ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಮಹಿಳೆಯರು ದೌರ್ಬಲ್ಯತೆಯನ್ನು ಮೆಟ್ಟಿನಿಂತು ಸಾಧಿಸುವ ಛಲ ಮೈಗೂಡಿಸಿಕೊಳ್ಳಬೇಕೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಸುಮಾ ಸತೀಶ್ ತಿಳಿಸಿದರು.ನಗರದ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ಚಕೋರ ತುಮಕೂರು ಜಿಲ್ಲಾ ಉಪನ್ಯಾಸ ಮಾಲಿಕೆಯಲ್ಲಿ ಇತ್ತೀಚಿನ ಕನ್ನಡ ಮಹಿಳಾ ಕಾವ್ಯ, ಸ್ತ್ರೀವಾದಿ ನೆಲೆಗಳು ಎಂಬ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ತ್ರೀ ಸಂವೇದನೆ ಎಂದರೆ ಮಹಿಳೆಯರು ತಮ್ಮ ಜೀವನದ ಅನುಭವಗಳು, ಭಾವನೆಗಳು, ಗ್ರಹಿಕೆಗಳು ಮತ್ತು ಸಾಮಾಜಿಕ ಸ್ಥಾನಮಾನವನ್ನು ಅರ್ಥ ಮಾಡಿಕೊಳ್ಳುವ ಮತ್ತು ಪ್ರತಿಕ್ರಿಯಿಸುವ ಒಂದು ವಿಶಿಷ್ಟ ಮತ್ತು ಆಳವಾದ ದೃಷ್ಟಿಕೋನ. ಇದು ಮಹಿಳೆಯರು ಪ್ರಪಂಚವನ್ನು ನೋಡುವ ಅನುಭವಿಸುವ ಮತ್ತು ಅರ್ಥೈಸಿಕೊಳ್ಳುವ ರೀತಿಯಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಛಾಪು ಮೂಡಿಸುವ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿರುವ ಮಹಿಳೆ ಪುರುಷ ಪ್ರಧಾನ ಸಮಾಜದಲ್ಲಿ ತನ್ನ ಸ್ಥಾನಮಾನ ಗುರ್ತಿಸಿಕೊಂಡಿದ್ದಾಳೆ. ಮತ್ತಷ್ಟು ಆತ್ಮಸ್ಥೈರ್ಯ, ಆತ್ಮವಿಶ್ವಾಸ ಬೆಳೆಸಿಕೊಳ್ಳುವ ಮೂಲಕ ಪರಿಪೂರ್ಣ ಮಹಿಳೆಯಾಗಬೇಕು ಎಂದರು. ಗುಬ್ಬಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕಿ ಡಾ. ಬಿ.ಎನ್ ಅರುಣಕುಮಾರಿ ಉಪನ್ಯಾಸ ನೀಡುತ್ತಾ, ಸ್ತ್ರೀ ಸಂವೇದನಾ ಬಗ್ಗೆ ಈಗಿನ ಯುವ ಪೀಳಿಗೆ ತಿಳಿದುಕೊಳ್ಳುವುದು ಮುಖ್ಯ. ಸಮಾಜದಲ್ಲಿ ಹೆಣ್ಣು ಎದುರಿಸುವ ಅಸಮಾನತೆ, ತಾರತಮ್ಯ ಮತ್ತು ಸವಾಲುಗಳ ಬಗ್ಗೆ ಪ್ರತಿಕ್ರಿಸುವ ಸಂವೇದನೆ ಬೆಳೆಸಿಕೊಳ್ಳಬೇಕು. ಸಾಹಿತ್ಯ ಕೃತಿಗಳಲ್ಲಿ ಮಹಿಳಾ ಪಾತ್ರಗಳ ಆಂತರಿಕಲೋಕ ಅವರ ಹೋರಾಟ, ಆಸೆಗಳು ಮತ್ತು ಭಾವನೆಗಳನ್ನು ಚಿತ್ರಿಸುವ ರೀತಿ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಒಂದು ಕೃತಿಯು ಸ್ತ್ರೀ ಸಂವೇದನೆಯನ್ನು ಸೂಕ್ಷ್ಮವಾಗಿ ಮತ್ತು ಸಕಾರಾತ್ಮಕವಾಗಿ ಚಿತ್ರಿಸುತ್ತದೆ. ಸಮಾಜ ಮತ್ತು ಮಾನವ ಸಂಬಂಧಗಳ ಮೇಲೆ ಸಕಾರಾತ್ಮಕ ಪ್ರಭಾವ ಬೀರಲು ಹೇಗೆ ಸಹಾಯ ಮಾಡುತ್ತದೆ. ಒಂದು ಹೆಣ್ಣು ಬದುಕಿನಲ್ಲಿ ಹೇಗೆಲ್ಲಾ ತಮ್ಮ ಪಾತ್ರಗಳನ್ನು ನಿರ್ವಹಿಸುತ್ತಾಳೆ ಹಾಗೂ ಆ ಹಾದಿಯಲ್ಲಿ ಉಂಟಾಗುವಂತಹ ಒತ್ತಡ ಮತ್ತು ಜವಾಬ್ದಾರಿಗಳ ಸೂಕ್ಷ್ಮತೆಗಳ ಬಗ್ಗೆ ತಿಳಿಸಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಟಿ.ಆರ್.ವಿಜಯ ಕುಮಾರಿ ವಹಿಸಿದ್ದರು. ಕಾರ್ಯಕ್ರಮದ ನಿವೃತ್ತ ಕನ್ನಡ ಪ್ರಾಧ್ಯಾಪಕ ನಾಗರಾಜ ಶೆಟ್ಟಿ, ಕನ್ನಡ ವಿಭಾಗ ಮುಖ್ಯಸ್ಥ ಡಿ. ರೇಣುಕಾ, ಪ್ರಾಧ್ಯಾಪಕರಾದ ಇಂದ್ರೇಶ್, ಶ್ರೀನಿವಾಸ್, ವಿಶ್ವನಾಥ್, ಭರತ್ ಸೇರಿದಂತೆ ಬೋಧಕ ವರ್ಗದವರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೋಟ್.....
ಶತ ಶತಮಾನಗಳಿಂದಲೂ ಸಹ ಸ್ತ್ರೀಯರನ್ನು ಪೂಜಿಸುವ ನೆಲ ನಮ್ಮದು. ಆದರೆ ಕೆಲ ಶಕ್ತಿಗಳು ಇದನ್ನು ತಡೆಯಲು ಯತ್ನಿಸಿದ್ದು ನಿಜ. ತಾಯಿ, ಅಕ್ಕ, ತಂಗಿ, ಸೊಸೆ, ಮಗಳು ಸೇರಿದಂತೆ ನಾನು ಸಂಬಂಧಗಳಲ್ಲಿ ಸ್ತ್ರೀಯರನ್ನು ಒಪ್ಪಿಕೊಂಡು ಅವಳಿಗೆ ಗೌರವ ಸ್ಥಾನಗಳನ್ನು ನೀಡಿರುವ ಸಮಾಜದಲ್ಲಿ ಇಂದು ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಉನ್ನತ ಸ್ಥಾನದಲ್ಲಿದ್ದು ಅವರೆಲ್ಲರೂ ಸಹ ಸಬಲಾಗಿರುವುದು ತಮ್ಮ ಆತ್ಮ ಬಲದಿಂದ ಎನ್ನುವುದನ್ನು ನಾವುಗಳು ಮರೆಯಬಾರದು - ಸುಮಾ ಸತೀಶ್ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ)
)
;Resize=(128,128))
;Resize=(128,128))
;Resize=(128,128))
;Resize=(128,128))