ಸಾರಾಂಶ
ಹರಿಯಾಣದ ವಿಧಾನಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಸಾಧನೆಯನ್ನು ಮಾಡುವ ಮೂಲಕ ದಿಗ್ವಿಜಯ ಸಾಧಿಸಿರುವ ಬಿಜೆಪಿ ಜನತೆಯ ವಿಶ್ವಾಸವನ್ನು ಗಳಿಸಿದ್ದರೆ, ದೇಶದ ಪಾಲಿನ ಮಗ್ಗುಲು ಮುಳ್ಳಾಗಿರುವ ಕಾಂಗ್ರೆಸ್ ಅತ್ಯಂತ ಹೀನಾಯವಾಗಿ ಸೋಲನುಭವಿಸಿರುವುದು ಭಾರತದ ರಾಜಕಾರಣದ ಮುಂದಿನ ದಿಕ್ಸೂಚಿ ಎಂದು ಹಿರಿಯ ವಕೀಲ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎನ್.ಡಿ. ಪ್ರಸಾದ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಹರಿಯಾಣದ ವಿಧಾನಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಸಾಧನೆಯನ್ನು ಮಾಡುವ ಮೂಲಕ ದಿಗ್ವಿಜಯ ಸಾಧಿಸಿರುವ ಬಿಜೆಪಿ ಜನತೆಯ ವಿಶ್ವಾಸವನ್ನು ಗಳಿಸಿದ್ದರೆ, ದೇಶದ ಪಾಲಿನ ಮಗ್ಗುಲು ಮುಳ್ಳಾಗಿರುವ ಕಾಂಗ್ರೆಸ್ ಅತ್ಯಂತ ಹೀನಾಯವಾಗಿ ಸೋಲನುಭವಿಸಿರುವುದು ಭಾರತದ ರಾಜಕಾರಣದ ಮುಂದಿನ ದಿಕ್ಸೂಚಿ ಎಂದು ಹಿರಿಯ ವಕೀಲ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎನ್.ಡಿ. ಪ್ರಸಾದ್ ತಿಳಿಸಿದರು.ಅರಸೀಕೆರೆ ನಗರ ಮತ್ತು ಗ್ರಾಮಾಂತರ ಮಂಡಳಗಳ ಅಧ್ಯಕ್ಷರುಗಳಾದ ಅವಿನಾಶ ನಾಯ್ಡು ಹಾಗೂ ಯತೀಶ್ ಕುಮಾರ್ ಸಿ.ಆರ್.ರವರ ಜಂಟಿ ನಾಯಕತ್ವದಲ್ಲಿ ನಗರದ ಬಸವೇಶ್ವರ.ವೃತ್ತದಲ್ಲಿ ನಡೆದ ಬಿಜೆಪಿ ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ ಕಾರ್ಯಕರ್ತರನ್ನು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.ಕಾಂಗ್ರೆಸ್ ಹರಿಯಾಣ ಸೇರಿದಂತೆ ಜಮ್ಮೂ-ಕಾಶ್ಮೀರದಲ್ಲಿಯೂ ಸಹ ನಡೆದ ವಿಧಾನಸಭಾ ಚುನಾವಣೆಯಲ್ಲಿ ತೀವ್ರಮುಖಭಂಗವಾಗಿದ್ದು, ಅಲ್ಲಿ ಕಾಂಗ್ರೆಸ್‌ಗೆ ಕೇವಲ 6 ಸ್ಥಾನಗಳನ್ನು ಮಾತ್ರ ಗಳಿಸಿ ಹೀನಾಯ ಸೋಲು ಅನುಭವಿಸಿದೆ ಬಿಜೆಪಿ ಪ್ರಬಲ ವಿರೊಧಪಕ್ಷವಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ನೆರೆದಿದ್ದ ನೂರಾರು ಜನರಿಗೆ ಸಿಹಿ ವಿತರಣೆ ಮಾಡಲಾಯಿತು. ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುಕುಮಾರ್ ಹಾಗೂ ಸಿಂಧುಕುಮಾರಿ ಮತ್ತು ಗ್ರಾಮಾಂತರ ಬಿಜೆಪಿ ಕಾರ್ಯದರ್ಶಿ ಸುನೀಲ್ ಶಾಸ್ತ್ರಿ ಹಾಗೂ ಕಿರಣ್ ಕುಮಾರ್, ಬಿಜೆಪಿ ಮುಖಂಡರುಗಳಾದ ವೀರಭದ್ರಪ್ಪ, ಮುರಳಿಧರ್, ವೆಂಕಟೇಶ್, ಅಶೋಕ್, ಮೇಘನಾಥ್, ಶಶಿಧರ್, ಮೂರ್ತಿ, ಶಿವರಾಜ್, ಸುಭಾಷ್, ಮುಂತಾದವರು ಉಪಸ್ಥಿತರಿದ್ದರು.