ಸಂಸದರು ದುಡಿದು ಆಸ್ತಿ ಮಾಡಿದ್ದಾರೇಯೇ?: ಸಚಿವರ ಪ್ರಶ್ನೆ

| Published : Apr 29 2024, 01:38 AM IST

ಸಂಸದರು ದುಡಿದು ಆಸ್ತಿ ಮಾಡಿದ್ದಾರೇಯೇ?: ಸಚಿವರ ಪ್ರಶ್ನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದ ಸಿದ್ದೇಶ್ವರ್ ಅವರು ಅಧಿಕಾರ ದೊರಕಿದ ನಂತರ ವರಮಾನ, ಆಸ್ತಿ ಹೆಚ್ಚು ಮಾಡಿಕೊಂಡಿದ್ದಾರೆ. ಅವರು ದುಡಿಮೆ ಮಾಡಿ ಸಂಪಾದನೆ ಮಾಡಿದ್ದಾರೆಯಾ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಸಂಸದ ಸಿದ್ದೇಶ್ವರ್ ಅವರು ಅಧಿಕಾರ ದೊರಕಿದ ನಂತರ ವರಮಾನ, ಆಸ್ತಿ ಹೆಚ್ಚು ಮಾಡಿಕೊಂಡಿದ್ದಾರೆ. ಅವರು ದುಡಿಮೆ ಮಾಡಿ ಸಂಪಾದನೆ ಮಾಡಿದ್ದಾರೆಯಾ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಪ್ರಶ್ನಿಸಿದರು.

ಮಲೇಬೆನ್ನೂರು ಮುಖ್ಯ ರಸ್ತೆಯಲ್ಲಿ ರೋಡ್‌ಶೋ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾರವರ ಪರ ಮತಯಾಚನೆ ಮಾಡಿ ಮಾತನಾಡಿ, ಇಂದಿನ ಸಂಸದರಿಗೆ ಕೊಂಡಜ್ಜಿ ಕೆರೆಗೆ ನೀರು ಎಲ್ಲಿಂದ ಬರುತ್ತೆ ಎಂಬುದೇ ತಿಳಿದಿಲ್ಲ, ಗುಟ್ಕಾ, ಕ್ಯಾನ್ಸರ್ ನೀಡಿ ಯುವಕರ ಆರೋಗ್ಯದ ಜತೆ ಆಟವಾಡುತ್ತಾರೆ. ಪತ್ನಿ ಪ್ರಭಾ, ಅಂಥಹ ಯುವಜನರಿಗೆ ಚಿಕಿತ್ಸೆ ನೀಡಲು ಶಿಬಿರ ಆಯೋಜನೆ ಮಾಡಲಿದ್ದಾರೆ. ಎಂಪಿಯವರು ದೆಹಲಿಯಲ್ಲಿ ಬಂಗಲೆ ಮಾಡಿಕೊಂಡಿದ್ದಾರೆ. ಗುಡ್ಡ ಬಗೆದಿದ್ದಾರೆ, ಆದ್ದರಿಂದ ವರಮಾನ ಹೆಚ್ಚಿಸಿಕೊಂಡಿದ್ದಾರೆ ಎಂದು ಟೀಕಿಸಿದರು.

ಐದು ಗ್ಯಾರಂಟಿ ಯೋಜನೆ ಜತೆ ಮತ್ತೆ ೨೫ ಯೋಜನೆ ಪಕ್ಷ ನೀಡಿದೆ. ಜನರಿಗೆ ಮುಖ್ಯವಾಗಿ ವಸತಿ, ಬಟ್ಟೆ, ನೀರು ಮತ್ತು ಆಹಾರ ನೀಡಲು ಆದ್ಯತೆ ನೀಡುತ್ತೇನೆ. ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸಿ ನಿಮ್ಮ ಜತೆ ಇರುತ್ತೇನೆ ಎಂದರು.

ಮುಖಂಡ ಶ್ರೀನಿವಾಸ್ ಮಾತನಾಡಿ, ಹರಿಹರಕ್ಕೆ ಮೆಡಿಕಲ್ ಕಾಲೇಜು ಮಂಜೂರು ವಿಷಯ ಮುಗಿದ ಅಧ್ಯಾಯವಾಗಿದ್ದು ಮಂಜೂರು ಮಾಡುವ ಅಧಿಕಾರ ಕೇಂದ್ರಕ್ಕಿದೆ. ಮತ್ತೆ ಮಾಜಿ ಶಾಸಕ ಶಿವಶಂಕರ್ ಮೆಡಿಕಲ್ ಕಾಲೇಜು ವಿಷಯ ಪ್ರಸ್ತಾಪ ಮಾಡುತ್ತಿರುವುದು ಒಣ ಟೀಕೆಯಾಗಿದೆ. ಆ ಕಾಲೇಜು ಬದಲಿಗೆ ಜಯದೇವ ಆಸ್ಪತ್ರೆ ಮತ್ತು ನರ್ಸಿಂಗ್ ಕಾಲೇಜು ಮಂಜೂರು ವಿಷಯವು ಜಿಲ್ಲಾಧಿಕಾರಿ ತಂಡ ಭೇಟಿಯಾದಾಗ ಚರ್ಚೆಯಾಗಿದೆ ಎಂದರು.

ಮಾಜಿ ಎಂಎಲ್ಸಿ ಜಲಜಾನಾಯ್ಕ್, ಎಸ್ ರಾಮಪ್ಪ, ಪಕ್ಷದ ಮುಖಂಡರಾದ ಬಿ.ಎಂ.ವಾಗೀಶ್‌ಸ್ವಾಮಿ, ಎಚ್.ಎಸ್.ನಾಗರಾಜ್, ಡಾ. ಚಂದ್ರು, ಸಿರಿಗೆರೆ ರಾಜಣ್ಣ, ಎ.ಗೋವಿಂದರೆಡ್ಡಿ, ಎಚ್.ಜಿ ಚಂದ್ರಶೇಖರ್, ಎನ್‌ಪಿ ತಿಮ್ಮನಗೌಡ, ಬಿ.ವೀರಯ್ಯ, ಎಚ್.ವೀರನಗೌಡ, ಜಿ.ಆನಂದ್, ಬೆಣ್ನೆಹಳ್ಳಿ ಹಾಲೇಶಪ್ಪ, ಜಾಕೀರ್, ಅಬಿದ್‌ಅಲಿ, ನಯಾಜ್, ಫೈಜು, ಗೌಡ್ರ ಮಂಜಣ್ಣ ಮತ್ತಿತರರು ಇದ್ದರು. ನೀರಾವರಿ ಇಲಾಖೆ ಆವರಣದಿಂದ ಜಿಗಳಿ ವೃತ್ತದವರೆಗೆ ರೋಡ್ ಶೋ ನಡೆಯಿತು. ಸಾವಿರಾರು ಕಾರ್ಯಕರ್ತರು ಇದ್ದರು.