ವಿದ್ಯಾರ್ಥಿಗಳ ಕೈಯಲ್ಲಿ ಪುಸ್ತಕವಿರಲಿ

| Published : Jan 14 2025, 01:01 AM IST

ಸಾರಾಂಶ

ಮಕ್ಕಳ ಮುಂದೆ ಪಾಲಕರಾದವರು ಯಾವ ಕೆಲಸ ಮಾಡುವರೋ ಅದೇ ಕೆಲಸವನ್ನು ಮಕ್ಕಳು ಕಲಿಯುತ್ತಾರೆ. ಪಾಲಕರ ಮೈಮೇಲೆ ಹರಕು ಬಟ್ಟೆ ಇದ್ದರೂ ಚಿಂತೆ ಇಲ್ಲ, ವಿದ್ಯಾರ್ಥಿಗಳ ಕೈಯಲ್ಲಿ ಪುಸ್ತಕವಿರಬೇಕು ಎಂದು ಬೆಂಗಳೂರು ಎಚ್‌ಎಎಲ್ ಏರ್‌ಕ್ರಾಫ್ಟ್‌ ಹಾಗೂ ಡಿಸೈನ್ ಸೆಂಟರ್ ವ್ಯವಸ್ಥಾಪಕ ಡಾ.ಮಹಾದೇವ ಆರ್.ನಾಗರಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಮಕ್ಕಳ ಮುಂದೆ ಪಾಲಕರಾದವರು ಯಾವ ಕೆಲಸ ಮಾಡುವರೋ ಅದೇ ಕೆಲಸವನ್ನು ಮಕ್ಕಳು ಕಲಿಯುತ್ತಾರೆ. ಪಾಲಕರ ಮೈಮೇಲೆ ಹರಕು ಬಟ್ಟೆ ಇದ್ದರೂ ಚಿಂತೆ ಇಲ್ಲ, ವಿದ್ಯಾರ್ಥಿಗಳ ಕೈಯಲ್ಲಿ ಪುಸ್ತಕವಿರಬೇಕು ಎಂದು ಬೆಂಗಳೂರು ಎಚ್‌ಎಎಲ್ ಏರ್‌ಕ್ರಾಫ್ಟ್‌ ಹಾಗೂ ಡಿಸೈನ್ ಸೆಂಟರ್ ವ್ಯವಸ್ಥಾಪಕ ಡಾ.ಮಹಾದೇವ ಆರ್.ನಾಗರಾಳ ಹೇಳಿದರು.

