ಸಾರಾಂಶ
ಬೊಳ್ತಜೀರ ನೂತನ ಐನ್‌ಮನೆಯಲ್ಲಿ ಶ್ರೀ ವೆಂಕಟರಮಣ ದೇವರ ಹರಿಸೇವೆ ಹಾಗೂ ದೈವಗಳ ಕೋಲ ಶ್ರದ್ಧಾ ಭಕ್ತಿಯಿಂದ ಜರುಗಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಮೂರ್ನಾಡು ಗ್ರಾಮ ಪಂಚಾಯಿತಿಯ ಕಾಂತೂರು ಗ್ರಾಮದ ಬೊಳ್ತಜೀರ ನೂತನ ಐನ್ ಮನೆಯಲ್ಲಿ ಆಯೋಜಿಸಿದ ಶ್ರೀ ವೆಂಕಟರಮಣ ದೇವರ ಹರಿಸೇವೆ ಹಾಗೂ ದೈವಗಳ ಕೋಲ ಶ್ರದ್ಧಾ ಭಕ್ತಿಯಿಂದ ಜರುಗಿತು.ಐದು ವರ್ಷಕ್ಕೆ ಒಮ್ಮೆ ಜರುಗುವ ಹರಿಸೇವೆಯಲ್ಲಿ ಭಕ್ತಾದಿಗಳು 15 ಹರಕೆ ಸೇವೆಯನ್ನು ನೆರವೇರಿಸಿಕೊಟ್ಟರು. ಬಳಿಕ ವಂಶಪರಂಪರೆಯಿಂದ ನಡೆಸಿಕೊಂಡು ಬರುತ್ತಿರುವ ಕೊರತ್ತಿ, ಪೊಟ್ಟ ದೈವ, ಗುಳಿಗ, ಅಂಗರೆ, ಚೌಂಡಿ ದೈವ ಕೋಲಗಳು ಭಯ ಭಕ್ತಿಗಳಿಂದ ಸಾಂಪ್ರದಾಯಿಕವಾಗಿ ನೆರವೇರಿತು. ಈ ಸಂದರ್ಭ ನೆರದ ಭಕ್ತಾದಿಗಳು ವಿವಿಧ ಹರಕೆ ಕಾಣಿಕೆಗಳನ್ನು ಒಪ್ಪಿಸಿ ಪ್ರಸಾದ ಸ್ವೀಕರಿಸುವುದರೊಂದಿಗೆ ಪುನೀತ ಬಾವ ಹೊಂದಿದರು.
ಕಾರ್ಯಕ್ರಮ ಮುಖ್ಯಸ್ಥರಾದ ಸಿದ್ದಾರ್ಥ (ನಂದ) ಅವರ ಮಂದಾಳತ್ವದಲ್ಲಿ ಎಲ್ಲರ ಸಹಕಾರದೊಂದಿಗೆ ವಿಜೃಂಭಣೆಯಿಂದ ನೆರವೇರಿತು.