ಸಾರಾಂಶ
ಪರಶುರಾಂಪುರ ಬ್ಯಾರೇಜ್ ನಿರ್ಮಾಣಕ್ಕೆ ಆಂಧ್ರ ಆಕ್ಷೇಪಿಸಿತ್ತು । ನಾಲ್ಕು ವರ್ಷಗಳ ಹಿಂದೆ ಕೇಂದ್ರಕ್ಕೆ ದೂರು ನೀಡಿತ್ತುಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಕಾರ್ಯಸಾಧುವಲ್ಲದ ಆಲೋಚನೆ ಎಂದು ಸರ್ಕಾರ ಉನ್ನತ ಅಧಿಕಾರಿಗಳು ಹೇಳಿದರೂ ಕಿವಿಗೆ ಹಾಕಿಕೊಳ್ಳದೆ ಅರ್ಧ ಟಿಎಂಸಿ ನೀರಿಗಾಗಿ ಅಮರಣಾಂತ ಉಪವಾಸ ಕುಳಿತು ನಂತರ, ಸುಧಾಕರ್ ನೀಡಿದ ಷರಬತ್ತು ಸೇವಿಸಿ ಸತ್ರಾಗ್ರಹಕ್ಕೆ ಮಂಗಳ ಹಾಡಿದ ಹಿರಿಯೂರು ಹೋರಾಟಗಾರರು ಭವಿಷ್ಯದಲ್ಲಿ ಎದುರಾಗುವ ಸಂಕಷ್ಟಗಳ ಬಗ್ಗೆ ಆಲೋಚನೆ ಮಾಡಿದಂತೆ ಕಾಣಿಸುತ್ತಿಲ್ಲ. ವಿವಿ ಸಾಗರ ಜಲಾಶಯದಲ್ಲಿ ನೀರೇ ಇಲ್ಲದಿದ್ದರೂ ಗಾಯತ್ರಿ ಜಲಾಶಯಕ್ಕೆ ನೀರು ಕೇಳಿ ಅನಗತ್ಯ ವಿವಾದಕ್ಕೆ ಕಾರಣರಾಗಿದ್ದಾರೆ.
ರಾಜ್ಯದ ಗಡಿಗೆ ಹೊಂದಿಕೊಂಡಂತೆ ಬೈರವನಿತಿಪ್ಪ(ಬಿಟಿ ಡ್ಯಾಂ)ಇದೆ. ಆಂಧ್ರದ ಅನಂತಪುರ ಜಿಲ್ಲೆಯ ಗುಮ್ಮಗಟ್ಟದಲ್ಲಿ 1961ರಲ್ಲಿ ಬೈರವನಿ ತಿಪ್ಪ ಜಲಾಶಯ ನಿರ್ಮಿಸಲಾಗಿದೆ. 1976ರಲ್ಲಿ ಅಂದಿನ ಮೈಸೂರು ಸರ್ಕಾರ ಹಾಗೂ ಆಂದ್ರ ಪ್ರದೇಶದ ನಡುವೆ ಒಪ್ಪಂದವಾಗಿದ್ದು ವಿವಿ ಸಾಗರ ಜಲಾಶಯದಿಂದ ಬೈರವನಿ ತಿಪ್ಪ ಜಲಾಶಯದವರೆಗೆ ಯಾವುದೇ ಬಗೆಯ ಚೆಕ್ ಡ್ಯಾಂ, ಬ್ಯಾರೇಜ್ ಕಂ ಬ್ರಿಡ್ಜ್ ಏನೂ ನಿರ್ಮಿಸುವಂತಿಲ್ಲ. ಆದರೆ ಸುಮಾರು 18 ಬ್ಯಾರೇಜುಗಳು ಈಗಾಗಲೇ ನಿರ್ಮಿಸಲಾಗಿದ್ದು ಮತ್ತೇ ಮೂರು ಬ್ಯಾರೇಜ್ ನಿರ್ಮಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ.ಚಳ್ಳಕೆರೆ ತಾಲೂಕಿನ ಪರಶುರಾಂಪುರ ಬಳಿ ವೇದಾವತಿ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಿಸಿದಾಗ ಆಂಧ್ರಪ್ರದೇಶ ಸರ್ಕಾರ 4 ವರ್ಷದ ಹಿಂದೆ ಅಂದರೆ ಡಿಸೆಂಬರ್ 13, 2021ರಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ದೂರು ನೀಡಿ ಇದು ಒಪ್ಪಂದಗಳ ಉಲ್ಲಂಘನೆಯಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಲು ಅವಕಾಶ ಕೊಡಬಾರದೆಂದು ಖ್ಯಾತೆ ತೆಗೆದಿತ್ತು.
ಕೆಡಬ್ಲ್ಯೂಡಿಟಿ-1(ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ)ರ ಪ್ರಕಾರ (ಪುಟ 231), ಆಂಧ್ರಪ್ರದೇಶದ ಪೂರ್ವಾನುಮತಿ ಇಲ್ಲದೆ ಕರ್ನಾಟಕ ಯಾವುದೇ ಹೊಸ ನಿರ್ಮಾಣಗಳನ್ನು ಕೈಗೊಳ್ಳಬಾರದು. ವಾಣಿವಿಲಾಸ ಸಾಗರದಿಂದ ಭೈರವನಿತಿಪ್ಪ ಅಣೆಕಟ್ಟೆವರೆಗೆ ಹಗರಿನದಿ(ವೇದಾವತಿ) ಜಲಾನಯನ ಪ್ರದೇಶದಲ್ಲಿ, ಕರ್ನಾಟಕವು ಯಾವುದೇ ಹೊಸ ನಿರ್ಮಾಣವನ್ನು ಕೈಗೊಳ್ಳಬಾರದು. ಈ ಅಂಶವನ್ನು ಈಗಾಗಲೇ ಕರ್ನಾಟಕ ಸರ್ಕಾರಕ್ಕೆ ತಿಳಿಸಲಾಗಿದೆ. ಭದ್ರಾ ಮೇಲ್ದಂಡೆಗೆ ಕೇಂದ್ರ ಜಲ ಆಯೋಗ ಅನುಮತಿ ನೀಡುವಾಗ ಸಂಬಂಧಿಸಿದ ಡಿಪಿಆರ್ ನ್ನು ಕೆಳಮಟ್ಟದ ಜಲಾನಯನ ರಾಜ್ಯಗಳಾದ ಆಂದ್ರ ಪ್ರದೇಶ ಮತ್ತು ತೆಲಂಗಾಣಗಳಿಗೆ ಒದಗಿಸಬೇಕು. ಹಾಗೂ ಭದ್ರಾ ಮೇಲ್ದಂಡೆಗೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗುವ ಮುನ್ನ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಗೆ ಟಿಎಸಿ ಸಭೆಯಲ್ಲಿ ಭಾಗವಹಿಸುವ ಅವಕಾಶ ಕೊಡಬೇಕೆಂದು ಕೇಂದ್ರ ಜಲಶಕ್ತಿಗೆ ನೀಡಲಾದ ದೂರಿನಲ್ಲಿ ವಿವರಿಸಲಾಗಿತ್ತು. ಭದ್ರಾ ಮೇಲ್ದಂಡೆಗೂ ಬ್ಯಾರೇಜುಗಳಿಗೂ ಸಂಬಂಧವಿಲ್ಲವೆಂಬ ಸಮಜಾಯಿಷಿ ನೀಡಿ ರಾಜ್ಯದ ಅಧಿಕಾರಿಗಳು ಆಂಧ್ರದ ಖ್ಯಾತೆಯ ನಿರಾಕರಿಸಿದ್ದರು.ಆದರೆ ಆಂದ್ರ ಪ್ರದೇಶ ಇಷ್ಟಕ್ಕೆ ಸುಮ್ಮನಾಗುವುದಿಲ್ಲ, ಭವಿಷ್ಯದಲ್ಲಿ ಖ್ಯಾತೆ ತೆಗೆಯುವುದಿಲ್ಲವೆಂಬುದಕ್ಕೆ ಗ್ಯಾರಂಟಿಗಳಿಲ್ಲ. ವಿವಿ ಸಾಗರ ಜಲಾಶಯದಲ್ಲಿ 20ಕ್ಕೂ ಹೆಚ್ಚು ಟಿಎಂಸಿ ನೀರು ಸಂಗ್ರಹವಾಗಿರುವುದರಿಂದ ಕೆಳ ಭಾಗದ ರಾಜ್ಯಗಳಿಗೆ ನೀರು ಬೀಡುವಂತೆ ಕೋರಬಹುದು. ಬೈರವನಿತಿಪ್ಪ ಜಲಾಶಯ ಅರ್ಧ ಖಾಲಿಯಾಗಿದ್ದು, ಈ ಬೇಸಗೆ ಎದುರಿಸುತ್ತದೆಯೇ ಎಂಬ ಬಗ್ಗೆ ಅನುಮಾನಗಳಿವೆ. ಹಾಗಾಗಿ ಹಿರಿಯೂರಿನ ಮಂದಿ ವಿವಿ ಸಾಗರದಲ್ಲಿ ನೀರಿದೆ ಎಂದು ಬೊಬ್ಬೆ ಹೊಡೆದುಕೊಂಡರೆ ಅದು