ನನ್ನ ಮಗ ತಬ್ಬಲಿಯಲ್ಲ ಅವನನ್ನು ಕೈಬಿಡಬೇಡಿ: ಅನುಪಮಾ ಮಹೇಶ್‌

| Published : Apr 08 2024, 01:03 AM IST

ನನ್ನ ಮಗ ತಬ್ಬಲಿಯಲ್ಲ ಅವನನ್ನು ಕೈಬಿಡಬೇಡಿ: ಅನುಪಮಾ ಮಹೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಶಿವರ ಗ್ರಾಮದಲ್ಲಿ ಲೋಕಸಭಾ ಚುನಾವಣೆ ಮತಯಾಚನೆ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ನನ್ನ ಮಗ ತಬ್ಬಲಿಯಲ್ಲ ನಮ್ಮ ಕುಟುಂಬ ಯಾರಿಗೂ ಮೋಸ ಮಾಡಿಲ್ಲ. ಜನ ಈ ಬಾರಿ ನಮ್ಮನ್ನು ಕೈ ಬಿಡಬೇಡಿ ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ತಾಯಿ ಅನುಪಮಾ ಮಹೇಶ್ ಕಣ್ಣೀರುಇಟ್ಟರು.ತಾಲೂಕಿನ ಬಾಗೂರು ಹೋಬಳಿ ಶಿವರ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ನಾನು ಹೊಳೆನರಸೀಪುರ ಕ್ಷೇತ್ರದಲ್ಲಿ 2 ಬಾರಿ ಸೋತಿದ್ದೇನೆ ನನ್ನ ಮಗ ಕೂಡ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಮತದ ಅಂತರದಲ್ಲಿ ಸೋತಿದ್ದಾನೆ ನಾವು ಎಷ್ಟು ಬಾರಿ ಜನರ ಬಳಿ ಬರಬೇಕು ಎಂದರು ಅದು ಸಾಧ್ಯವಾಗುತ್ತಿಲ್ಲ.

ನಮಗೂ ಒಂದು ಅವಕಾಶ ನೀಡಿ:

ದೇವೇಗೌಡರ ಕುಟುಂಬಕ್ಕೆ ಪ್ರಧಾನಿಯಿಂದ ಹಿಡಿದು ಸಿಎಂ, ಮಂತ್ರಿ, ವಿಧಾನ ಪರಿಷತ್, ಲೋಕಸಭಾ ಸದಸ್ಯರ ಹುದ್ದೆಯನ್ನು ನೀಡಿದ್ದೀರಿ ಆದರೆ ನಾವು ಏನು ತಪ್ಪು ಮಾಡಿದ್ದೇವೆ. ಅವರ ದರ್ಪ ದುರಾಡಳಿತ ದ್ವೇಷದ ರಾಜಕೀಯ ಈ ಬಾರಿ ಅಂತ್ಯವಾಗಲಿದೆ ಒಂದು ತಾಯಿಯ ಕಣ್ಣೀರು ಮತ್ತೊಂದು ತಾಯಿಗೆ ಮಾತ್ರ ಗೊತ್ತು ನನಗೆ ಇರುವುದು ಒಬ್ಬನೇ ಮಗ ಅವನೇನು ರಾಜಕೀಯಕ್ಕೆ ಬರುತ್ತೇನೆ ಎಂದು ಹೇಳಿರಲಿಲ್ಲ. ಆದರೆ ಹೈಕಮಾಂಡ್ ಅವರ ಒತ್ತಾಯದಿಂದ ಈ ಬಾರಿ ಲೋಕಸಭಾ ಚುನಾವಣೆಗೆ ನಿಂತಿದ್ದೇವೆ ಈ ಚುನಾವಣೆ ಸ್ವಾಭಿಮಾನದ ಚುನಾವಣೆಯಾಗಿದ್ದು ಸ್ವಾಭಿಮಾನವನ್ನು ಮತದಾರರು ಯಾವುದೇ ಕಾರಣಕ್ಕೂ ಮಾರಿಕೊಳ್ಳಬೇಡಿ ನಿಮ್ಮ ಒಂದೊಂದು ಮತ ಒಂದು ಸ್ವಾಭಿಮಾನದ ಸಂಕೇತವಾಗಿದೆ ನುಡಿದಂತೆ ನಡೆಯುತ್ತಿರುವ ಪಕ್ಷವೆಂದರೆ ಅದು ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ ಹೇಳಿದ ಹಾಗೆ ನಾವು ನಡೆದುಕೊಂಡಿದ್ದೇವೆ ಐದು ಗ್ಯಾರಂಟಿಗಳನ್ನ ನೀಡುವ ಮೂಲಕ ನಾವು ಸುಳ್ಳು ಹೇಳುವುದಿಲ್ಲ ಎಂದು ಜನರಿಗೆ ತಿಳಿಯುತ್ತದೆ ಎಂದರು. ಈ ಬಾರಿ ಕಾಂಗ್ರೆಸ್‌ ಗೆಲ್ಲಬೇಕು:

