ಭಕ್ತರ ಕಷ್ಟಗಳನ್ನು ಪರಿಹರಿಸುವ ಶಕ್ತಿ ಹನುಮಂತನಲ್ಲಿದೆ

| Published : May 18 2024, 12:38 AM IST

ಭಕ್ತರ ಕಷ್ಟಗಳನ್ನು ಪರಿಹರಿಸುವ ಶಕ್ತಿ ಹನುಮಂತನಲ್ಲಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಐಗಳಿಭಕ್ತರ ಕಷ್ಟಗಳನ್ನು ಪರಿಹರಿಸುವ ಶಕ್ತಿ ಹನುಮಂತನಲ್ಲಿದೆ. ಜೀವನದಲ್ಲಿ ಶ್ರೇಷ್ಠವಾದ ಗುರುನಾಮ ಸ್ಮರಣೆಯಲ್ಲಿ ಗಾಡವಾದ ಶಕ್ತಿ ಅಡಗಿದೆ. ಬಾಡಗಿ ಗ್ರಾಮದ ಹನುಮಾನ ದೇವರಲ್ಲಿ ಅಂತಹ ಶಕ್ತಿ ಅಡಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಶಿವಾನಂದ ನೇಮಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಐಗಳಿಭಕ್ತರ ಕಷ್ಟಗಳನ್ನು ಪರಿಹರಿಸುವ ಶಕ್ತಿ ಹನುಮಂತನಲ್ಲಿದೆ. ಜೀವನದಲ್ಲಿ ಶ್ರೇಷ್ಠವಾದ ಗುರುನಾಮ ಸ್ಮರಣೆಯಲ್ಲಿ ಗಾಡವಾದ ಶಕ್ತಿ ಅಡಗಿದೆ. ಬಾಡಗಿ ಗ್ರಾಮದ ಹನುಮಾನ ದೇವರಲ್ಲಿ ಅಂತಹ ಶಕ್ತಿ ಅಡಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಶಿವಾನಂದ ನೇಮಗೌಡ ಹೇಳಿದರು.ಸಮೀಪದ ಬಾಡಗಿ ಗ್ರಾಮದಲ್ಲಿ ನಡೆದ ಹನುಮಾನ ದೇವರ ಓಕಳಿ ಕಂಬ ನಿಲ್ಲಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ನಾವು ಎಷ್ಟು ಸುದೈವಿಗಳು. ನಮ್ಮಗೆ ಭೂಮಂಡಲದಲ್ಲಿ ಮಳೆ, ಹಣ್ಣು ಹಂಪ್ಪಲ, ಸೂರ್ಯ ಚಂದ್ರನ ಬೆಳಕು ಎಲ್ಲವೂ ಸಿಕ್ಕಿದೆ. ಇದು ದೇವರು ನಮ್ಮಗೆ ಕೊಟ್ಟ ಸ್ವರ್ಗ. ನಾವು ವಾಸಿಸುವ ಮನೆ ದೇವರ ಮನೆಯಂತಿರಬೇಕು. ಮನೆಯಲ್ಲಿ ವಾಸಿಸುವ ಎಲ್ಲರು ದೇವರ ಆರಾಧಕರಾಗಿರಬೇಕು. ಆ ಮನೆ ಸ್ವರ್ಗದಂತೆ. ನಾವಿರುವ ಮನೆ ಊರು ಸ್ವರ್ಗವಾದರೇ ಜೀವನಕ್ಕೆ ಮತ್ತೆ ಏನು ಬೇಕು. ದೇವರು ಬದುಕಿನಲ್ಲಿ ಎಲ್ಲವನ್ನು ಕರುಣಿಸುತ್ತಾನೆ. ಮನಸ್ಸಿನಲ್ಲಿ ಯಾವುದನ್ನು ಬಯಸುತ್ತೇವೆ ನಾವು ಅದನ್ನೇ ಪಡೆದುಕೊಳ್ಳತ್ತೇವೆ. ಎಲ್ಲರು ಒಗ್ಗಟ್ಟಿನಿಂದ ಇಂದು ಹನುಮಾನ ದೇವರ ಜಾತ್ರೆ ಆಚರಿಸುತ್ತವೆ. ನಾನು ನನ್ನದು ಅನ್ನುವ ಮೋಹವಿಲ್ಲ. ಎಲ್ಲರು ಒಂದೇ ಎನ್ನುವ ಭಾವ ಎಲ್ಲರಲಿದೆ ಎಂದು ತಿಳಿಸಿದರು.ಕಂಬ ನಿಲ್ಲಿದ ನಂತರ ಧರೇಪ್ಪ ಚಿಕ್ಕೋಡಿ ಅವರಿಂದ ಅವಲಕ್ಕಿ ಪ್ರಸಾದ ವಿತರಣೆ ನಡೆಯಿತ್ತು. ಗ್ರಾಮ ಪಂಚಾಯತಿ ಸದಸ್ಯ ಸಿದ್ದು ಹಳ್ಳಿ, ಶಿವಾನಂದ ನೇಮಗೌಡ, ಬಿ.ಆರ್.ಡಂಗಿ, ಸತ್ಯಪ್ಪ ಬಿರಾದಾರ, ಸಾಬು ತೇಲಿ, ಮನೋಹರ ಜಂಬಗಿ, ಯಲ್ಲಪ್ಪ ಪಡಸಲಗಿ, ರಾವಸಾಬ ಬಿರಾದಾರ, ಭೀಮಪ್ಪ ಚಮಕೇರಿ, ರಾಮಚಂದ್ರ ಬಿಜ್ಜರಗಿ, ರೇವಪ್ಪ ತೇಲಿ, ಚನ್ನಪ್ಪ ಕಾಗವಾಡ, ಪರಶು ಬಿರಾದಾರ, ಹಣಮಂತ ಪಡಸಲಗಿ, ಸುನಿಲ ತೇಲಿ ಇದ್ದರು.