ಆಂದ್ರಕ್ಕೆ ಹೆಚ್ಚುವರಿ ನೀರು ಪಡೆಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಅಂಧ್ರ ಖ್ಯಾತೆ ಮುಂದುವರಿದದ್ದೇ ಆದಲ್ಲಿ ವೇದಾವತಿ ನದಿಯುದ್ದಕಕ್ಕೂ ಕಟ್ಟಲಾದ ಬ್ಯಾರೇಜುಗಳ ತೆರವು ಮಾಡಬೇಕಾಗುತ್ತದೆ. ಹಿಂದೊಮ್ಮೆ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಕೆಆರ್‌ಎಸ್ ಬರಿದಾಗಿದ್ದರೂ ತಮಿಳು ನಾಡಿಗೆ ನೀರು ಬಿಡುವಂತ ಸುಪ್ರೀ ಕೋರ್ಟ್ ಆದೇಶಿಸಿತ್ತು. ಇಂತಹ ಕಟು ವಾಸ್ತವವ ಹಿರಿಯೂರು ರೈತರು ಅರಿಯಬೇಕು. ಹಿರಿಯೂರು ತಾಲೂಕಿನಲ್ಲಿ ನಿರ್ಮಿಸಲಾದ ಬ್ಯಾರೇಜುಗಳು ನಮ್ಮವೇ ಎಂಬ ಅರಿವು ಅವರಿಗೆ ಇರಬೇಕು. ನಾಳೆ ಸುಪ್ರೀಂಕೋರ್ಟ್ ಬಿಟಿ ಡ್ಯಾಂಗೆ ನೀರು ಬಿಡಿ ಎಂದು ನಿರ್ದೇಶಿಸಿದರೆ ಅದರಿಂದಾಗುವ ಪರಿಣಾಮಗಳ ಜಿಲ್ಲೆಯ ಜನ ಉಣ್ಣುತ್ತಾರೆ.
ವೇದಾವತಿ ನದಿಯುದ್ದಕ್ಕೂ ಕಟ್ಟಲಾದ ಬ್ಯಾರೇಜ್‌ಗಳು
ಕಾರ್ತಿಕೇನಹಳ್ಳಿ ಬ್ಯಾರೇಜ್ಕೂನಿಕೆರೆ ಬ್ಯಾರೇಜ್
ಲಕ್ಕವಳ್ಳಿ ಬ್ಯಾರೇಜ್ಆಲೂರು ಪಿಟ್ಲಹಳ್ಳಿ ಬ್ಯಾರೇಜ್
ಕಸವನಹಳ್ಳಿ ಬ್ಯಾರೇಜ್ಹಳೇ ಯಳನಾಡು ಬ್ಯಾರೇಜ್
ಕೂಡ್ಲಹಳ್ಳಿ ಬ್ಯಾರೇಜ್ಕೆರೆ ಓಬವ್ವನಹಳ್ಳಿ ಬ್ಯಾರೇಜ್
ಕಂಬತ್ತಳಹಳ್ಳಿ ಬ್ಯಾರೇಜ್ಸಿಡ್ಲನಕೋಟೆ ಬ್ಯಾರೇಜ್ ಕಂ ಬ್ರಿಡ್ಜ್
ಕಲಮರಹಳ್ಳಿ ಬ್ರಿಜ್ ಕಂ ಬ್ಯಾರೇಜ್ಗೊರ್ಲತ್ತು ಬ್ಯಾರೇಜ್
ಬೊಂಬೇರಹಳ್ಳಿ ಬ್ಯಾರೇಜ್ಚೌಳೂರು ಬ್ರಿಡ್ ಕಂ ಬ್ಯಾರೇಜ್
ಪರಶುರಾಂಪುರ ಬ್ಯಾರೇಜ್ಪಡಗಲಬಂಡೆ ಬ್ಯಾರೇಜ್
ನಾಗಗೊಂಡನಹಳ್ಳಿ ಬ್ಯಾರೇಜ್ಮೈಲನಹಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್
ನಿರ್ಮಾಣ ಮಾಡಲು ಉದ್ದೇಶಿತ ಬ್ಯಾರೇಜುಗಳು:
ತೊರೆ ಬೀರನಹಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್ಗೋಸಿಕೆರೆ ಬ್ರಿಡ್ಜ್ ಕಂ ಬ್ಯಾರೇಜ್
ಗುಡಿಹಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್