ಶಕ್ತಿದೇವತೆಯೂ ಆಗಿರುವ ಶ್ರೀ ಹಾಸನಾಂಬಾ ಹಾಗೂ ಸಿದ್ಧೇಶ್ವರ ಜಾತ್ರೋತ್ಸವ ಇಂದಿನಿಂದ ಆರಂಭವಾಗಲಿದೆ. ಅಕ್ಟೋಬರ್ 29ರ ಗುರುವಾರ ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಾಲಯದ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ. ಗರ್ಭಗುಡಿಯ ಬಾಗಿಲು ತೆರೆಯುವ ಮುನ್ನ ದೇವಾಲಯದ ಎದುರು ಬಾಳೆಕಂದು ಕಡಿಯುವ ಸಂಪ್ರದಾಯವಿದ್ದು, ರಾಜ ವಂಶಸ್ಥ ನಂಜರಾಜ ಅರಸು ಅವರು ಈ ಧಾರ್ಮಿಕ ಆಚರಣೆಯನ್ನು ನೆರವೇರಿಸುವರು. ಭಕ್ತರಿಗೆ ಅ. 30ರಿಂದ ನ.10ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರಿಗೆ ಸುಲಭ ಹಾಗೂ ಸುರಕ್ಷಿತ ದರ್ಶನಕ್ಕಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಅಧಿದೇವತೆ, ಶಕ್ತಿದೇವತೆಯೂ ಆಗಿರುವ ಶ್ರೀ ಹಾಸನಾಂಬಾ ಹಾಗೂ ಸಿದ್ಧೇಶ್ವರ ಜಾತ್ರೋತ್ಸವ ಇಂದಿನಿಂದ ಆರಂಭವಾಗಲಿದೆ. ಅಕ್ಟೋಬರ್ 29ರ ಗುರುವಾರ ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಾಲಯದ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ. ಗರ್ಭಗುಡಿಯ ಬಾಗಿಲು ತೆರೆಯುವ ಮುನ್ನ ದೇವಾಲಯದ ಎದುರು ಬಾಳೆಕಂದು ಕಡಿಯುವ ಸಂಪ್ರದಾಯವಿದ್ದು, ರಾಜ ವಂಶಸ್ಥ ನಂಜರಾಜ ಅರಸು ಅವರು ಈ ಧಾರ್ಮಿಕ ಆಚರಣೆಯನ್ನು ನೆರವೇರಿಸುವರು. ಭಕ್ತರಿಗೆ ಅ. 30ರಿಂದ ನ.10ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರಿಗೆ ಸುಲಭ ಹಾಗೂ ಸುರಕ್ಷಿತ ದರ್ಶನಕ್ಕಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ.ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ

ಅ.೨೯ರಂದು ಸಂಜೆ ೬ ಗಂಟೆಗೆ ಮಹಾರಾಜ ಪಾರ್ಕ್‌ನ ಹೇಮಾವತಿ ಪ್ರತಿಮೆ ಮುಂಭಾಗ, ಹೇಮಾವತಿ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಗಾಯಕ ಅಲೋಕ್ ಅವರು ಆಗಮಿಸಿ ರಂಜಿಸಲಿದ್ದಾರೆ. ಇವರೊಂದಿಗೆ ಕನ್ನಡ ಚಲನಚಿತ್ರದ ಪ್ರಸಿದ್ಧ ನಟರಾದ ಶ್ರೀ ವಸಿಷ್ಠ ಸಿಂಹರವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸರಿಗಮಪ ಕಾರ್ಯಕ್ರಮದ ವಿಜೇತರಾದಂತ ಕುಮಾರಿ ಅಮೂಲ್ಯರವರು ಸಾರ್ವಜನಿಕರನ್ನು ರಂಜಿಸಲಿದ್ದಾರೆ.ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳು

ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂತೆಪೇಟೆ ಸರ್ಕಲ್ ಬಳಿ ಇರುವ ಮಹಾನಗರ ಪಾಲಿಕೆಯ ಹಿಂಭಾಗದಲ್ಲಿರುವ ಹಳೆಯ ವಸ್ತುಪ್ರದರ್ಶನ ಆವರಣದಲ್ಲಿ ಅಂತರ ರಾಜ್ಯ ಕಬಡ್ಡಿ, ಕುಸ್ತಿ ಮತ್ತು ವಾಲಿಬಾಲ್ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿದೆ. ವಿವಿಧ ಪ್ರದರ್ಶನಗಳು

ಮಹಾನಗರ ಪಾಲಿಕೆಯ ಮೈದಾನದಲ್ಲಿ ಹಳ್ಳಿಕಾರ್‌ ತಳಿಗಳ ಪ್ರದರ್ಶನ, ಅಮೃತ್ ಮಹಲ್ ತಳಿಗಳ ಜಾನುವಾರು ಪ್ರದರ್ಶನ, ಶ್ವಾನ ಪ್ರದರ್ಶನ, ಟಗರು/ಹೋತ ಪ್ರದರ್ಶನ ಮತ್ತು ಬೆಕ್ಕುಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ಆಹಾರ ಮೇಳ

ಇದೇ ಆವರಣದಲ್ಲಿ ಆಹಾರ ಮೇಳದ ಮಳಿಗೆಗಳನ್ನು ಕೂಡ ನಿರ್ಮಿಸಿದ್ದು, ಸಾಕಷ್ಟು ಆಹಾರ ತಯಾರಕರು ಕೂಡ ಈ ಒಂದು ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ರಂಗೋಲಿ ಸ್ಪರ್ಧೆ

ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನುಏರ್ಪಡಿಸಲಾಗಿದ್ದು, ಈ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸುವ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುತ್ತದೆ.

ದೇವಿ ದರ್ಶನಕ್ಕಾಗಿ ಭಕ್ತರಿಗೆ ಉಚಿತ ದರ್ಶನದ ಅವಕಾಶವಿದ್ದು, ಸುಗಮ ದರ್ಶನ ಬಯಸುವ ಭಕ್ತರಿಗಾಗಿ ವಿಶೇಷದರ್ಶನದ ವ್ಯವಸ್ಥೆ ಇರುತ್ತದೆ.ಭಕ್ತರು ಬಯಸಿದಲ್ಲಿ, ₹1000, 300ರು.ಗಳ ದರ್ಶನ ಟಿಕೆಟ್, ಲಾಡು ಟೀಕೆಟ್, ಇ-ಹುಂಡಿ ಹಾಗೂ ದೇಣಿಗೆ ಕಾಣಿಕೆಯನ್ನು ಆನ್‌ಲೈನ್ ಮುಖಾಂತರ ಮುಖಾಂತರ ಆನ್‌ಲೈನ್ ಟಿಕೆಟ್ ಬುಕ್ ಮಾಡಬಹುದು. ಭಕ್ತರಿಗೆ ಯವುದೇ ರೀತಿಯ ಸಂದೇಹಗಳು ಕಂಡುಬಂದಲ್ಲಿ ಈ ಮೂರು ಹೆಲ್ಪ್‌ಲೈನ್ ೭೩೫೩೯೩೯೬೧೩, ೭೩೫೩೯೩೯೬೧೪, ೭೩೫೩೯೩೯೬೧೮ ಗಳಿಗೆ ಸಂಪರ್ಕಿಸಬಹುದಾಗಿರುತ್ತದೆಭೌತಿಕ ಟಿಕೆಟ್‌ಗಳನ್ನು ಖರೀದಿಸುವವರು ದೇವಾಯಲಯದ ಆವರಣದ ಸುತ್ತ ಕೌಂಟರ್‌ಗಳನ್ನು ನಿರ್ಮಿಸಿದ್ದು, ಕೌಂಟರ್‌ಗಳಲ್ಲಿ ೧,೦೦೦ ರೂ. ಹಾಗೂ ೩೦೦ ರೂ. ಟಿಕೆಟ್‌ಗಳನ್ನು ಖರೀದಿಸಿ ದರ್ಶನವನ್ನು ಪಡೆಯಬಹುದು.ಭಕ್ತರ ಸುಗಮ ದರ್ಶನಕ್ಕಾಗಿ ಹಾಗೂ ಜನ ದಟ್ಟಣೆಯನ್ನು ನಿಯಂತ್ರಿಸಲು ರು. ೧,೦೦೦ ಟಿಕೆಟ್, ರು.೩೦೦ ಟಿಕೆಟ್, ದರ್ಮದರ್ಶನ, ಗೋಲ್ಡ್ ಕಾರ್ಡ್ ಮತ್ತು ಪ್ರೋಟೋಕಾಲ್ ದರ್ಶನಕ್ಕೆ ಪ್ರತ್ಯೇಕ ಸಾಲುಗಳ ವ್ಯವಸ್ಥೆ ಕಲ್ವಿಸಲಾಗಿದೆ. ಭಕ್ತರು ಯಾವುದೇ ಗೊಂದಲವಿಲ್ಲದೆ ನಿಗದಿಪಡಿಸಿದ ಸರತಿ ಸಾಲಿನ ಮೂಲಕ ತೆರಳಿ ಶ್ರೀ ಹಾಸನಾಂಬಾ ದೇವಿಯ ದರ್ಶನವನ್ನು ಪಡೆಯಬಹುದು.ಶ್ರೀ ಹಾಸನಾಂಬಾ ದೇವಿ ದರ್ಶನ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ದರ್ಶನದ ವೇಳಾಪಟ್ಟಿಯಲ್ಲಿ ಗೋಲ್ಡ್‌ಕಾರ್ಡ್ ಮತ್ತು ಪ್ರೋಟೋಕಾಲ್ ದರ್ಶನದ ಸಮಯವನ್ನು ನಿಗದಿಪಡಿಸಲಾಗಿದೆ: ಗೋಲ್ಡ್‌ಕಾರ್ಡ್ ದರ್ಶನ ಸಮಯ: ಬೆಳಿಗ್ಗೆ ೮ ಗಂಟೆಯಿಂದ ೧೦ ಗಂಟೆಯವರೆಗೆ, ಪ್ರೋಟೋಕಾಲ್ ದರ್ಶನದ ಸಮಯ: ಬೆಳಿಗ್ಗೆ ೧೦:೩೦ ಗಂಟೆಯಿಂದ ಮಧ್ಯಾಹ್ನ ೧೨:೩೦ಗಂಟೆಯವರೆಗೆ.ದೇವಾಲಯದ ಆವರಣ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ ದಿವ್ಯಾಂಗರ ಅನುಕೂಲಕ್ಕಾಗಿ ಉಚಿತ ಬಸ್ ಸೇವೆಯನ್ನು ಕಲ್ಪಿಸಲಾಗಿದೆ ಎಂದು ಹಾಸನಾಂಬಾ ದೇವಾಲಯದ ಆಡಾಳಿತಾಧಿಕಾರಿ ತಿಳಿಸಿದ್ದಾರೆ.