ಸಾರಾಂಶ
ದಾಬಸ್‌ಪೇಟೆ: ಸಂಪಾದಿಸಿದ ಸಂಪತ್ತಿನಲ್ಲಿ ಅಲ್ಪಭಾಗವನ್ನಾದರೂ, ಸಮಾಜಕ್ಕೆ ದಾನ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ರಾಯರಪಾಳ್ಯ ಮಹೇಶ್ ತಿಳಿಸಿದರು
ದಾಬಸ್‌ಪೇಟೆ: ಸಂಪಾದಿಸಿದ ಸಂಪತ್ತಿನಲ್ಲಿ ಅಲ್ಪಭಾಗವನ್ನಾದರೂ, ಸಮಾಜಕ್ಕೆ ದಾನ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ರಾಯರಪಾಳ್ಯ ಮಹೇಶ್ ತಿಳಿಸಿದರು.
ಸೋಪುರ ಹೋಬಳಿಯ ವನಕಲ್ಲು ಮಠದಲ್ಲಿ ಗಾಂಧಿ ಜಯಂತಿ, ತಮ್ಮ ಜನ್ಮದಿನ ಅಂಗವಾಗಿ ಮಠದ ವಿದ್ಯಾರ್ಥಿಗಳಿಗೆ, ವೃದ್ಧರಿಗೆ ಬೆಡ್‌ಶೀಟ್ ವಿತರಿಸಿ ಮಾತನಾಡಿದರು.ಯಾವುದೇ ಕೆಲಸ ಮಾಡಲು ಮನಸ್ಸು ಮುಖ್ಯವೇ ಹೊರತು ಅವಕಾಶವಲ್ಲ. ಸುತ್ತಮುತ್ತಲಿನ ವಾತಾವರಣದಲ್ಲಿ ಗಿಡ, ಮರ ಬೆಳೆಸುವ ಮೂಲಕ ಉತ್ತಮ ವಾತಾವರಣ ನಿರ್ಮಿಸಬೇಕು. ಮುಂದಿನ ಪೀಳಿಗೆಗೆ ಆರೋಗ್ಯವಂತ ವಾತಾವರಣವನ್ನು ಕೊಡುಗೆಯಾಗಿ ನೀಡಬೇಕು ಎಂದರು.
ವನಕಲ್ಲು ಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಮಾನವನ ದುರಾಸೆಯ ಮನೋಭಾವದಿಂದ ಶಾಂತಿ ಮತ್ತು ನೆಮ್ಮದಿಯ ಜೀವನ ಸಾಗಿಸುವಲ್ಲಿ ವಿಫಲವಾಗುತ್ತಿದ್ದಾನೆ. ಸಮಾಜದಲ್ಲಿ ಹೊಗಳಿಕೆ ತೆಗಳಿಕೆ ಇದ್ದೇ ಇರುತ್ತದೆ. ಆದರೆ ಯಾವುದಕ್ಕೂ ಅಂಜದೆ ಸಮಾಜ ಸೇವೆ ಮಾಡಬೇಕು ಎಂದರು.ನೆಲಮಂಗಲ ಮಂಡಲ ಅಧ್ಯಕ್ಷ ಜಗದೀಶ್ ಚೌಧರಿ ಮಾತನಾಡಿ, ಸೇವಾ ಮನೋಭಾವ ಹೊಂದಿರುವ ವ್ಯಕ್ತಿಯ ಹೆಸರು ಸಮಾಜದಲ್ಲಿ ಯಾವುದೇ ರೀತಿ ಮರೆಯಾಗಲು ಸಾಧ್ಯವಿಲ್ಲ. ಆದ್ದರಿಂದ ಬಡ ಮಕ್ಕಳಿಗೆ ದಾನಿಗಳು ನೆರವು ಪಡೆಯುವ ಮೂಲಕ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಆರೋಗ್ಯಕರ ಸಮಾಜವನ್ನು ನಿರ್ಮಿಸಬೇಕೆಂದು ತಿಳಿಸಿದರು.
ಮುರುಳಿಧರ್, ಬಾಳೆಕಾಯಿ ರಾಮು, ಜೋಗಿ ಮತ್ತಿತರರಿದ್ದರು.