ಸಾರಾಂಶ
ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಮುಖ್ಯಮಂತ್ರಿ ಹುದ್ದೆ ಆಲಕಂರಿಸಿದ ಕುಮಾರಸ್ವಾಮಿ, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿಲ್ಲ. ಅಧಿಕಾರಕ್ಕಾಗಿ ತಮ್ಮನ್ನು ಗೆಲ್ಲಿಸಿದ ಕ್ಷೇತ್ರ ಬಿಟ್ಟು ಮಂಡ್ಯಕ್ಕೆ ಹೋದ ಅವರು ಈಗ ಯಾವ ಮುಖವಿಟ್ಟುಕೊಂಡು ಮತ ಕೇಳಲು ಬಂದಿದ್ದಾರೆ
ಚನ್ನಪಟ್ಟಣ: ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಮುಖ್ಯಮಂತ್ರಿ ಹುದ್ದೆ ಆಲಕಂರಿಸಿದ ಕುಮಾರಸ್ವಾಮಿ, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿಲ್ಲ. ಅಧಿಕಾರಕ್ಕಾಗಿ ತಮ್ಮನ್ನು ಗೆಲ್ಲಿಸಿದ ಕ್ಷೇತ್ರ ಬಿಟ್ಟು ಮಂಡ್ಯಕ್ಕೆ ಹೋದ ಅವರು ಈಗ ಯಾವ ಮುಖವಿಟ್ಟುಕೊಂಡು ಮತ ಕೇಳಲು ಬಂದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಪ್ರಶ್ನಿಸಿದರು.
ತಾಲೂಕಿನ ಹುಣಸನಹಳ್ಳಿಯಲ್ಲಿ ಆಯೋಜಿಸಿದ್ದ ತಿಗಳ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು.ನಿಖಿಲ್ ಎರಡು ಬಾರಿ ಸೋತಿದ್ದಾರೆ ಮತ ಕೊಡಿ ಅಂತಾ ಕೇಳುತ್ತಿದ್ದಾರೆ. ಏನೂ ಕೆಲಸ ಮಾಡದ ನಿಖಿಲ್ ಎರಡು ಬಾರಿ ಸೋತಿದ್ದಾನೆಂದು ಮತ ಕೊಡುವುದಾದರೆ, ತಾಲೂಕಿನ ಕೆರೆಕಟ್ಟೆಗಳನ್ನು ತುಂಬಿಸಿ, ತಾಲೂಕು ಹಸಿರಿನಿಂದ ಕಂಗೊಳಿಸುವಂತೆ ಮಾಡಿದ ಯೋಗೇಶ್ವರ್‌ಗೆ ಏನು ಕೊಡಬೇಕು ನೀವೇ ಹೇಳಿ ಎಂದು ಮತದಾರರನ್ನು ಪ್ರಶ್ನಿಸಿದರು.
ಈಗ ಚುನಾವಣೆ ಗೆಲ್ಲಲು ರೋಡ್ ರೋಡ್‌ನಲ್ಲಿ ಚೀಲ ಹಿಡಿದುಕೊಂಡು ಸುತ್ತುತ್ತಿದ್ದಾರೆ. ಕೋಳಿಗಳನ್ನ ಹಂಚುತ್ತಿದ್ದಾರೆ. ಇವರು ಟೂರಿಂಗ್ ಟಾಕೀಸ್‌ಗಳು. ಯೋಗೇಶ್ವರ್ ಗೆದ್ದರೂ ಇಲ್ಲೇ, ಸೋತರೂ ಇಲ್ಲೇ. ನಿಖಿಲ್ ಮಂಡ್ಯ, ರಾಮನಗರ, ಹಾಸನಕ್ಕೆ ಎಂದು ಹೋಗುತ್ತಿರುತ್ತಾರೆ ಎಂದು ವ್ಯಂಗ್ಯವಾಡಿದರು.
ಯೋಗೇಶ್ವರ್ ಗೆದ್ದರೆ ಕ್ಷೇತ್ರಕ್ಕೆ ಅನುದಾನ ತಂದು ಇಲ್ಲೇ ಇದ್ದು ಕೆಲಸ ಮಾಡ್ತಾರೆ. ನಿಖಿಲ್ ಗೆದ್ದರೆ ಎಲ್ಲಿ ತರುತ್ತಾರೆ. ಎಚ್ಡಿಕೆ ಸಿಎಂ ಆದಾಗ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಇದ್ದರು. ಇಲ್ಲಿನ ಮುಖಂಡರನ್ನು ಒಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ. ಬೇರೆಯವರನ್ನು ಬಿಟ್ಟುಕೊಳ್ಳುತ್ತಿದ್ದರು. ನಿಖಿಲ್ ಗೆದ್ದರೆ ಬಾಂಬೆ, ದೆಹಲಿ ಅಂತ ಹೋಗ್ತಾರೆ. ನಿಮ್ಮ ಕೈಗೆ ಸಿಗಲ್ಲ. ಹಾಗಾಗಿ ಯೋಗೆಶ್ವರ್ ಗೆಲ್ಲಿಸಿ ಎಂದು ಮನವಿ ಮಾಡಿದರು.
ಗ್ಯಾರಂಟಿಗಳನ್ನ ಕುಮಾರಸ್ವಾಮಿ ಟೀಕಿಸಿದ್ರು. ಅವರು ಗ್ಯಾರಂಟಿಗಳಿಗೆ ವಿರೋಧವಾಗಿದ್ದಾರೆ. ಕುಮಾರಸ್ವಾಮಿ ಚುನಾವಣೆಯಲ್ಲಿ ಎಲ್ಲ ತಂತ್ರ ಮಾಡುತ್ತಾರೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ಕಾಂಗ್ರೆಸ್ ಅನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. ಪೊಟೋ೯ಸಿಪಿಟಿ೪: ಹುಣಸನಹಳ್ಳಿ ಗ್ರಾಮದಲ್ಲಿ ನಡೆದ ತಿಗಳ ಸಮಾಜದ ಸಭೆಯಲ್ಲಿ ಭಾಗವಹಿಸಿದ್ದ ಜನಸ್ತೋಮ.