ಸಾಫ್ಟಾ, ಸಾರ್ಕ್ ಒಪ್ಪಂದದಿಂದ ಅಡಕೆ ಬೆಳೆಗಾರರಿಗೆ ತೊಂದರೆ: ದೀಪಕ ಹೆಗಡೆ

| Published : Oct 18 2024, 12:18 AM IST / Updated: Oct 18 2024, 12:19 AM IST

ಸಾಫ್ಟಾ, ಸಾರ್ಕ್ ಒಪ್ಪಂದದಿಂದ ಅಡಕೆ ಬೆಳೆಗಾರರಿಗೆ ತೊಂದರೆ: ದೀಪಕ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ರೈತರ ಜೀವನಾಡಿ ಅಡಕೆ ಕೃಷಿಯಾಗಿದ್ದು, ಬೆಳೆಗಾರರ ಹಿತದೃಷ್ಟಿ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿ ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು.

ಶಿರಸಿ: ಅಡಕೆ ಬೆಳೆಗಾರರು ಧಾರಣೆ ಕುಸಿತ, ಹವಾಮಾನ ವೈಪರೀತ್ಯದಿಂದ ನಷ್ಟ ಅನುಭವಿಸುತ್ತಿದ್ದರೆ ಕೇಂದ್ರ ಸರ್ಕಾರದ ಸಾಫ್ಟಾ ಮತ್ತು ಸಾರ್ಕ್ ಆಮದು ಒಪ್ಪಂದದಿಂದ ಹಲವಾರು ಸಮಸ್ಯೆಯಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರವು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ದೀಪಕ ಹೆಗಡೆ ದೊಡ್ಡೂರು ಆಗ್ರಹಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ರೈತರ ಜೀವನಾಡಿ ಅಡಕೆ ಕೃಷಿಯಾಗಿದ್ದು, ಬೆಳೆಗಾರರ ಹಿತದೃಷ್ಟಿ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿ ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು. ಆದರೆ ಕೇಂದ್ರ ಸರ್ಕಾರವು ಅನೇಕ ಲೋಪದೋಷಗಳನ್ನು ಮಾಡಿದ್ದು, ಅಡಕೆ ಆಮದು ನೀತಿಯಿಂದ ಅನೇಕ ತೊಂದರೆಯಾಗುತ್ತಿದೆ. ಸಾಫ್ಟಾ ಮತ್ತು ಸಾರ್ಕ್ ಒಪ್ಪಂದದಿಂದ ನೇಪಾಳ, ಬಾಂಗ್ಲಾ, ಶ್ರೀಲಂಕಾ, ಬರ್ಮಾ ದೇಶಗಳಲ್ಲಿ ದಾಸ್ತಾನಾಗಿರುವ ಅಡಕೆಯು ಕಳ್ಳ ಸಾಗಾಣಿಕೆ ಮೂಲಕ ಬರುತ್ತಿದೆ. ಶೇ. ೬೦ರಷ್ಟು ಕಳ್ಳ ಮಾರ್ಗದಲ್ಲಿ ಒಳನುಸಿಯುತ್ತಿದ್ದರೆ, ಅಧಿಕಾರಿಗಳ ಕರ್ತವ್ಯಲೋಪದಿಂದ ಶೇ. ೩೦ರಷ್ಟು ಬಂದರುಗಳ ಮೂಲಕ ದೇಶಕ್ಕೆ ಆಗಮಿಸುತ್ತಿದೆ. ಇದರಿಂದ ಅಡಕೆ ದರದಲ್ಲಿ ಸ್ಥಿರತೆ ಕಾಪಾಡಲು ಸಮಸ್ಯೆಯಾಗುತ್ತಿದೆ. ಆಮದು ನೀತಿಯಲ್ಲಿ ಬದಲಾವಣೆ ತಂದು ಬೆಳೆಗಾರರ ಹಿತ ಕಾಪಾಡಲು ಕೇಂದ್ರ ಸರ್ಕಾರ ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಒತ್ತಾಯಿಸಿದರು.ನಮ್ಮ ದೇಶಕ್ಕೆ ೧೮ ಸಾವಿರ ಟನ್ ಹಸಿ ಅಡಕೆ ಆಮದು ಆಗುತ್ತಿದೆ. ಬಂದರುಗಳಲ್ಲಿ ಯಾವ ಮಾನದಂಡದಲ್ಲಿ ನಿರ್ವಹಣೆ ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ಬಂದರುಗಳಲ್ಲಿ ಅಧಿಕಾರಿಗಳ ಲೋಪ ಹಾಗೂ ಭ್ರಷ್ಟಾಚಾರದಿಂದ ೧೫ರಿಂದ ೨೦ ಲಕ್ಷ ಟನ್ ಅಡಕೆ ಆಗಮದು ಆಗುತ್ತಿದೆ. ಕೇಂದ್ರ ಸರ್ಕಾರದ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ನಮ್ಮ ಕ್ಷೇತ್ರದ ಸಂಸದರನ್ನು ಒಳಗೊಂಡು ರಾಜ್ಯದ ಸಂಸದರು ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಜೈಶಂಕರ ಭೇಟಿಯಾಗಿ ಒತ್ತಾಯ ಮಾಡಬೇಕು ಎಂದರು.ಶಿರಸಿ ಜಿಲ್ಲೆಯಾಗಲಿ:ಆಡಳಿತಾತ್ಮಕ ಹಾಗೂ ಭೌಗೋಳಿಕವಾಗಿ ಶಿರಸಿಯು ಜಿಲ್ಲೆಯಾಗಲು ಸೂಕ್ತವಾಗಿದೆ. ಹೋರಾಟದ ಜತೆ ಎಲ್ಲ ತಾಲೂಕಿನ ಜನರನ್ನು ಮನವೋಲಿಸುವ ಪ್ರಯತ್ನ ಮಾಡಬೇಕು. ಜಿಲ್ಲಾ ಕೇಂದ್ರವಾಗಲು ಶಿರಸಿ ಸೂಕ್ತವಾಗಿದೆ ಎಂದು ಸರ್ಕಾರದ ಮನವೊಲಿಸುವ ಪ್ರಯತ್ನ ಮಾಡಲಾಗುತ್ತದೆ. ಅಲ್ಲದೇ ಜಿಲ್ಲೆಯ ಜನಪ್ರತಿನಿಧಿಗಳಿಗೂ ಮನವಕರಿಕೆ ಮಾಡಲಾಗುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಉಪಾಧ್ಯಕ್ಷ ಗಣೇಶ ದಾವಣಗೆರೆ, ಪ್ರಮುಖರಾದ ಬಸವರಾಜ ದೊಡ್ಮನಿ, ಜಾಫಿ ಖಾದರ್ ಆನವಟ್ಟಿ, ಶ್ರೀನಿವಾಸ ನಾಯ್ಕ, ಶೈಲೇಶ ಗಾಂಧಿ ಜೋಗಳೇಕರ ಮತ್ತಿತರರು ಇದ್ದರು.ಬೆಳೆಗಾರರಿಗೆ ನ್ಯಾಯ ಒದಗಿಸಿ