ಮಾಜಿ ವಿಪ ಸದಸ್ಯ ಎಂಎ ಗೋಪಾಲಸ್ವಾಮಿ ಮಾತನಾಡಿ, ನಮ್ಮ ತಾಯಿ ಬೇರೆ ಅಲ್ಲ ಅನುಪಮ ಮಹೇಶ್ ಬೇರೆ ಅಲ್ಲ ಅವರು ಕೂಡ ನಮಗೆ ತಾಯಿ ಇದ್ದಂತೆ ಕಾಂಗ್ರೆಸ್ ಪಕ್ಷ ನಮಗೆ ಸಾಕಷ್ಟು ಸ್ಥಾನಮಾನವನ್ನು ನೀಡಿದೆ. ಈ ಬಾರಿ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವು ತಂದುಕೊಡುವ ಮೂಲಕ ಮೈತ್ರಿಕೂಟಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತೇವೆ.

ಸುಳ್ಳು ಭರವಸೆ ನಂಬಬೇಡಿ:

ವಿರೋಧ ಪಕ್ಷದ ನಾಯಕರು ಇಲ್ಲಸಲ್ಲದ ಸುಳ್ಳು ಭರವಸೆಗಳನ್ನು ನೀಡುತ್ತಾ ಬಂದಿದ್ದಾರೆ ಹಾಗೂ ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ಊಹಾಪೋಹಗಳನ್ನು ಹಬ್ಬಿಸಿ ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ ಅವರಿಗೆ ದಾರಿ ತಪ್ಪಿಸುವ ಕೆಲಸ ಬಿಟ್ಟು ಬೇರೆ ಏನು ಗೊತ್ತಿಲ್ಲ ಕುತಂತ್ರದಿಂದ ರಾಜಕೀಯ ಮಾಡುವುದನ್ನು ಬಿಟ್ಟು ನೇರವಾಗಿ ಚುನಾವಣೆ ಎದುರಿಸಲಿ ಅದನ್ನು ಬಿಟ್ಟು ಬೇರೆಯವರಿಗೆ ಎತ್ತಿ ಕಟ್ಟುವ ಕೆಲಸವನ್ನು ಮಾಡಬಾರದು ನನಗೆ ಬಾಗೂರು ಹೋಬಳಿಯಲ್ಲಿ ಅತಿ ಹೆಚ್ಚು ಮತ ನೀಡಿ ಬೆಂಬಲಿಸಿದ್ದೀರಿ. ಅದೇ ರೀತಿ ಈ ಬಾರಿ ಬಾಗುರು ವ್ಯಾಪ್ತಿಯಲ್ಲಿ 20,000 ಮತಗಳ ಅಂತರದ ಬೆಂಬಲವನ್ನು ನೀಡಬೇಕು ಶ್ರೇಯಸ್ ಒಬ್ಬ ಅನಾಥ ಹುಡುಗ ಅಲ್ಲ ಅವರು ನಮ್ಮೆಲ್ಲರ ಅಭ್ಯರ್ಥಿ ಆ ಹುಡುಗನನ್ನು ನಾವು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ. ಅವರ ತಾತ ಪುಟ್ಟಸ್ವಾಮಿಗೌಡರು ಮತ್ತು ಎಚ್ಎಸ್ ಸಿ ಶ್ರೀಕಂಠಯ್ಯ ಕೊಡುಗೆ ಈ ಜಿಲ್ಲೆಗೆ ಅಪಾರವಾಗಿದೆ ಅವರ ಅಭಿವೃದ್ಧಿ ಕೆಲಸಗಳು ಈ ಬಾರಿ ಕೈ ಹಿಡಿಯಲಿವೆ 33 ವರ್ಷಗಳ ಹಿಂದೆ ಪುಟ್ಟಸ್ವಾಮಿಗೌಡರು ಲೋಕಸಭಾ ಸದಸ್ಯರಾಗಿದ್ದು ಬಿಟ್ಟರೆ ಈಗ ಅಂತಹ ಅವಕಾಶ ಜನರ ಬಳಿ ಬಂದಿದೆ.

