ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಭವಿಷ್ಯದ ಬದುಕು ಸುಂದರತೆಯಿಂದ ಸಾಗಲು ಸಂಸ್ಕಾರ ರೂಢಿಸಿಕೊಳ್ಳಬೇಕು, ವಿದ್ಯಾರ್ಥಿಗಳು ಶೖಕ್ಷಣಿಕ ಸಾಧನೆಗೆ ನಿರಂತರ ಪರಿಶ್ರಮದಿಂದ ಓದುವ ಹವ್ಯಾಸ ಮಾಡಿಕೊಂಡು ಗಳಿಸಿಕೋಳ್ಳಬೇಕು ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಹಿರಿಯ ನ್ಯಾಯವಾದಿ ನಾಗರಾಜ ಮಸ್ಕಿ ಹೇಳಿದರು.ಪಟ್ಟಣದ ಸಾನ್ವಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್(ರಿ.), ಆನೆಹೊಸೂರು ವತಿಯಿಂದ ನಡೆಸಲಾಗುತ್ತಿರುವ ಡಾ. ಸುಧಾಮೂರ್ತಿ ಇನ್ಫೋ ಪದವಿ ಪೂರ್ವ ಹಾಗೂ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ 2026–27ನೇ ಸಾಲಿನ ಪ್ರಥಮ ವರ್ಷದ ಪದವಿ ಪೂರ್ವ ಹಾಗೂ ಮಹಿಳಾ ಪದವಿ ವಿದ್ಯಾರ್ಥಿಗಳ ಸ್ವಾಗತ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿಗಳು ಹಿರಿಯರಿಗೆ ವಿಧೇಯರಾಗಿರಬೇಕು. ವಿದ್ಯಾರ್ಥಿ ಬದುಕಿಗೆ ವಿನಯವೇ ಭೂಷಣ. ಪರಿಶ್ರಮದಿಂದ ಅಧ್ಯಯನ ಮಾಡಿದರೆ ಅದ್ವೀತಿಯ ಸಾಧನೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿಧ್ಯಾರ್ಥಿಗಳು ಪರಿಶ್ರಮದಿಂದ ಅಧ್ಯಯನ ಮಾಡಿದರೆ ಸಾಧನೆಯ ಮೇರು ಶಿಖರದ ಮೇಲೆ ಕೀರ್ತಿಯ ಕಳಸ ಆಗುತ್ತಿರಿ ಎಂದು ವಿಧ್ಯಾರ್ಥಿಗಳಿಗೆ ಹುರಿದುಂಬಿಸಿದರು. ಸಮಾರಂಭದ ಸಾನಿಧ್ಯ ಮುರುಘೇಂದ್ರ ಶಿವಯೋಗಿಗಳು ವಹಿಸಿದ್ದರು.ಈ ವೇಳೆ ಸಂಸ್ಥೆಯ ಅಧ್ಯಕ್ಷೆ ಅರ್ಪಿತಾ ಭಾವಿಮನಿ, ಪಿಐ ಹೊಸಕೇರಪ್ಪ, ಎಇಇ ಕೆಂಚಪ್ಪ ಭಾವಿಮನಿ, ಸಂಗಪ್ಪ ಭಾವಿಮನಿ, ಉಪನ್ಯಾಸಕರಾದ ಜ್ಯೋತಿ ಲಕ್ಷ್ಮೀ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಹನುಮಂತ ಕನ್ನಾಳ, ಆದೇಶ ನಗನೂರು, ಆಂಜನೇಯ, ರಮೇಶ ವೆಂಕಟಪುರ, ಬಸಲಿಂಗಪ್ಪ ಗುಡಿಮನಿ, ಸಂಗಮೇಶ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು.
---
07ಕೆಪಿಎಲ್ಎನ್ ಜಿ01 : ಲಿಂಗಸುಗೂರು ಪಟ್ಟಣದ ಸಾನ್ವಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್(ರಿ.), ಯಿಂದ ನಡೆಸಲಾಗುತ್ತಿರುವ ಡಾ. ಸುಧಾಮೂರ್ತಿ ಇನ್ಫೋ ಪದವಿ ಪೂರ್ವ ಹಾಗೂ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಹಾಗೂ ಮಹಿಳಾ ಪದವಿ ವಿದ್ಯಾರ್ಥಿಗಳ ಸ್ವಾಗತ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟನೆ ಮಾಡಿದ ಗಣ್ಯರು.
--