ಹರ್ಡೇಕರ ಮಂಜಪ್ಪನವರ ಬದುಕು ಅನುಕರಣೀಯ-ಸ್ವಾಮೀಜಿ

| Published : Feb 24 2025, 12:35 AM IST

ಸಾರಾಂಶ

ಹರ್ಡೇಕರ ಮಂಜಪ್ಪನವರು ಅಪ್ಪಟ ಗಾಂಧಿವಾದಿಗಳಾಗಿದ್ದರು. ಸಮಾಜದಲ್ಲಿ ಮೌಲ್ಯಗಳನ್ನು ಬೆಳೆಸುವಲ್ಲಿ, ಬಿತ್ತುವಲ್ಲಿ ತಮ್ಮ ಬದುಕನ್ನು ಮುಡಿಪಾಗಿಟ್ಟರು. ಹರ್ಡೇಕರ ಮಂಜಪ್ಪನವರ ಬದುಕು ಮತ್ತು ಜೀವನಾದರ್ಶಗಳು ಅನುಕರಣೀಯ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ಗದಗ: ಹರ್ಡೇಕರ ಮಂಜಪ್ಪನವರು ಅಪ್ಪಟ ಗಾಂಧಿವಾದಿಗಳಾಗಿದ್ದರು. ಸಮಾಜದಲ್ಲಿ ಮೌಲ್ಯಗಳನ್ನು ಬೆಳೆಸುವಲ್ಲಿ, ಬಿತ್ತುವಲ್ಲಿ ತಮ್ಮ ಬದುಕನ್ನು ಮುಡಿಪಾಗಿಟ್ಟರು. ಹರ್ಡೇಕರ ಮಂಜಪ್ಪನವರ ಬದುಕು ಮತ್ತು ಜೀವನಾದರ್ಶಗಳು ಅನುಕರಣೀಯ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ಅ‍ವರು ಲಿಂಗಾಯತ ಪ್ರಗತಿಶೀಲ ಸಂಘದ 2733ನೇ ಶಿವಾನುಭವ ಸಾನ್ನಿಧ್ಯ ವಹಿಸಿ ಮಾತನಾಡಿದರು. ಜನರಿಗೆ ಒಳ್ಳೆಯದನ್ನು ಕೊಡುವುದೇ ಶಿವಾನುಭವ. ನಡೆನುಡಿಗಳನ್ನು ಪರಿಶುದ್ಧವಾಗಿಟ್ಟುಕೊಂಡಾಗ ಮನಸ್ಸು ಒಳ್ಳೆಯದನ್ನು ಯೋಚಿಸುತ್ತದೆ. ಬೆಳಗಾವಿಯ ಕಾಂಗ್ರೆಸ್ ಸಭೆಯಲ್ಲಿ ಮೊಟ್ಟ ಮೊದಲು ಬಸವಣ್ಣನವರ ವಚನಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಗಾಂಧೀಜಿಯವರಿಗೆ ಕೊಡುವ ಮೂಲಕ ಪರಿಚಯಿಸಿದರು. ಮಂಜಪ್ಪನವರು ಗಾಂಧೀಜಿಯವರ ಪ್ರತಿರೂಪ. ಸಮಾಜ ಸೇವೆಗಾಗಿ ಮದುವೆಯಾಗದೇ ಬದುಕಿದರು. ಅಂಗಗುಣಗಳನ್ನು ತ್ಯಾಗ ಮಾಡಿ, ಲಿಂಗಗುಣ ಹೊಂದಿ ನಿಜವಾದ ಶರಣರಾಗಿ ಧರ್ಮ ಪಾಲನೆ ಮಾಡಿದರು ಎಂದರು. ಸಮ್ಮುಖವನ್ನು ವಹಿಸಿದ್ದ ಶಾಂತಲಿಂಗ ಶ್ರೀಗಳು ಭೈರನಟ್ಟಿ, ಶಿರೋಳ ಮಾತನಾಡಿ, ಹರ್ಡೇಕರ ಮಂಜ್ಜಪ್ಪನವರು ಬನವಾಸಿಯಲ್ಲಿ ಜನಿಸಿ, ಅಲ್ಲಿಯೇ ಶಾಲೆ ಕಲಿತು, ಕಲಿತ ಶಾಲೆಯಲ್ಲಿಯೇ ಶಿಕ್ಷಕರಾಗಿ ಸಮಾಜದ ಏಳ್ಗೆಗಾಗಿ ಅವರು ಅವಿರತ ಶ್ರಮಿಸಿದರು. ಹರ್ಡೇಕರ ಮಂಜಪ್ಪನವರು ಕೊಟ್ಟ ಬಸವಣ್ಣನವರ ಇಂಗ್ಲಿಷನಲ್ಲಿಯ ವಚನಗಳನ್ನು ಗಾಂಧೀಜಿಯವರು ನೋಡಿ, ಎಂಟುನೂರು ವರ್ಷರ್ಗಳ ಹಿಂದೆ ಅದ್ಭುತವಾದ ಕೆಲಸವನ್ನು ಮಾಡಿದ್ದನ್ನು ನೋಡಿ, ಬಸವಣ್ಣನವರು ಈಗ ಇದ್ದಿದ್ದರೇ ನಾನು ಅವರ ಕಾರ್ಯಕ್ಕೆ ಹೆಗಲು ಕೊಡುತ್ತಿದ್ದೆ ಎಂದಿದ್ದರಂತೆ. ಫ.ಗು. ಹಳಕಟ್ಟಿಯವರು, ಡೆಪ್ಯುಟಿ ಚನ್ನಬಸಪ್ಪನವರು, ಹರ್ಡೇಕರ್ ಮಂಜಪ್ಪನವರು ಲಿಂಗಾಯತ ಧರ್ಮಕ್ಕೆ ಮೇರು ವ್ಯಕ್ತಿತ್ವ ತಂದು ಕೊಟ್ಟವರು ಎಂದರು. ಉಪನ್ಯಾಸಕರಾಗಿ ಆಗಮಿಸಿದ ವಿಜಯಪುರದ ನಿವೃತ್ತ ಪ್ರಾಚಾರ್ಯ ಬಸವರಾಜ ಕೆಂಧೂಳಿ ಸಾರ್ಥಕ ಜೀವನದ ಸೂತ್ರಗಳು ಬಗ್ಗೆ ಮಾತನಾಡಿ, ಹಲವಾರು ಬಸವಣ್ಣನವರ ವಚನಗಳನ್ನು ಹಾಡಿದರು. , ಜೀವನದ ಸಪ್ತ ಸೂತ್ರಗಳು ಹೇಗೆ ವಚನಗಳಲ್ಲಿ ಅಡಕವಾಗಿವೆ ಎಂದು ತಿಳಿಸಿದರು. ಹಾಗೆಯೇ ಸಮಾಜದಲ್ಲಿ ಜಾಗ್ರತಿ ಮೂಡಿಸುವ ಹಲವಾರು ಗೀತೆಗಳನ್ನು ಹಾಡಿದರು. ದಾಸೋಹ ಸೇವೆಯನ್ನು ಶಾಂತಾದೇವಿ ಗೌಡರ ಹಾಗೂ ಕುಟುಂಬ ವರ್ಗ ಎಚ್. ವನಜಾಕ್ಷಿ ಹಾಗೂ ಎಚ್. ಮಹೇಂದ್ರ ಬೆಂಗಳೂರ ಹಾಗೂ ತೋಂಟದಾರ್ಯ ಮಠ ಶಿರೋಳದ ಜಾತ್ರಾ ಮಹೋತ್ಸವ ಸಮಿತಿ 2025 ಅಧ್ಯಕ್ಷ ಶಿವಾನಂದ ಯಲಬಳ್ಳಿ, ಉಪಾಧ್ಯಕ್ಷ ಶ್ರೀಧರ ಶಿಪ್ರಿ, ಕಾರ್ಯದರ್ಶಿ ಬಸವರಾಜ ಕುರಿ, ಸಹ ಕಾರ್ಯದರ್ಶಿ ಪರಶುರಾಮ ಮಡಿವಾಳರ ಹಾಜರಿದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ.ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹಚೇರ್ಮನ್ ಶಿವಾನಂದ ಹೊಂಬಳ ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು. ವಿದ್ಯಾ ಗಂಜಿಹಾಳ ಸ್ವಾಗತಿಸಿದರು. ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಪರಿಚಯಿಸಿದರು. ಅಶೋಕ್ ಹಾದಿ ಹಾಗೂ ಡಾ.ಉಮೇಶ ಪುರದ ನಿರೂಪಿಸಿದರು.