ಚಲನಚಿತ್ರ ತಾರೆಯರಿಂದ ಹಾಸನಾಂಬೆ ದರ್ಶನ

| Published : Oct 16 2025, 02:00 AM IST

ಸಾರಾಂಶ

ಹಿರಿಯ ನಾಯಕಿ ನಟಿ ಜಯಮಾಲ, ಶೃತಿ ಹಾಗೂ ಮಾಳಾವಿಕ ಮಾಧ್ಯಮದೊಂದಿಗೆ ಮಾತನಾಡಿ, ಹಾಸನಾಂಬೆ ದರ್ಶನ ಮಾಡಿ ಮನಸ್ಸಿಗೆ ತೃಪ್ತಿಯಾಗಿದೆ. ಇನ್ನು ಇಲ್ಲಿನ ವ್ಯವಸ್ಥೆ ಉತ್ತಮವಾಗಿದೆ. ಸ್ಕೌಟ್ಸ್‌ ಅಂಡ್ ಗೈಡ್ಸ್ ಇರಬಹುದು, ಪೊಲೀಸ್ ವ್ಯವಸ್ಥೆ ಸೇರಿದಂತೆ ಪ್ರತಿಯೊಬ್ಬರೂ ಸೇವೆ ಸಲ್ಲಿಸಿರುವುದಕ್ಕೆ ಎಲ್ಲರಿಗೂ ಕೃತಜ್ಞರಾಗಿದ್ದೇವೆ. ವ್ಯವಸ್ಥೆ ತುಂಬ ಅಚ್ಚುಕಟ್ಟಾಗಿ ಮಾಡಿದ್ದಾರೆ. ಯಾರಿಗೂ ನೋವಾಗದೆ ಇರುವಾಗೆ ತಾಯಿಯ ದರ್ಶನವನ್ನು ಎಲ್ಲಾ ಭಕ್ತರಿಗೆ ನೀಡಿದ್ದಾರೆ. ಇಲ್ಲಿಗೆ ಬರುವ ಮೊದಲು ಸಣ್ಣದಾದ ಆತಂಕ ಇತ್ತು ಸರಿಯಾಗಿ ದೇವಿಯ ದರ್ಶನ ಆಗುತ್ತದೆಯೇ ಎಂದು. ಆದರೆ ಇಲ್ಲಿಗೆ ಬಂದ ಮೇಲೆ ಈ ವ್ಯವಸ್ಥೆ ನೋಡಿ ಸಂತೋಷವಾಯಿತು ಎಂದರು.

ಕನ್ನಡಪ್ರಭ ವಾರ್ತೆ ಹಾಸನಕನ್ನಡ ಚಲನಚಿತ್ರ ನಾಯಕ ನಟಿಯರಾದ ಜಯಮಾಲ, ಶೃತಿ, ಮಾಳಾವಿಕ ಬುಧವಾರ ಹಾಸನಾಂಬೆ ದೇವಾಲಯಕ್ಕೆ ಬಂದು ದೇವಿ ದರ್ಶನ ಪಡೆದರು. ನಂತರ ಹಿರಿಯ ನಾಯಕಿ ನಟಿ ಜಯಮಾಲ, ಶೃತಿ ಹಾಗೂ ಮಾಳಾವಿಕ ಮಾಧ್ಯಮದೊಂದಿಗೆ ಮಾತನಾಡಿ, ಹಾಸನಾಂಬೆ ದರ್ಶನ ಮಾಡಿ ಮನಸ್ಸಿಗೆ ತೃಪ್ತಿಯಾಗಿದೆ. ಇನ್ನು ಇಲ್ಲಿನ ವ್ಯವಸ್ಥೆ ಉತ್ತಮವಾಗಿದೆ. ಸ್ಕೌಟ್ಸ್‌ ಅಂಡ್ ಗೈಡ್ಸ್ ಇರಬಹುದು, ಪೊಲೀಸ್ ವ್ಯವಸ್ಥೆ ಸೇರಿದಂತೆ ಪ್ರತಿಯೊಬ್ಬರೂ ಸೇವೆ ಸಲ್ಲಿಸಿರುವುದಕ್ಕೆ ಎಲ್ಲರಿಗೂ ಕೃತಜ್ಞರಾಗಿದ್ದೇವೆ. ವ್ಯವಸ್ಥೆ ತುಂಬ ಅಚ್ಚುಕಟ್ಟಾಗಿ ಮಾಡಿದ್ದಾರೆ. ಯಾರಿಗೂ ನೋವಾಗದೆ ಇರುವಾಗೆ ತಾಯಿಯ ದರ್ಶನವನ್ನು ಎಲ್ಲಾ ಭಕ್ತರಿಗೆ ನೀಡಿದ್ದಾರೆ. ಇಲ್ಲಿಗೆ ಬರುವ ಮೊದಲು ಸಣ್ಣದಾದ ಆತಂಕ ಇತ್ತು ಸರಿಯಾಗಿ ದೇವಿಯ ದರ್ಶನ ಆಗುತ್ತದೆಯೇ ಎಂದು. ಆದರೆ ಇಲ್ಲಿಗೆ ಬಂದ ಮೇಲೆ ಈ ವ್ಯವಸ್ಥೆ ನೋಡಿ ಸಂತೋಷವಾಯಿತು. ತುಂಬಾ ಚನ್ನಾಗಿ ದೇವರ ದರ್ಶನವಾಗಿದೆ. ಪ್ರತಿಯೊಬ್ಬರೂ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಉತ್ತಮವಾಗಿ ಮಳೆ ಬೆಳೆ ಬಂದು ರಾಜ್ಯ ಸುಭೀಕ್ಷವಾಗಿರಲಿ ಎಂದು ದೇವರಲ್ಲಿ ಬೇಡಿರುವುದಾಗಿ ತಿಳಿಸಿದರು. ದೇವರನ್ನು ನೋಡಿ ನಮಗೆ ತುಂಬ ಖುಷಿಯಾಗಿದೆ ಎಂದರು.ಹಾಸನಂಬೆ ದೇವಿ ದರ್ಶನದ ನಂತರ ಹೊರ ಹೋಗುವಾಗ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರು ಗೌರವ ಸೂಚಿಸಿದರು. ಜೊತೆಯಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಕೂಡ ಇದ್ದರು. ಚಲನಚಿತ್ರ ನಾಯಕ ಹಿರಿಯ ನಟರಾದ ಶಶಿಕುಮಾರ್ ಕೂಡ ಹಾಸನಾಂಬೆ ದೇವಿ ದರ್ಶನ ಮಾಡಿದ ಬಳಿಕ ದರ್ಬಾರ್‌ ಗಣಪತಿ ಹಾಗೂ ಶ್ರೀ ಸಿದ್ದೇಶ್ವರ ದೇವರ ದರ್ಶನ ಪಡೆದರು. ನಂತರ ಮಾಧ್ಯಮದೊಂದಿಗೆ ಮಾತನಾಡಿ, ನಾನು ಮೊದಲ ಬಾರಿಗೆ ಹಾಸನಾಂಬೆ ದೇವಿ ದರ್ಶನಕ್ಕೆ ಆಗಮಿಸುತ್ತಿಲ್ಲ. ಕಳೆದ ಹಲವಾರು ವರ್ಷಗಳಿಂದಲೂ ಬಂದು ದರ್ಶನ ಮಾಡುತ್ತಿದ್ದೇನೆ. ಈ ವರ್ಷ ಭಕ್ತಾದಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ತುಂಬ ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿದೆ. ದೇವಿಯು ಮೊದಲು ಎಲ್ಲರಿಗೂ ಆರೋಗ್ಯ ಭಾಗ್ಯ ಕೊಡಲಿ. ಎಲ್ಲರನು ಚನ್ನಾಗಿ ಇಟ್ಟಿರಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು.