20 ರಿಂದ ವಾಸವಿ ಶಾಲೆ ಆವರಣದಲ್ಲಿ ಹರಿದಾಸ ಹಬ್ಬ

| Published : Jan 17 2024, 01:45 AM IST

20 ರಿಂದ ವಾಸವಿ ಶಾಲೆ ಆವರಣದಲ್ಲಿ ಹರಿದಾಸ ಹಬ್ಬ
Share this Article
  • FB
  • TW
  • Linkdin
  • Email

ಸಾರಾಂಶ

ಜನವರಿ 20 ರಿಂದ 27ರವರೆಗೆ 8 ದಿನಗಳ ಕಾಲ ನಗರದ ವಾಸವಿ ಶಾಲಾ ಆವರಣದಲ್ಲಿ ಹರಿದಾಸರುಗಳ ಸ್ಮರಣೆ ನಡೆಯಲಿದೆ ಎಂದು ಟ್ರಸ್ಟ್‌ ತಿಳಿಸಿದೆ.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಶ್ರೀ ಹರಿವಾಯುಗುರು ಸೇವಾ ಟ್ರಸ್ಟ್‌ ವತಿಯಿಂದ ಶ್ರೀ ಕನಕಪುರಂದರಾದಿ ಹರಿದಾಸರುಗಳ ಸ್ಮರಣೆಯ ಹರಿದಾಸ ಹಬ್ಬ- 2024 ಜನವರಿ 20 ರಿಂದ 27ರವರೆಗೆ ನಗರದ ವಾಸವಿ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ಟಿ.ಕೆ.ನಾಗರಾಜರಾವ್ ತಿಳಿಸಿದ್ದಾರೆ.

ಹರಿದಾಸ ಹಬ್ಬದಲ್ಲಿ ಪಾರಾಯಣ, ಭಜನೆ, ಉಪನ್ಯಾಸ, ಪವನ-ಹೋಮ ಶ್ರೀರಾಮಡೋಲೋತ್ಸವ ಆರ್ಶೀವಚನ, ದಾಸ ಲಹರಿ ಶ್ರೀ ರಾಮನ ಸ್ತುತಿ, ಸ್ತೋತ್ರ, ಪ್ರವಚನ, ಭವ್ಯ ಶೋಭಾಯಾತ್ರೆ, ಶ್ರೀರಾಮತಾರಕ ಹೋಮ ಕಾರ್ಯಕ್ರಮಗಳು ನಡೆಯಲಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಭೀಮನಕಟ್ಟೆಯ ಶ್ರೀ ಭೀಮಸೇತು ಮುನಿವೃಂದ ಮಠದ ಶ್ರೀ ರಘುವರೇಂದ್ರತೀರ್ಥ ಶ್ರೀಗಳು ವಹಿಸಲಿದ್ದಾರೆ.

ಜ.20ರ ಸಂಜೆ 6.30ಕ್ಕೆಮ ವಾಸವಿ ಶಾಲಾ ಆವರಣದಲ್ಲಿ ಹರಿದಾಸ ಹಬ್ಬದ ಉದ್ಘಾಟನೆ ನಡೆಯಲಿದ್ದು, ಬೆಂಗಳೂರಿನ ರೀ ಪೂರ್ಣಪ್ರಜ್ಞ ವಿದ್ಯಾ ಪೀಠದ ಅಧ್ಯಾಪಕ ಕೃಷ್ಣರಾಜ ಕುತ್ವಾಡಿ ಉಪನ್ಯಾಸ ನೀಡಲಿದ್ದಾರೆ. ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್‌. ಮಂಜುನಾಥ್, ಶ್ರೀ ರಾಘವೇಂದ್ರಸ್ವಾಮಿ ಮಠದ ವ್ಯವಸ್ಥಾಪಕ ಪ್ರಾಣೇಶಾಚಾರ್ಯ, ಉತ್ತರಾಧಿ ಮಠದ ವ್ಯವಸ್ಥಾಪಕ ಉಪಾಧ್ಯ ಪ್ರಭಂಜನಾಚಾರ್ಯ ಕೂಸಸೂರು, ನಗರಸಭೆ ಸದಸ್ಯ ಹರೀಶ್, ಬಡಗನಾಡು ಬ್ರಾಹ್ಮಣ ಸಂಘದ ಅಧ್ಯಕ್ಷ ಶೇಷಗಿರಿ ರಾವ್, ಗುರುರಾಜ ಸೇವಾ ಸಂಘದ ಅಧ್ಯಕ್ಷ ವೇದವ್ಯಾಸಚಾರ್ಯ, ವೃಷ್ಣವ ಸಭಾದ ಅಧ್ಯಕ್ಷ ಜಗದೀಶ್ ಭಾಗವಹಿಸಲಿದ್ದಾರೆ.

ಪ್ರತಿ ದಿನ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಬೆಳಿಗ್ಗೆ 8 ರಿಂದ ಮಹಾಭಾರತ ತಾತ್ಪರ್ಯ ನಿರ್ಣಯಗಳ ಬಗ್ಗೆ ಪಾಠ-ಪ್ರವಚನ 9ರಿಂದ ಶ್ರೀಗಳು ಗೃಹ ಭೇಟಿ ಪಾದಪೂಜಾ ಕಾರ್ಯಕ್ರಮ, 10.30ರಿಂದ ಸಂಸ್ಥಾನ ಪೂಜೆ ನಡೆಯಲಿದೆ. ಇದ ರೊಂದಿಗೆ ಪ್ರತಿ ದಿನ ಸಂಜೆ ವಾಸವಿ ಶಾಲೆಯ ಆವರಣದಲ್ಲಿ ಸಂಜೆ 6ರಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಸ್ತೋತ್ರ ಪಾರಾಯಣ, 6.30ರಿಂದ ಶ್ರೀ ರಾಮನಾಮ ಭಜನೆ ಸಂಕೀರ್ತನೆ 7ರಿಂದ ಅಯೋಧ ರಾಮನ ಬಗ್ಗೆ ಉಪನ್ಯಾಸ ನಡೆಯಲಿದ್ದು, 8 ರಿಂದ ಶ್ರೀಪಾದಂಗಳವರ ಅನುಗ್ರಹ ಅಮೃತವಾಣಿ ನಡೆಯಲಿದೆ.

ಜ.26 ರಂದು ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಲೋಕ ಕಲ್ಯಾಣಕ್ಕಾಗಿ ಶ್ರೀ ರಾಮ ತಾರಕ ಹೋಮ ನಡೆಯಲಿದೆ. ಬೆಳಿಗ್ಗೆ 5.30ಕ್ಕೆ ಪುಣ್ಯಾಹ, ಕಳಶ ಸ್ಥಾಪನೆ, ಹೋಮ 9.15ಕ್ಕೆ ಪೂರ್ಣಾಹುತಿ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30ರಿಂದ ಅಯೋಧ್ಯಾರಾಮನ ಭವ್ಯ ಶೋಭಾಯಾತ್ರೆ ನಡೆಯಲಿದ್ದು, ಪುಷ್ಪಾಲಂಕೃತ ರಜತ ರಥದಲ್ಲಿ ಶ್ರೀ ರಾಮಚಂದ್ರದೇವರ ವಿಗ್ರಹದೊಂದಿಗೆ ದಾಸವರೇಣ್ಯರ ಭಾವಚಿತ್ರ ಹಾಗೂ ಶ್ರೀಪಾದಂಗಳವರು ಭಾಗವಹಿಸಲಿದ್ದಾರೆ. ಯಾತ್ರೆ ಆನೆ ಬಾಗಿಲ ಬಳಿಯ ಶ್ರೀ ಸುವೃಷ್ಟಿ ಪ್ರಾಣದೇವರ ಸನ್ನಿಧಾನದಿಂದ ಪ್ರಾರಂಭವಾಗಿ ವಾಸವಿ ವಿದ್ಯಾ ಸಂಸ್ಥೆಯನ್ನು ತಲುಪಲಿದೆ. ಶೋಭಾ ಯಾತ್ರೆಯನ್ನು ಶಾಸಕ ಕೆ.ಸಿ.ವಿರೇಂದ್ರ ಹಾಗೂ ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್ ಉದ್ಘಾಟಿಸಲಿ ದ್ದಾರೆ. ಸಂಜೆ 6.30ರಿಂದ ಸಾಧನಾ ಸನ್ಮಾನ ಪ್ರವಚನ ಮಂಗಳ ಮಹೋತ್ಸವ ಸಂಜೆ 7 ಕ್ಕೆ ಶ್ರೀರಾಮ ಡೊಲೋತ್ಸವ ನಡೆಯಲಿದೆ.

ಜ.27ರ ಶನಿವಾರ ಬೆಳ್ಳಿಗೆ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀ ವಾಯುಸ್ತುತಿ ಪುನಃಶ್ಚರಣ ಹೋಮ, ಬೆಳಿಗ್ಗೆ 5.30ಕ್ಕೆ ಪುಣ್ಯಾಹ, ಕಳಶ ಸ್ಥಾಪನೆ, ಹೋಮ 9.15ಕ್ಕೆ ಪೂರ್ಣಾಹುತಿ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಕ್ಕೆ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಶ್ರೀರಾಮ ಸಂಕೀರ್ತನ ಶ್ರೀ ಬೃಂದಾವನ ಭಜನಾ ಮಂಡಲಿಯವರಿಂದ ಸಂಜೆ 6.30ಕ್ಕೆ 2024ರ ಹರಿದಾಸ ಹಬ್ಬದ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಆಶೋಕ ಹಾರನಹಳ್ಳಿ ಆಗಮಿಸಲಿದ್ದಾರೆ.