ಸಾರಾಂಶ
ನಗರದಲ್ಲಿ ಸೆ. 22ರಿಂದ ಪ್ರಾರಂಭವಾಗುವ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ ಕಾರ್ಯಕ್ರಮದ ಎಲ್ಲಾ ಸಿದ್ಧತೆಗಳು ಮುಗಿದಿದ್ದು, ಈ ಕಾರ್ಯಕ್ರಮಕ್ಕೆ ಹಾರಕೂಡ ಶ್ರೀಗಳ ದೇಣಿಗೆ ಬಹುದೊಡ್ಡದಾಗಿದೆ ಎಂದು ಶಾಸಕ ಶರಣು ಸಲಗರ ತಿಳಿಸಿದರು.
ಕನ್ನಡಪ್ರಭ ವಾರ್ತ ಬಸವಕಲ್ಯಾಣ
ನಗರದಲ್ಲಿ ಸೆ. 22ರಿಂದ ಪ್ರಾರಂಭವಾಗುವ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ ಕಾರ್ಯಕ್ರಮದ ಎಲ್ಲಾ ಸಿದ್ಧತೆಗಳು ಮುಗಿದಿದ್ದು, ಈ ಕಾರ್ಯಕ್ರಮಕ್ಕೆ ಹಾರಕೂಡ ಶ್ರೀಗಳ ದೇಣಿಗೆ ಬಹುದೊಡ್ಡದಾಗಿದೆ ಎಂದು ಶಾಸಕ ಶರಣು ಸಲಗರ ತಿಳಿಸಿದರು.ಅವರು ಶನಿವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀಗಳು ಒಂದೇ ದಿನ ₹57 ಲಕ್ಷ ಸೇರಿದಂತೆ ಸುಮಾರು 1 ಕೋಟಿ ರು. ಸಂಗ್ರಹವಾಗಿದೆ. ಸಮ್ಮೇಳನಕ್ಕೆ 2 ಕೋಟಿ ರು. ಖರ್ಚು ಬರಲಿದೆ ಸೆ.22 ರಿಂದ ಅಕ್ಟೋಬರ್ 2ರ ವರೆಗೆ ನಡೆಯುವ ದಸರಾ ಧರ್ಮ ಸಮ್ಮೇಳನ ಬಹುದೊಡ್ಡ ಕಾರ್ಯಕ್ರಮವಾಗಿದ್ದು ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರದ ನಾಲ್ವರು ಸಚಿವರು ಭಾಗವಹಿಸುವುದು ವಿಶೇಷವಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್ ಅಲ್ಲದೇ ಸ್ಥಳೀಯ ಎಲ್ಲಾ ಶಾಸಕರು, ಮಾಜಿ ಶಾಸಕರು ಉಪಸ್ಥಿತರಿರಲಿದ್ದಾರೆ ಎಂದರುಹಾರಕೂಡ ಚನ್ನವೀರ ಶಿವಾಚಾರ್ಯರು ಮಾತನಾಡಿ, ಈ ಕಾರ್ಯಕ್ರಮದ ವಿಶೇಷ ಎಂದರೆ ರಂಭಾಪುರಿ ಜಗದ್ಗುರುಗಳ ಈ ದಸರಾ ಸಮ್ಮೇಳನ ಕಾರ್ಯ ಕ್ರಮದಲ್ಲಿ ಬಸವಣ್ಣನವರ ಭಾವಚಿತ್ರ ಹಾಕಿರುವುದು ಇದೇ ಪ್ರಥಮವಾಗಿದೆ. ಹೀಗಾಗಿ ಇದು ವಿಶೇಷವಾಗಿದೆ ಎಂದರು.
ಗವಿಮಠದ ರುದ್ರಮುನಿ ಶಿವಾಚಾರ್ಯರು, ಜಗನ್ನಾಥ ಪಾಟೀಲ ಮಂಠಾಳ, ಸುರೇಶ ಸ್ವಾಮಿ, ಸುನೀಲ ಪಾಟೀಲ, ಕಲ್ಪನಾ ಶೀಲವಂತ, ಸಿದ್ದು ಬಿರಾದಾರ ಮುಂತಾದವರು ಪತ್ರಿಕಾ ಗೋಷ್ಠಿಯಲ್ಲಿದ್ದರು.