ಯಾರೂ ಕುಡಿತಕ್ಕೆ ಬಲಿಪಶುವಾಗಬೇಡಿ

| Published : Jul 15 2024, 01:54 AM IST

ಸಾರಾಂಶ

ತಾವುಗಳು ಮದ್ಯ ಕುಡಿಯುವುದರಿಂದ ಗಾಂಜಾ ಸೇವನೆಯಿಂದ ಕಳ್ಳಬಟ್ಟಿ ಕುಡಿಯುವುದರಿಂದ ತಾವುಗಳು ಜೀವ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ

ಕನ್ನಡಪ್ರಭ ವಾರ್ತೆ ಹ್ಯಾಂಡ್‌ ಪೋಸ್ಟ್

ಹಾಡಿಯ ಜನರು ಯಾರು ಕೂಡ ಕುಡಿತಕ್ಕೆ ಹಾಗೂ ಅಕ್ರಮ ಮದ್ಯ ಮಾರಾಟಕ್ಕೆ ಬಲಿಪಶುವಾಗದೆ ಸಮಾಜದತ್ತ ಮುಖಮಾಡಿ ಒಳ್ಳೆಯ ಪ್ರಜೆಗಳಾಗಿ ಬದುಕುವಂತೆ ಎಚ್‍.ಡಿ. ಕೋಟೆ ಅಬಕಾರಿ ಇನ್‌ಸ್ಪೆಕ್ಟರ್‌ ಶಿವರಾಜು ಸಲಹೆ ನೀಡಿದರು.

ಗಾಂಜಾ ಮತ್ತು ಮಾದಕ ವಸ್ತುಗಳಿಂದ ಉಂಟಾಗುವ ತೊಂದರೆ ತಡೆಗಟ್ಟುವ ಸಂಬಂಧ ಜನ ಜಾಗೃತಿ ಸಭೆಯಲ್ಲಿ ಎಚ್.ಡಿ. ಕೋಟೆ ತಾಲೂಕಿನ ಮಾಳದಹಾಡಿ ಮತ್ತು ಹುಣಸೆಕುಪ್ಪೆ ಹಾಡಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ತಾವುಗಳು ಮದ್ಯ ಕುಡಿಯುವುದರಿಂದ ಗಾಂಜಾ ಸೇವನೆಯಿಂದ ಕಳ್ಳಬಟ್ಟಿ ಕುಡಿಯುವುದರಿಂದ ತಾವುಗಳು ಜೀವ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಇಂತಹ ಕೆಟ್ಟ ಚಟಗಳಿಗೆ ಬಲಿಯಾಗಬಾರದು. ತಾವು ಸಂಪಾದಿಸಿದ ಹಣವನ್ನು ಕೂಡಿಟ್ಟು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತುಕೊಟ್ಟು ಸಮಾಜದಲ್ಲಿ ಎಲ್ಲಾ ರೀತಿಯಲ್ಲಿ ಬದುಕಬೇಕು ಎಂದರು.

ಈ ಅಬಕಾರಿ ಎಸ್‌ಐ ಪ್ರಿಯಾಂಕ, ಜಿಲ್ಲಾ ಅಭಿಷೇಕಣ ವೀಕ್ಷಣೆ ದಳದ ಅಧಿಕಾರಿ ಲೋಕೇಶ್, ಸಿಬ್ಬಂದಿ ಶಿವಮೂರ್ತಿ ಹಾಗೂ ಹಾಡಿಯ ಜನರು ಇದ್ದರು.