ಇಲ್ಲಿನ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಆವರಣದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳು ಬೀಳಗಿ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ೧೬೨ನೇ ಜಯಂತಿಯ ಪ್ರಯುಕ್ತ ವಿವೇಕ ಉತ್ಸವ-೯ ಸಮಾರಂಭದಲ್ಲಿ ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಬೇಡಿ, ಪಾಲಕರು ಮೊಬೈಲದಿಂದ ದೂರ ಮಾಡಿ. ಪಾಲಕರು ಅವರ ಮುಂದೆ ಪುಸ್ತಕ ಹಾಗೂ ಪತ್ರಿಕೆಗಳು ಓದು ಹವ್ಯಾಸ ಮಾಡಿ ಸಂಸ್ಕಾರ ಮತ್ತು ವಿದ್ಯೆ ಪೂರಕ ವಾತಾವರಣ ನಿರ್ಮಿಸಬೇಕು. ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಒಲವು ಮಕ್ಕಳಲ್ಲಿ ಸಂಶೋಧನಾ ಗುಣಧರ್ಮ ಬೆಳೆಸಬೇಕಿದೆ ಎಂದು ತಿಳಿಸಿದರು. ಶಿಕ್ಷಣದಿಂದ ಕ್ರಾಂತಿಕಾರಿ ಬದಲಾವಣೆಯಾಗಲು ಸಾಧ್ಯ. ರಾಜ್ಯದ ಬೇರೆ ಭಾಗದ ಜನರು ಬೀಳಗಿಯತ್ತ ಮುಖ ಮಾಡುವಂತೆ ಮಾಡಿ ಸಾವಿರಾರು ಮಕ್ಕಳಿಗೆ ಶಿಕ್ಷಣ ದೂರೆಯುಂತೆ ಮಾಡಿದ್ದಾರೆ. ಮಕ್ಕಳು ಓದುವಿನ ಜತೆಗೆ ಕೌಶಲ್ಯ ಹೊಂದುವಂತೆ ಮಾಡುವುದು ಬಹಳ ಅಗತ್ಯ. ಉತ್ತರ ಕರ್ನಾಟಕ ಎಲ್ಲ ಪ್ರಜ್ಞಾವಂತರ ಆದರೆ ಅವರಲ್ಲಿ ಆಸಕ್ತಿ ಕಡಿಮೆ. ಅವರಲ್ಲಿ ಕ್ರಿಯಾಶೀಲತೆ ಬೆಳೆಸುವಂತೆ ಮಾಡಬೇಕಾಗಿದೆ. ನಮ್ಮ ವೃತ್ತಿ ಜೀವನದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕಲಿಯುವ ಶಿಕ್ಷಣ ಜೀವನದ ಮುಖ್ಯ ಘಟ್ಟವಾಗಿರುತ್ತದೆ. ನಿಮ್ಮ ಪರಿಶ್ರಮವೇ ಮುಂದಿನ ಭವಿಷ್ಯ ರೂಪಿಸಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಹೆಚ್ಚು ಸಂಶೋಧನೆ ಕಡೆ ಗಮನ ಹರಿಸಿ ದೇಶದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಅರಳಿ ನಾಗರಾಜ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಾಲ್ಯದಲ್ಲಿ ಮಕ್ಕಳಿಗೆ ಆನ್‌ಲೈನ್ ಶಿಕ್ಷಣಕ್ಕಾಗಿ ಮೊಬೈಲ್‌ ಬಳಕೆಯಾಗುತ್ತಿದೆ. ಆದರೆ, ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳು, ಜಾಹೀರಾತುಗಳು ಬರುತ್ತವೆ. ಅವುಗಳು ಬಿತ್ತರಿಸದಂತೆ ನ್ಯಾಯಾಲಯದ ಮೊರೆ ಹೋಗುವ ಕೆಲಸವನ್ನು ಎಲ್ಲ ಶಿಕ್ಷಣ ಸಂಸ್ಥೆಗಳು ಮಾಡಬೇಕು. ಶಿಕ್ಷಕರು ಅಧ್ಯಯನ ಶೀಲವಾಗಿರಬೇಕು. ಸಮಾಜದ ಏಳಿಗೆಗಾಗಿ ನಮ್ಮ ಗುರಿಯಾಗಬೇಕು ಎಂದರು.ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎನ್.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಡಳಿತಾಧಿಕಾರಿ ಡಿ.ಎಸ್.ಕುಂಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಉಪನಿರ್ದೇಶಕ ಎಂ.ಜಿ.ದಾಸರ, ನಿವೃತ್ತಿ ಕಾರ್ಯನಿರ್ವಾಹಕ ಅಭಿಯಂತರ ಮಹೇಶ ಕಕರಡ್ಡಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕ ದಯಾನಂದ ಪಾಟೀಲ, ಬೀಳಗಿ ತಾಲೂಕು ವಕೀಲರ ಸಂಘದ ಉಪಾಧ್ಯಕ್ಷರಾದ ಎಚ್.ಆರ್.ಮಲ್ಲಾಪೂರ, ಉತ್ಸವ ಸಮಿತಿ ಅಧ್ಯಕ್ಷ ಸುಜಾತ ವಿ.ಹಿರೇನಿಂಗಪ್ಪನವರ, ಪ್ರಾಂಶುಪಾಲರಾದ ಜಿ.ಆರ್.ಪಾಟೀಲ, ಎಸ್.ಎಂ.ಕಲಬುರ್ಗಿ, ನಂದವಾಡಗಿ ಸರ್, ಸಂತೋಷ ಎಚ್.ಕತ್ತಿ, ಜೂನಿಯರ್ ವಿಷ್ಣವರ್ಧನ್ ಅಪೇಕ್ಷ ಮಂಜುನಾಥ, ಎಸ್.ಬಿ.ನಾಗರಾಜ, ಶಂಕರಗೌಡ ಪಾಟೀಲ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಪ್ರವೀಣ ಕಡಕೋಳ, ಪಪಂ ಸದಸ್ಯ ರಾಜು ಬೋರ್ಜಿ, ಬಿ.ಪಿ.ಪಾಟೀಲ, ರವಿ ಪಾಟೀಲ,ಗೌರಮ್ಮ ಕೆಂಗಲಗುತ್ತಿ ಸೇರಿದಂತೆ ಇತರರು ಇದ್ದರು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮಗಳು ನಡೆದವು.ನಮ್ಮ ಭಾರತದ ಸಂಸ್ಕೃತಿ, ಅಧ್ಯಾತ್ಮ, ಧಾರ್ಮಿಕ ಧರ್ಮ ಹಾಗೂ ನಮ್ಮ ಸನಾತನ ಧರ್ಮದ ಒಂದು ಸಂಸ್ಕೃತಿಯನ್ನು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಎಲ್ಲರು ಹುಬ್ಬೆರುವಂತ ಭಾಷಣ ಮಾಡಿದ ಒಬ್ಬ ಮೇರು ಸಂತ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಬೀಳಗಿ ಪುಣ್ಯ ನೆಲದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಂ.ಎನ್.ಪಾಟೀಲರು ಬೃಹತ್ ಹಾಗೂ ಹೈಟೆಕ್ ರೀತಿಯಲ್ಲಿ ಕೂಡಿದ ಮತ್ತು ಒಂದೇ ಸೂರಿನಲ್ಲಿ ಎಲ್ಲ ಮೂಲಭೂತ ಸೌಲಭ್ಯವುಳ್ಳ ಶಿಕ್ಷಣ ಸಂಸ್ಥೆ ಆರಂಭಿಸಿ ಕೆಜಿಯಿಂದ ಪಿಜಿಯವರೆಗೆ ಶಿಕ್ಷಣ ದೊರೆಯುವಂತೆ ಶೈಕ್ಷಣಿಕ ರಂಗದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದು ಈ ಭಾಗದ ವಿದ್ಯಾರ್ಥಿಗಳ ಪಾಲಿಗೆ ಜ್ಞಾನದ ಜ್ಯೋತಿಯನ್ನು ಬೆಳಗಿಸುವ ಕೆಲಸ ಮಾಡುತ್ತಿರುವ ಇವರ ಕಾರ್ಯ ಶ್ಲಾಘನೀಯ.

-ಡಾ. ಮಹಾದೇವ ಆರ್.ನಾಗರಾಳ, ಬೆಂಗಳೂರು ಎಚ್‌ಎಎಲ್ ಏರ್‌ಕ್ರಾಫ್ಟ್‌ ಹಾಗೂ ಡಿಸೈನ್ ಸೆಂಟರ್ ವ್ಯವಸ್ಥಾಪಕರು.

ಸಶಕ್ತ ಭಾರತ ನಿರ್ಮಾಣಕ್ಕೆ ಯುವ ಜನತೆ ಮುಂದಾಗಬೇಕಾಗಿದೆ. ಶಿಕ್ಷಕ ಶಿಕ್ಷಕಿಯರು ಮಕ್ಕಳನ್ನು ಆದರ್ಶ ವ್ಯಕ್ತಿಗಳನ್ನಾಗಿ ನಿರ್ಮಾಣ ಮಾಡಬೇಕು. ಶಿಕ್ಷಕರು ಬದಲಾದರೇ ಮಾತ್ರ ಮಕ್ಕಳು ಮಕ್ಕಳಲ್ಲಿ ಬದಲಾವಣೆ ತರಲು ಸಾಧ್ಯ. ಪ್ರತಿಯೊಬ್ಬರಲ್ಲಿ ಒಳ್ಳೆಯ ಅಲೋಚನೆ ಮೈಗೂಡಿಸಿಕೊಳ್ಳಬೇಕು. ಮಕ್ಕಳಿಗೆ ನೀನು ಹೀಗೆ ಮಾಡು ಎಂದು ಒತ್ತಡ ಹಾಕದಿರಿ ಮಕ್ಕಳಲ್ಲಿ ನೈತಿಕತೆ ಮತ್ತು ಧೈರ್ಯ ತುಂಬುವ ಕೆಲಸವನ್ನು ಪಾಲಕರು ಹಾಗೂ ಶಿಕ್ಷಕರು ಮಾಡಬೇಕು.

-ಅರಳಿ ನಾಗರಾಜ, ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ.