ಎಚ್‌ಡಿಕೆ, ಸೋಮಣ್ಣಗೆ ಸಚಿವ ಸ್ಥಾನ: ಅಭಿವೃದ್ಧಿಗೆ ವೇಗ ಹೆಚ್ಚಳ

| Published : Jun 11 2024, 01:31 AM IST

ಎಚ್‌ಡಿಕೆ, ಸೋಮಣ್ಣಗೆ ಸಚಿವ ಸ್ಥಾನ: ಅಭಿವೃದ್ಧಿಗೆ ವೇಗ ಹೆಚ್ಚಳ
Share this Article
  • FB
  • TW
  • Linkdin
  • Email

ಸಾರಾಂಶ

ತುಮಕೂರು ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಭರ್ಜರಿ ಗೆಲುವು ಸಾಧಿಸಿರುವುದು ಸಂತಸವಾಗಿದ್ದು, ಎಚ್‌.ಡಿ ಕುಮಾರಸ್ವಾಮಿ, ಸೋಮಣ್ಣ ಕೇಂದ್ರ ಸಚಿವರಾಗಿರುವುದು ಅಭಿವೃದ್ಧಿಗೆ ವೇಗ ನೀಡಿದಂತಾಗಿದೆ ಎಂದು ಮಾಜಿ ಶಾಸಕ ಎಚ್.ನಿಂಗಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ತುಮಕೂರು ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಭರ್ಜರಿ ಗೆಲುವು ಸಾಧಿಸಿರುವುದು ಸಂತಸವಾಗಿದ್ದು, ಎಚ್‌.ಡಿ ಕುಮಾರಸ್ವಾಮಿ, ಸೋಮಣ್ಣ ಕೇಂದ್ರ ಸಚಿವರಾಗಿರುವುದು ಅಭಿವೃದ್ಧಿಗೆ ವೇಗ ನೀಡಿದಂತಾಗಿದೆ ಎಂದು ಮಾಜಿ ಶಾಸಕ ಎಚ್.ನಿಂಗಪ್ಪ ಹೇಳಿದರು.ನಗರದ ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ತುಮಕೂರು ಸಂಸದ ವಿ.ಸೋಮಣ್ಣ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಸಂದರ್ಭದಲ್ಲಿ ಸೋಮವಾರ ಮುಖಂಡರು ಸಂಭ್ರಮ ಆಚರಿಸಿ ಮಾತನಾಡಿದರು. ಸೋಮಣ್ಣ ಪ್ರಥಮ ಬಾರಿಗೆ ತುಮಕೂರಿಗೆ ಕೇಂದ್ರ ಮಂತ್ರಿ ಸ್ಥಾನ ದೊರೆಯಲು ಕಾರಣರಾಗಿದ್ದು, ಜೆಡಿಎಸ್ ಹಾಗೂ ಬಿಜೆಪಿಗೆ ದೊಡ್ಡ ಶಕ್ತಿ ಬಂದಿದೆ ಎಂದರು.ನಮ್ಮ ಜಿಲ್ಲೆ ವ್ಯಾಪ್ತಿಯ ಸಂಸದರಾದ ಡಾ.ಮಂಜುನಾಥ್ ಹಾಗೂ ಗೋವಿಂದ ಕಾರಜೋಳ ಅವರೂ ಎನ್‌ಡಿಎ ಸಂಸದರಾಗಿರುವುದು ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಾಗಿದೆ. ಜೆಡಿಎಸ್ ಅನ್ನು ಮಗಿಸುತ್ತೇವೆ ಎಂದು ಕೆಲವರು ಹೇಳಿಕೊಂಡಿದ್ದರು. ಅದು ಸಾಧ್ಯವಿಲ್ಲ, ಫಿನೀಕ್ಸ್ ಪಕ್ಷಿಯಂತೆ ಪಕ್ಷ ಮತ್ತೆ ಮತ್ತೆ ಎದ್ದು ನಿಲ್ಲುತ್ತದೆ. ಜೆಡಿಎಸ್‌ಗೆ ಯಾವತ್ತೂ ಅಂತ್ಯವಿಲ್ಲ ಎಂದು ಹೇಳಿದರು.