ಸಂಭ್ರಮದ ಹಜರತ್ ಮಹಬೂಬ ಸುಬ್ಹಾನಿ ದರ್ಗಾ ಉರೂಸ್‌

| Published : Oct 06 2025, 01:01 AM IST

ಸಂಭ್ರಮದ ಹಜರತ್ ಮಹಬೂಬ ಸುಬ್ಹಾನಿ ದರ್ಗಾ ಉರೂಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಉರೂಸ್‌ ಅಂಗವಾಗಿ ವಿವಿದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಉರೂಸ್‌ಗೆ ಆಗಮಿಸಿದ ಭಕ್ತರಿಗೆ ಪ್ರಸಾದ (ಊಟ)ದ ವ್ಯವಸ್ಥೆ ಕಲ್ಪಿಸಲಾಗಿತ್ತು.

ರೋಣ: ಹಿಂದೂ- ಮುಸ್ಲಿಂ ಭಾವೈಕ್ಯತೆ ಪ್ರತೀಕವಾಗಿರುವ ಪಟ್ಟಣದ ಬಿಇಒ ಕಚೇರಿ ಹತ್ತಿರ ಇರುವ ಹಜರತ್ ಮೆಹಬೂಬ ಸುಬ್ಹಾನಿ ದರ್ಗಾ ಉರೂಸ್‌ ಶುಕ್ರವಾರ ಸಂಜೆ ಶ್ರದ್ಧಾ-ಭಕ್ತಿಯಿಂದ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಜಿ.ಎಸ್. ಪಾಟೀಲ, ಉರೂಸ್‌ ಭಾವೈಕ್ಯತೆ, ಸಾಮರಸ್ಯ ಬೆಸೆಯುವ ಕೊಂಡಿಯಾಗಿದೆ. ಹಜರತ್‌ ಮಹಬೂಬ ಸುಬ್ಹಾನಿ ದರ್ಗಾ ಉರೂಸ್‌ ಅನೇಕ ವರ್ಷದಿಂದ ಸರ್ವ ಧರ್ಮದ ಭಾವೈಕ್ಯತೆ ಪ್ರತೀಕವಾಗಿ ನಡೆದುಕೊಂಡು ಬಂದಿದೆ. ಮಹಬೂಬ ಸುಬ್ಹಾನು ದರ್ಗಾ ನಿರ್ಮಾಣಕ್ಕೆ ಜಾಗ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಉರೂಸ್‌ ಅಂಗವಾಗಿ ವಿವಿದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಉರೂಸ್‌ಗೆ ಆಗಮಿಸಿದ ಭಕ್ತರಿಗೆ ಪ್ರಸಾದ (ಊಟ)ದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪಟ್ಟಣದ ಸಾಯಿನಗರ, ಲಕ್ಷ್ಮೀನಗರ, ಶ್ರೀನಗರ ಬಡಾವಣೆ, ಕಲ್ಯಾಣನಗರ, ಹೂಲಿಯವ ಚಾಳ, ಶ್ಯಾನಬೋಗರ ಚಾಳ, ಶಿವಾನಂದ ನಗರ, ಕುರಬಗಲ್ಲಿ ಬಡಾವಣೆ, ಹೋರಪೇಟಿ ಓಣಿ, ಶಿವಪೇಟಿ ಬಡಾವಣೆ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಜನತೆ ಆಗಮಿಸಿದ್ದರು.

ಸುಲೇಮಾನ ಸೈಯದ್ ಶಾವಲಿ ದರ್ಗಾ ಅಜ್ಜನವರು ವಹಿಸಿ, ಆಶೀರ್ವಚನ ನೀಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ‌ ಸಮಿತಿ ಅಧ್ಯಕ್ಷ ಮಿಥುನ್‌ ಪಾಟೀಲ, ಹಜರತ್ ಮೆಹಬೂಬ ಸು‌ಬ್ಹಾನಿ ಯುವ ಸಂಘ ಅಧ್ಯಕ್ಷ ಬಾವಾಸಾಬ ಆರ್. ಬೆಟಿಗೇರಿ, ಉಪಾಧ್ಯಕ್ಷ ಮಲಿಕ ಎಚ್. ಯಲಿಗಾರ, ಕಾರ್ಯದರ್ಶಿ ಬಾಬು ಓಲಿ, ಬಸಪ್ಪ ಕುರಿ, ರಾಜಸಾಹೇಬ ಹುಸೇನ ಬಾವಿ, ಅಶ್ಪಾಕ ಮದರಂಗಿ, ರೆಹಮಾನ್ ಕೊಪ್ಪಳ, ಮಾಬುಸಾಬ ರಾಜಖಾನ್, ಮಂಜು, ರಫೀಕ ಬಾಡಿನ, ರಜಾಕ್ ಜಕ್ಕಲಿ, ಮಾಬುಸಾಬ ಮುಜಾವರ, ನಬಿಸಾಬ ಗುದಿಗನೂರ, ರಿಯಾಜ್ ರಾಜಖಾನ ಮುಂತಾದವರು ಉಪಸ್ಥಿತರಿದ್ದರು.ಪುಂಡರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ

ಗದಗ: ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ಅವರಿಗೆ ಸೀನೆ ಮೆ ಗೋಲಿ ಮಾರೋ ಎಂದು ಧಮಕಿ ಕೊಡುವ ಪುಂಡರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಅಲ್ಪಸಂಖ್ಯಾತ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಜಿಲ್ಲಾ ಘಟಕದ ಅಧ್ಯಕ್ಷ ಉಮರ ಫಾರೂಕ ಹುಬ್ಬಳ್ಳಿ, ಇರ್ಫಾನ್ ಡಂಬಳ, ಖಾಲಿದ್ ಕೊಪ್ಪಳ, ಎಂ.ಬಿ. ನದಾಫ್, ಉಮರ್ ಫಾರುಖ್ ಬಾರಿಗಿಡದ, ರಮೇಶ ಹೊಣ್ಣಿನಾಯ್ಕರ, ಸಲೀಂ ಬಳ್ಳಾರಿ, ಮಹಬೂಬ ಲಕ್ಷ್ಮೇಶ್ವರ, ಸರಫ್‌ರಾಜ್ ಬಬರ್ಚಿ, ನಿಜಾಮುದ್ದಿನ್ ಉಪಸ್ಥಿತರಿದ್ದರು.