ಸಾರಾಂಶ
ಗಂಗಾವತಿ: ಸಮೀಪದ ನವಲಿ ಮತ್ತು ಚಿಕ್ಕಡಂಕನಕಲ್ ಗ್ರಾಮದಲ್ಲಿ ಹನುಮದ್ ವ್ರತ ಅಂಗವಾಗಿ ಕಾರ್ತೀಕೋತ್ಸವ ಶ್ರದ್ಧಾ-ಭಕ್ತಿಯಿಂದ ಜರುಗಿತು. ನವಲಿಯ ಶ್ರೀ ಭೋಗಾಪುರೇಶ ದೇವಸ್ಥಾನದಲ್ಲಿ ಹನುಮದ್ ವ್ರಚಾರಣೆ ನಿಮಿತ್ತ ಭೋಗಾಪುರೇಶ ಸ್ವಾಮಿಗೆ ವಿಶೇಷ ಪಂಚಾಮೃತಾಭಿಷೇಕ, ಹೂವಿನ ಅಲಂಕಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ರಾತ್ರಿ ದೀಪೋತ್ಸವ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಭಜನೆ, ಪಂಡಿತರಿಂದ ಉಪನ್ಯಾಸ ಜರುಗಿತು. ವೈಕುಂಠ ಏಕಾದಶಿಯ ದಿನದಂದು ಭಜನೆ, ಹರಿವಾಣ ಸೇವೆ ಜರುಗಿತು. ಕಾರಟಗಿ ನಾಗರಾಜ, ಕಾರಟಗಿ ಶ್ರೀನಿವಾಸ, ಅನುಪ್ ಕಾರಟಗಿ ಅವರ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅರ್ಚಕರಾದ ಶ್ರೀನಿವಾಸಚಾರ ಪ್ರಹ್ಲಾದಚಾರ ನವಲಿ, ಗುಂಡಚಾರ, ನಾರಾಯಣರಾವ್ ಕುಲಕರ್ಣಿ, ಪವನ ಗುಂಡೂರು, ವಿಜಯಕುಮಾರ ಗುಂಡೂರು, ಲಕ್ಷ್ಮಣ ಬೆಳ್ಳುಬ್ಬಿ, ಬದರಿನಾಥ ಜೋಷಿ ಆದಾಪುರ, ಪ್ರಹ್ಲಾದರಾವ್ ಹೇರೂರು ಸೇರಿದಂತೆ ನೂರಾರು ಭಕ್ತರು ಆಗಮಿಸಿ ದರ್ಶನ ಪಡೆದರು.ಚಿಕ್ಕಡಂಕನಕಲ್ ಸಮೀಪದ ಚಿಕ್ಕಡಂಕನಕ್ ಗ್ರಾಮದ ಕೆರೆ ಮಾರುತೇಶ್ವರ ಸ್ವಾಮಿಯ ಕಾರ್ತೀಕೋತ್ಸವ ಶ್ರದ್ಧಾ-ಭಕ್ತಿಯಿಂದ ಜರುಗಿತು. ಬೆಳಗ್ಗೆ ಕೆರೆ ಮಾರೋತ್ಸವರ ಸ್ವಾಮಿಗೆ ವಿಶೇಷ ಪಂಚಾಮೃತಾಭಿಷೇಕ, ಹೂವಿನ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಭಕ್ತರು ದೀಡ್ ನಮಸ್ಕಾರ ಹಾಕಿ ಭಕ್ತಿ ಸಮರ್ಪಿಸಿದರು. ಬೆಳಗ್ಗೆ ಉತ್ಸವ ಸಂಭ್ರಮದಿಂದ ಜರುಗಿತು.ಸತ್ಯನಾರಾಯಣ ದೇವಸ್ಥಾನ: ಗಂಗಾವತಿ ಸತ್ಯನಾರಾಯಣಪೇಟೆಯ ಸತ್ಯನಾರಾಯಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಮತ್ತು ಮುಕ್ಕೋಟಿ ದ್ವಾದಶಿ ದಿನದಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸತ್ಯನಾರಾಯಣಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಉತ್ತರ ದ್ವಾರಬಾಗಿಲಿನಲ್ಲಿ ವೈಕುಂಠ ಬಾಗಿಲು ತೆರೆದು ವಿಶೇಷ ಅಲಂಕಾರ ಮತ್ತು ಹುಂಡಿಯನ್ನು ನಿರ್ಮಿಸಲಾಗಿತ್ತು.