ಹರದೂರು ಗ್ರಾಮದ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಸಮಿತಿ ವತಿಯಿಂದ ಆದಿನಾಗಬ್ರಹ್ಮ ಮೊಗೇರ ದೈವಗಳ ಹಾಗೂ ಕೊರಗ ತನಿಯ ದೈವದ ಹಾಗೂ ಮಂತ್ರವಾದಿ ಗುಳಿನಗ 86ನೇ ನೇಮೋತ್ಸವ ಶನಿವಾರ ಮತ್ತು ಭಾನುವಾರ ನಡೆಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಹರದೂರು ಗ್ರಾಮದ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಸಮಿತಿ ವತಿಯಿಂದ ಆದಿನಾಗಬ್ರಹ್ಮ ಮೊಗೇರ ದೈವಗಳ ಹಾಗೂ ಕೊರಗ ತನಿಯ ದೈವದ ಹಾಗೂ ಮಂತ್ರವಾದಿ ಗುಳಿನಗ 86ನೇ ನೇಮೋತ್ಸವ ಶನಿವಾರ ಮತ್ತು ಭಾನುವಾರ ನಡೆಯಿತು.ಏ. 3ರಂದು ಗೊನೆ ಕಡಿದು, ಧ್ವಜಾರೋಹಣ ನಡೆಸುವ ಮೂಲಕ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಲಾಯಿತು.ಏ. 9 ಗಣ ಹೋಮ, 11ರಂದು ಆಯುಧ ಪೂಜೆ, ನಿತ್ಯ ಪೂಜೆ ಮತ್ತು ಭಂಡಾರ ಹೊರಡುವ ಮೂಲಕ ನೇಮೋತ್ಸವಕ್ಕೆ ಚಾಲನೆ ದೊರೆಯಿತು.ಸಂಜೆ ಮಂತ್ರವಾದಿ ಗುಳಿಗನ ನೇಮ ನಡೆಯಿತು. ರಾತ್ರಿ ಆದಿನಾಗಬ್ರಹ್ಮ ಮೊಗೇರ ದೈವಗಳ ಆದಿಮಾಯೆ ತನ್ನಿ ಮಾನಿಗ ಗರಡಿ ಇಳಿಯಿತು. 2.30ಕ್ಕೆ ಆದಿ ಮಾಯೆ ತನಿ ಮಾನಿಗ ಗರಡಿ ಇಳಿಯುವ ಕಾರ್‍ಯಕ್ರಮ ನಡೆಯಿತು. ಭಾನುವಾರ ಬೆಳಗ್ಗೆ ಕೊರಗ ತನಿಯ ನೇಮೋತ್ಸವ ನಡೆಯಿತು.
ದೈವಸ್ಥಾನ ಸಮಿತಿ ಅಧ್ಯಕ್ಷ ಬಿ. ರಾಜು, ಉಪಾಧ್ಯಕ್ಷ ಬಿ.ಎಸ್. ಆನಂದ, ಕಾರ್‍ಯದರ್ಶಿ ಎನ್.ಎಸ್. ನವೀನ, ಖಜಾಂಚಿ ಅಣ್ಣಿ, ಸಮಿತಿ ಪದಾಧಿಕಾರಿಗಳಾದ ಎಂ.ಪಿ. ದೇವಪ್ಪ, ಗೌತಮ್ ಶಿವಪ್ಪ, ದಿನೇಶ್, ದೇವಾಲಯದ ಪ್ರಧಾನ ಪೂಜಾರಿಗಳಾದ ಯೋಗೇಂದ್ರ, ಮಂಜು, ಸತೀಶ, ರವಿ, ಪಿ.ಕೆ. ಸುಂದರ, ಮೊಣ್ಣಪ್ಪ ಪೂಜಾರಿ ಉಪಸ್ಥಿತರಿದ್ದರು.