ಹೆಚ್ಚಿನ ತೆರಿಗೆ ವಿಧಿಸಿಸಾಫ್ಟಾ ಮತ್ತು ಸಾರ್ಕಾ ಒಪ್ಪಂದವನ್ನು ನವೀಕರಣ ಮಾಡುವಾಗ ಅಡಕೆಯನ್ನು ಈ ಒಪ್ಪಂದದಿಂದ ಕೈಬಿಡಬೇಕು. ಹೊರದೇಶದ ಅಡಕೆಗೆ ಹೆಚ್ಚಿನ ತೆರಿಗೆ ವಿಧಿಸಿ ಬೆಳೆಗಾರರಿಗೆ ನ್ಯಾಯ ಒದಗಿಸಬೇಕು.

ಅಡಕೆ ಸಂಸ್ಕರಣೆ ಮಾಡುವ ಸಂಸ್ಥೆಗಳು ರಾಜ್ಯದಲ್ಲಿ ಸಾಕಷ್ಟಿವೆ. ಅವುಗಳಿಗೆ ಹಣಕಾಸಿನ ನೆರವು ಒದಗಿಸಿ, ದೇಶದ ಗಡಿ ಭಾಗಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕು. ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಮಳೆಯಾಗಿ ಕೊಳೆರೋಗದಿಂದ ಶೇ. ೬೦ರಿಂದ ೭೦ರಷ್ಟು ಬೆಳೆಹಾನಿಯಾಗಿದೆ. ಕೊಳೆರೋಗದ ಪರಿಹಾರಕ್ಕೆ ಕೇಂದ್ರ ಸರ್ಕಾರವು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ರಾಜ್ಯ ಸರ್ಕಾರದ ಬಳಿಯೂ ವಿನಂತಿಸಿ, ಅಡಕೆ ಬೆಳೆಗಾರರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ನಮ್ಮ ಸರ್ಕಾರ ಮಾಡಲಿದೆ ಎಂದು ದೀಪಕ ಹೆಗಡೆ ದೊಡ್ಡೂರು ತಿಳಿಸಿದರು.