ಅವಕಾಶ ಕೈಚೆಲ್ಲಬೇಡಿ:

ಈ ಬಾರಿ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕಾಂಗ್ರೆಸ್ ಪರವಾಗಿ ಬೆಂಬಲಿಸುವಂತೆ ಮತಯಾಚನೆ ಮಾಡಿ ಮತ ಹಾಕಿಸುವುದು ನಿಮ್ಮಗಳ ಜವಾಬ್ದಾರಿ ಇದೊಂದು ಅವಕಾಶವನ್ನು ಕೈ ಚೆಲ್ಲಿದರೆ ಮತ್ಯಾವುದೇ ಕಾರಣಕ್ಕೂ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಕಟ್ಟಲು ಸಾಧ್ಯವಿಲ್ಲ ಜನರ ಆಶಯದಂತೆ ನಾವು ಐದು ಗ್ಯಾರಂಟಿಗಳನ್ನು ನೀಡಿದ್ದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್, 2000 ರು. ಹಣವನ್ನು ನೀಡುತ್ತಿದ್ದೇವೆ. ನುಡಿದಂತೆ ನಡೆಯುವ ಸರ್ಕಾರ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ ಇಂತಹ ಪಕ್ಷವನ್ನು ಬೆಂಬಲಿಸಿ ಈ ಬಾರಿ ಚುನಾವಣೆಯಲ್ಲಿ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿ ಕೊಡಬೇಕೆಂದು ಮನವಿ ಮಾಡುತ್ತೇನೆ ಎಂದರು.

ನಮ್ಮ ತಾತನ ಕೊಡುಗೆ ಅಪಾರ:

ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಮಾತನಾಡಿ, ಜಿಲ್ಲೆಗೆ ನಮ್ಮ ತಾತ ನೀಡಿರುವ ಕೊಡುಗೆ ಅಪಾರ ಅವರ ನಡೆ ನುಡಿ ನಮಗೆಲ್ಲ ಮಾರ್ಗದರ್ಶನವಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಉತ್ತಮ ವಾತಾವರಣವಿದ್ದು ಪಕ್ಷದ ಎಲ್ಲಾ ಕಾರ್ಯಕರ್ತರು ತಾಯಂದಿರು ಮುಖಂಡರು ಸೇರಿ ಮನೆ ಮನೆಗೆ ತೆರಳಿ, ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಬೇಕು ಇಂತಹ ಅವಕಾಶವನ್ನು ಕಳೆದುಕೊಳ್ಳಲು ನಾವು ಬಯಸುವುದಿಲ್ಲ ಕಾಂಗ್ರೆಸ್ ಒಂದು ನಿಷ್ಠಾವಂತ ಪ್ರಾಮಾಣಿಕ ಪಕ್ಷ ಪಕ್ಷದ ಸಿದ್ಧಾಂತ ಉತ್ತಮವಾಗಿದೆ. ಕಾಂಗ್ರೆಸ್ ಪಕ್ಷ ಬಡವರು ದೀನದಲಿತರು ಶೋಷಿತರು ಹಿಂದುಳಿದವರಿಗೆ ಬೆಂಬಲ ನೀಡುತ್ತಾ ಬಂದಿದೆ. ಈ ಬಾರಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿಕೊಡಲು ಇವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಿ ಎಸ್ ಪುಟ್ಟೇಗೌಡ ಮಾಜಿ ಜಿಲ್ಲಾಧ್ಯಕ್ಷ ಜಾವಗಲ್ ಪ್ರಸನ್ನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾತ್ಯೇನಹಳ್ಳಿ ರಾಮಚಂದ್ರು ಮಂಜೇಗೌಡ ವಿದ್ಯುತ್ ನಿಗಮ ಮಂಡಳಿ ಅಧ್ಯಕ್ಷ ಲಲಿತ್ ರಾಗವ್ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ ಶಂಕರ್ ಜಿಪಂ ಮಾಜಿ ಉಪಾಧ್ಯಕ್ಷ ವಿಜಯಕುಮಾರ್ ಆರ್‌ಟಿಒ ಮಂಜೇಗೌಡ ಕಿಶೋರ್ ಹೊನ್ನೇನಹಳ್ಳಿ ಶಂಕರ್ ಲಿಂಗೇಗೌಡ ಮತ್ತಿತರಿದ್ದರು.