ಸಾರಾಂಶ
ಒಳ ಮೀಸಲಾತಿ ವಿರೋಧಿಸಿ ಇಲ್ಲಿನ ಬಂಜಾರ ಸಮುದಾಯದ ಮುಖಂಡರು ಶಾಸಕ ಆರ್.ಬಸನಗೌಡ ತುರವಿಹಾಳ ಅವರ ಆಪ್ತ ಸಹಾಯಕ ಶರಣಗೌಡ ಅವರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಮಸ್ಕಿ
ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಕುರಿತು ನಿರ್ಧರಿಸುವುದನ್ನು ವಿರೋಧಿಸಿ ಗೋರಸೇನಾ ಸಂಘಟನೆ ವತಿಯಿಂದ ಖಾದಿ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಶಾಸಕಆರ್.ಬಸನಗೌಡ ತುರವಿಹಾಳ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗೋರಸೇನಾ ಜಿಲ್ಲಾ ಉಪಾಧ್ಯಕ್ಷ ನರೇಶ ಜಾಧವ, ಅವರು ಮಾತನಾಡಿ, ಲಂಬಾಣಿ, ಭೋವಿ, ಕೊರಮ-ಕೊರಚ ಸಮುದಾಯವನ್ನು ಮುಖ್ಯ ವಾಹಿನಿ ಯಿಂದ ಹಿಂದಿಕ್ಕಬೇಕೆಂಬ ಹುನ್ನಾರದಿಂದ, ಜಾತಿ-ಜಾತಿಗಳ ಮಧ್ಯೆ ಜಗಳ ಹಚ್ಚಲು, ಪರಿಶಿಷ್ಟರ ಜಾತಿಗಳ ವರ್ಗಿಕರಣ ಮಾಡುವುದಕ್ಕೆ ಮುಂದಾಗಿದ್ದಾರೆ. ಪರಿಶಿಷ್ಟ ಜಾತಿಯಲ್ಲಿನ ಎಲ್ಲಾ ಸಮುದಾಯಗಳ ಸರಿಯಾದ ಅಧ್ಯಯನ ಇಲ್ಲದೇ ಮತ್ತು ವೈಜ್ಞಾನಿಕವಾಗಿ ದತ್ತಾಂಶವನ್ನು ಸಂಗ್ರಹಿಸದೇ ತರಾತುರಿಯಲ್ಲಿ ಹೀಗೆ ನಿರ್ಧಾರ ತಗೆದುಕೊಳ್ಳಬಾರದು. ೯೯ ಜಾತಿಗಳ ಜನರ ಶಿಕ್ಷಣ, ರಾಜಕೀಯ ಸ್ಥಾನಮಾನ, ಮತ್ತು ಸಾಮಾಜಿಕ ವ್ಯವಸ್ಥೆಯ ನಿಖರ ಅಂಕಿ-ಅಂಶಗಳನ್ನು ಒಳಗೊಂಡ ದತ್ತಾಂಶವನ್ನು ಆಧರಿಸದೆ ಒಳ ಮೀಸಲು ಹಂಚಿಕೆ ನಿರ್ಧಾರ ಸೂಕ್ತವಲ್ಲ, ನ.೨೮ರಂದು ನಡೆಯುವ ಸಚಿವ ಸಂಪುಟದಲ್ಲಿ ಒಳ ಮೀಸಲು ಜಾರಿ ಮಾಡಲು ಮುಂದಾಗಬಾರದು. ಒಂದು ವೇಳೆನಿರ್ಧಾರ ತಗೆದುಕೊಂಡರೆ ಮುಂಬರುವ ವಿಧಾನಸಭೆ ಉಪ ಚುನಾವಣೆಯಲ್ಲಿ ೯೯ ಸಮುದಾಯದವರು ಒಂದಾಗಿ ಚುನಾವಣೆಯಲ್ಲಿ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಂಜಾರ ಸಮಾಜದ ಮುಖಂಡ ಅಮರೇಶನಾಯ್ಕ, ದೇವಪ್ಪ ಜಾಧವ, ಅಮರೇಶ ಪವಾರ, ವಿಠ್ಠಲ ಕೆಳೂತ್, ಕೃಷ್ಣಮೂರ್ತಿ ಜಾಧವ, ಶೇಟಪ್ಪ ಮೂಡಲ ದಿನ್ನಿ, ಪೋಮಾನಾಯ್ಕ, ಮಾನಪ್ಪ ಅಂಗಡಿ, ಚಂದ್ರು ಕಲಕಬೆಂಚಿ, ಶಂಕ್ರಪ್ಪ ಮೆದಕಿನಾಳ, ಹನುಮೇಶ ವೆಂಕಟಾಪೂರ, ಹನುಮಂತ, ಚಂದು ರಾಠೋಡ್, ಗೋವಿಂದ ಜಾಧವ, ರವಿಚಂದ್ರ ಚವ್ಹಾಣ, ವೆಂಕಟರೆಡ್ಡಿ, ಮಾನಸಿಂಗ್, ಕೇತಪ್ಪ, ರಮೇಶ ಸೇರಿದಂತೆ ಇನ್ನಿತರ ಮುಖಂಡರು ಭಾಗಿಯಾಗಿದ್ದರು.