ಅಂಗಡಿ ತೆರವಿಗೆ ಹರಳಯ್ಯ ಸಮಾಜ ಆಕ್ರೋಶ

| Published : Nov 18 2024, 12:18 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಪಟ್ಟಣದಲ್ಲಿ ನಡೆದ ಅತಿಕ್ರಮಣ ತೆರವು ಕಾರ್ಯಾಚರಣೆ ವೇಳೆ ನಮ್ಮ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ಬಸ್ ನಿಲ್ದಾಣದ ಎದುರಿಗಿನ ಹರಳಯ್ಯ ಸಮಾಜದವರ ಗೂಡಂಗಡಿ ಮಾಲೀಕರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಉಪವಿಭಾಗಾಧಿಕಾರಿ ಗುರುನಾಥ ದಡ್ಡಿ ಭೇಟಿ ನೀಡಿ ಧರಣಿ ನಿರತರ ಅಹವಾಲು ಆಲಿಸಿ ಮನವೊಲಿಕೆಗೆ ಯತ್ನಿಸಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಪಟ್ಟಣದಲ್ಲಿ ನಡೆದ ಅತಿಕ್ರಮಣ ತೆರವು ಕಾರ್ಯಾಚರಣೆ ವೇಳೆ ನಮ್ಮ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ಬಸ್ ನಿಲ್ದಾಣದ ಎದುರಿಗಿನ ಹರಳಯ್ಯ ಸಮಾಜದವರ ಗೂಡಂಗಡಿ ಮಾಲೀಕರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಉಪವಿಭಾಗಾಧಿಕಾರಿ ಗುರುನಾಥ ದಡ್ಡಿ ಭೇಟಿ ನೀಡಿ ಧರಣಿ ನಿರತರ ಅಹವಾಲು ಆಲಿಸಿ ಮನವೊಲಿಕೆಗೆ ಯತ್ನಿಸಿದರು.

ಈ ವೇಳೆ ಮಾತನಾಡಿದ ಉಪವಿಭಾಗಾಧಿಕಾರಿ ಗುರುನಾಥ ದಡ್ಡಿ, ಅತಿಕ್ರಮಣ ತೆರವು ಕಾರ್ಯಾಚರಣೆಯಲ್ಲಿ ತಮಗೆ ಅನ್ಯಾಯವಾಗಿದ್ದರೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಧರಣಿ ಸ್ಥಳ ಮುಖ್ಯ ರಸ್ತೆಯಾಗಿರುವುದಿಂದ ಧರಣಿಯಿಂದ ಹಿಂದಕ್ಕೆ ಸರಿಯಿರಿ, ತಮ್ಮ ಸಹಾಯಕ್ಕೆ ಜಿಲ್ಲಾಡಳಿತ ಇರಲಿದೆ ಎಂದು ಭರವಸೆ ನೀಡಿದರು.

ಈ ವೇಳೆ ಗೋಪಾಲ ವಿಜಾಪೂರ ಮಾತನಾಡಿ, 6 ದಶಕಗಳಿಂದ ಉದ್ಯೋಗ ಮಾಡಿಕೊಂಡಿದ್ದೇವೆ. ೧೯೮೩ರಲ್ಲಿಯೇ ಪುರಸಭೆಯಿಂದ ಅನುಮತಿ ನೀಡಲಾಗಿದೆ. ನಮ್ಮ ಕುಟುಂಬಕ್ಕೆ ಆಧಾರವಾಗಿದ್ದ ಈ ಅಂಗಡಿಗಳನ್ನು ತೆರವುಗೊಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಎಸಿ ಗುರುನಾಥ, ಅಂಗಡಿ ದಾಖಲೆಗಳನ್ನು ಸಲ್ಲಿಸಿ, ಪರಿಶೀಲಿಸಿ ನ್ಯಾಯ ಒದಗಿಸಿಕೊಡುತ್ತೇವೆ. ಈ ಜಾಗದ ಮೇಲೆ ನ್ಯಾಯಾಲಯದ ತಡೆಯಾಜ್ಞೆ ಇರುವುದರಿಂದ ಯಾವುದೇ ತಿರ್ಮಾನ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ನಿಮ್ಮ ಸಂಕಷ್ಟಕ್ಕೆ ನಾವು ಮತ್ತು ಜಿಲ್ಲಾಡಳಿತ ಸ್ಪಂದಿಸುತ್ತೇವೆ. ಪ್ರತಿಭಟನೆ ಹಿಂಪಡೆದು ಸೂಕ್ತ ದಾಖಲೆ ನೀಡಿ, ನಿಮಗೆ ಸ್ಥಳದ ಜೊತೆಗೆ ನ್ಯಾಯ ನೀಡಲಾಗುವುದು. ಮುಖ್ಯಾಧಿಕಾರಿಗಳು ತಪ್ಪು ಮಾಡಿದ್ದರೆ ಖಂಡಿತ ಕ್ರಮವಾಗುತ್ತದೆ ಎಂದು ಹೇಳಿದರು.

ಉಪ ವಿಭಾಗಾಧಿಕಾರಿ ಗುರನಾಥ ದಡ್ಡಿ, ಪುರಸಭೆ ಯೋಜನಾ ನಿರ್ದೇಶಕ ಬದರುದ್ದೀನ್ ಸೌದಾಗರ, ತಹಸೀಲ್ದಾರ್‌ ಕೀರ್ತಿ ಚಾಲಕ, ಡಿಎಸ್‌ಪಿ ಬಲ್ಲಪ್ಪ ನಂದಗಾವಿ ಅವರು ಮನವೊಲಿಕೆ ಸಾಧ್ಯವಾಗದ ಹಿನ್ನಲೆಯಲ್ಲಿ ಎಲ್ಲ ಅಧಿಕಾರಿಗಳು ಸ್ಥಳದಿಂದ ತೆರಳಿದರು.

ಈ ಸಮಯದಲ್ಲಿ ಪಿಎಸ್‌ಐ ರಾಮನಗೌಡ ಸಂಕನಾಳ, ಅಪರಾಧ ವಿಭಾಗ ಪಿಎಸ್‌ಐ ಆರ್.ಎಸ್.ಭಂಗಿ, ಧರಣಿ ನಿರತರಾದ ಹರಳಯ್ಯ ಸಮಾಜದ ಮುಖಂಡರಾದ ಕೃಷ್ಣಾ ಮಬ್ರುಮಕರ, ಚಂದ್ರಶೇಖರ ವಿಜಾಪೂರ, ರಾಜು ವಿಜಾಪೂರ, ಕಾಶೀನಾಥ ಮಬ್ರುಮಕರ, ಜಗದೀಶ ವಿಜಾಪೂರ, ಪರಶುರಾಮ ವಿಜಾಪೂರ, ರಾಮಕೃಷ್ಣ ವಿಜಾಪೂರ, ಬಸವರಾಜ ವಿಜಾಪೂರ, ಗೋಪಾಲ ವಿಜಾಪೂರ, ನಾಗರಾಜ ವಿಜಾಪೂರ, ಮದರೆಮ್ಮ ವಿಜಾಪೂರ, ಸೌಮ್ಯಾ ವಿಜಾಪೂರ, ಸುನಂದಾ ವಿಜಾಪೂರ, ಪ್ರಿಯಾ ಮಬ್ರುಮಕರ, ನಾಗಮ್ಮ ವಿಜಾಪೂರ, ಯಮನವ್ವ ವಿಜಾಪೂರ, ನೀಲಮ್ಮ ದುತ್ತರಗಿ, ಮಂಜುಳಾ ಬೆನಕನಹಳ್ಳಿ, ಮತ್ತು ಶೌಕತ್ ಲಾಹೋರಿ, ಫವನ ಅಗರವಾಲ, ಅಬ್ದುಲ್ ರೆಹಮಾನ ಹುಣಶ್ಯಾಳ ಇದ್ದರು.-

ಕೋಟ್‌

ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಅತಿಕ್ರಮಣ ತೆರವು ಹೆಸರಿನಲ್ಲಿ ಪುರಸಭೆ ಮುಖ್ಯಾಧಿಕಾರಿಗಳು ಯಾವುದೇ ದಾಖಲೆಗಳನ್ನು ಪರಿಶೀಲಿಸದೇ ಒಡೆದು ಹಾಕಿ ದೌರ್ಜನ್ಯವ್ಯಸಗಿದ್ದಾರೆ. ಅವರನ್ನು ಕೂಡಲೇ ಅಮಾನತು ಮಾಡಬೇಕು. ನಮಗೆ ಮರಳಿ ಬದುಕು ಕಟ್ಟಿಕೊಳ್ಳಲು ಆಗಿರುವ ಹಾನಿ ಭರಸಿ ಅಂಗಡಿಗಳನ್ನು ಇದ್ದ ಜಾಗದಲ್ಲಿಯೇ ಇಟ್ಟುಕೊಡಬೇಕು, ಅಲ್ಲಿವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ.

ಗೋಪಾಲ ವಿಜಾಪೂರ, ಸಮಾಜದ ಮುಖಂಡ