ಜಿಲ್ಲಾ ಜೆಡಿಎಸ್ ಅಧ್ಯಕ್ಷ ಟಿ.ಆರ್.ಆಂಜನಪ್ಪ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಒಟ್ಟಾಗಿ ಕೆಲಸ ಮಾಡಿದ್ದ ಪರಿಣಾಮ ವಿ.ಸೋಮಣ್ಣ ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತಗಳಿಕೆಯಲ್ಲಿ ಮುನ್ನಡೆ ಸಾಧಿಸಿ ದಾಖಲೆಯ ಗೆಲುವು ಪಡೆದರು. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳ ಮೈತ್ರಿ ಅಭ್ಯರ್ಥಿಗಳು ಜಿಲ್ಲೆಯ ಎಲ್ಲಾ 11 ಕ್ಷೇತ್ರಗಳಲ್ಲಿ ಗೆಲ್ಲಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಎಚ್.ಡಿ.ಕುಮಾರಸ್ವಾಮಿ ಹಾಗೂ ಸೋಮಣ್ಣ ಕೇಂದ್ರದ ಮಂತ್ರಿಯಾಗಿದ್ದು, ಅವರಿಂದ ರೈತಪರ, ಜನಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ವಿಶ್ವಾಸದಿಂದ ನಿರೀಕ್ಷಿಸಬಹುದು. ಇಬ್ಬರೂ ಜನಪರ, ಅಭಿವೃದ್ಧಿಪರ ನಾಯಕರು ಎಂದು ಹೇಳಿದರು. ಇದೇ ದಿನ ಜನ್ಮದಿನ ಆಚರಿಸಿಕೊಳ್ಳುತ್ತಿರುವ ತುರುವೇಕೆರೆ ಕ್ಷೇತ್ರ ಶಾಸಕ ಎಂ.ಟಿ.ಕೃಷ್ಣಪ್ಪಗೆ ಆರ್.ಸಿ.ಆಂಜನಪ್ಪ ಶುಭಾಶಯ ಕೋರಿದರು.ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಜೆಡಿಎಸ್ ಎಸ್ಟಿ ಘಟಕ ರಾಜ್ಯ ಉಪಾಧ್ಯಕ್ಷ ಸೋಲಾರ್ ಕೃಷ್ಣಮೂರ್ತಿ, ರೈತ ಘಟಕ ಜಿಲ್ಲಾಧ್ಯಕ್ಷ ರಂಗನಾಥ್, ನಗರ ಪಾಲಿಕೆಯ ಮಾಜಿ ಸದಸ್ಯರಾದ ಟಿ.ಕೆ.ನರಸಿಂಹಮೂರ್ತಿ, ಟಿ.ಎಚ್.ಬಾಲಕೃಷ್ಣ, ಎಚ್.ಡಿ.ಕೆ.ಮಂಜುನಾಥ್, ಧರಣೇಂದ್ರಕುಮಾರ್, ಶ್ರೀನಿವಾಸ ಪ್ರಸಾದ್, ಲಕ್ಷ್ಮೀನರಸಿಂಹರಾಜು, ರಾಮಕೃಷ್ಣಯ್ಯ, ಮುಖಂಡರಾದ ಟಿ.ಎಲ್.ಕುಂಭಯ್ಯ, ರವೀಶ್ ಜಹಾಂಗೀರ್, ಬೆಳಗುಂಬ ವೆಂಕಟೇಶ್, ಪ್ರಸನ್ನ(ಪಚ್ಚಿ), ಕುಸುಮಾ ಜಗನ್ನಾಥ್, ಚೆಲುವರಾಜು, ಗಣೇಶ್, ವೀರಕ್ಯಾತಯ್ಯ, ಯಜಮಾನ್ ಗಂಗಹನುಮಯ್ಯ, ತಾಹೇರಾ ಕುಲ್ಸಮ್, ಲಕ್ಷ್ಮಮ್ಮ, ಯಶೋಧ, ಜಯಮ್ಮ, ಲೀಲಾವತಿ, ರಾಧಾಗೌಡ ಭಾಗವಹಿಸಿದ್ದರು.