರು.

ಈ ವೇಳೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಿಂಗಪ್ಪ ಕುರಬೇಟ, ಸುಭಾಷ ಪಾಟೀಲ. ಎಂ.ಎಂ. ಪಾಟೀಲ, ಪ್ರಕಾಶ ಕಾಳಶೆಟ್ಟಿ, ಶ್ರೀಶೈಲ ಭಂಜತ್ರಿ, ಸಂಜುಗೌಡ ಪಾಟೀಲ, ಬಿ.ಎಚ್. ಪಾಟೀಲ, ಬೀರಪ್ಪ ಹೊಸಟ್ಟಿ, ಸಿದ್ಧಾರೂಢ ಕುಶಪ್ಪನವರ, ಹನುಮಂತಗೌಡ ಪಾಟೀಲ, ಸಿ.ಎಲ್. ನಾಯಕ, ಹನುಮಂತ ಮೆಟ್ಟಿನವರ, ಎಂ.ಜಿ. ಪಾಟೀಲ, ಭೀಮಪ್ಪ ದಳವಾಯಿ, ಬಾಳು ಬೇಡರ. ಕೆ.ಪಿ. ರಂಜನಗಿ, ಪಿಡಿಒ ಸಂಜೀವ ನಂದಗಾಂವಿ ಹಾಗೂ ಸದಸ್ಯರು ಗ್ರಾಮದ ಮುಖಂಡರು ಇದ್ದರು

ನೂತನ ಗ್ರಾಪಂ ಅಧ್ಯಕ್ಷ ಹಣಮಂತಗೌಡ ಚನ್ನಾಳ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಿಂಗಪ್ಪ ಕುರಬೇಟ ಹಾಗೂ ಉಪಾಧ್ಯಕ್ಷೆ ಸುವರ್ಣಾ ಬಿಪಾಟೀಲ, ಮಾಜಿ ಅಧ್ಯಕ್ಷ ಭೀಮಪ್ಪ ದಳವಾಯಿ ಅವರನ್ನು ಗ್ರಾಪಂನಿಂದ ಸತ್ಕರಿ ಗೌರವಿಸಿದರು.