ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಅಭೂತ ಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ಪಟ್ಟಣದ ಲಕ್ಷ್ಮೀ ದೇವಿ ವೃತ್ತದ ಬಳಿ ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ, ಜೆಡಿಎಸ್ ನಗರಘಟಕ ಅಧ್ಯಕ್ಷ, ಪುರಸಭಾ ಸದಸ್ಯ ಎಸ್.ಪ್ರಕಾಶ್ ನೇತೃತ್ವದಲ್ಲಿ ಸೇರಿದನೂರಾರು ಕಾರ್ಯಕರ್ತರು ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಎಚ್.ಡಿ ಕುಮಾರಸ್ವಾಮಿ ಪರ ಘೋಷಣೆ ಕೂಗಿ ಸಾರ್ವಜನಿಕರಿಗೆ ಸಹಿ ಹಂಚಿ, ಪಠಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಇದಕ್ಕೂ ಮುನ್ನ ಶ್ರೀನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ರವರ ಜಯಂತಿ ಅಂಗವಾಗಿ ನಾಲ್ವಡಿ ರವರ ಭಾವಚಿತ್ರಕ್ಕೆ ಮುಖಂಡರು ಪುಷ್ಪನಮನ ಸಲ್ಲಿಸಿ ಜಯಂತಿ ಆಚರಿಸಿದರು.ಈ ವೇಳೆ ಪುರಸಭಾ ಸದಸ್ಯರಾದ ಗಂಜಾಂ ಶಿವು, ಎಸ್.ಟಿ ರಾಜು, ಲಿಂಗರಾಜು, ಮುಖಂಡರಾದ ಉಮೇಶ್‌ಕುಮಾರ್, ಸುಬ್ಬಣ್ಣ, ಪುಟ್ಟರಾಮು, ದರ್ಶನ್ ಲಿಂಗರಾಜು, ಬಾಲರಾಜ್, ರಾಕಿ, ಪ್ರೇಮ್ ಸೇರಿದಂತೆ ನೂರಾರು ಜೆಡಿಎಸ್, ಬಿಜೆಪಿ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.ಜೆಡಿಎಸ್, ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ
ಕನ್ನಡಪ್ರಭ ವಾರ್ತೆ ಹಲಗೂರುಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗೆಲುವು ಸಾಧಿಸುತ್ತಿದ್ದಂತೆ ಹಲಗೂರು ವೃತ್ತದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪ್ರಧಾನಿ ಮೋದಿ ಮತ್ತು ಡಾ.ಮಂಜುನಾಥ್ ಪರ ಜಯ ಘೋಷಣೆ ಕೂಗುತ್ತಾ ಸಡಗರದಿಂದ ವಿಜಯೋತ್ಸವ ಆಚರಿಸಿದರು.ಜೆಡಿಎಸ್ ಕಾರ್ಯಕರ್ತರಾದ ಸಾಗ್ಯ ಗ್ರಾಮದ ಎಸ್.ಇ.ಪುಟ್ಟಸ್ವಾಮಿ ಮಾತನಾಡಿ, ನೆಚ್ಚಿನ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಅಧಿಕ ಮತಗಳಿಂದ ಗೆಲವು ಸಾಧಿಸಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ. ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಅವರು ಶ್ರಮಿಸಲಿದ್ದಾರೆ ಎಂದರು.
ಇದುವರೆಗೂ ಬಡವರ ಏಳಿಗೆಗಾಗಿ ಹಗಲಿರುಳೂ ಶ್ರಮಿಸಿದ ನಾಯಕ ಅವರು. ಕಾಂಗ್ರೆಸ್ ಪಕ್ಷದ ದುರಾಡಳಿತವನ್ನು ನೋಡಿ ಜಿಲ್ಲೆಯ ಜನರು ನಮ್ಮ ಮೈತ್ರಿ ಪಕ್ಷದ ಅಭ್ಯರ್ಥಿಗೆ ಅಧಿಕ ಮತ ನೀಡುವುದಕ್ಕೆ ಆಭಾರಿಯಾಗಿದ್ದೇನೆ ಎಂದರು.ಬಿಜೆಪಿ ಯುವ ಮುಖಂಡ ಗೊಲ್ಲರಹಳ್ಳಿ ಜಿ.ಕೆ.ನಾಗೇಶ್ ಮಾತನಾಡಿ, ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಚ್.ಡಿ. ಕುಮಾರಸ್ವಾಮಿ 2 ಲಕ್ಷಕ್ಕೂ ಹೆಚ್ಚು ಅಧಿಕ ಮತಗಳಿಂದ ಗೆಲುವು ಸಾಧಿಸಿ ತೋರಿಸಿದ್ದಾರೆ. ಮೋದಿ ಅವರು ಮಾಡಿದ ಸಾಧನೆ ಹಾಗೂ ದೇಶ ಅಭಿವೃದ್ಧಿಗಾಗಿ ಶ್ರಮಿಸಿದ್ದ ಅವರ ಕೈ ಬಲಪಡಿಸಲು ಹಾಗೂ ಜಿಲ್ಲೆಯ ಅಭಿವೃದ್ಧಿಗಾಗಿ ಕುಮಾರಣ್ಣ ಅಧಿಕ ಮತ ಗೆಲುವು ಸಾಧಿಸಿರುವುದು ನಮಗೆಲ್ಲ ಸಂತೋಷ ತಂದಿದೆ. ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಿದಂತಾಗಿದೆ ಎಂದರು.
ಈ ವೇಳೆ ಮುಖಂಡರಾದ ಎಸ್.ಇ.ಪುಟ್ಟಸ್ವಾಮಿ, ಮೆಡಿಕಲ್ ಯತೇಂದ್ರ, ಎಂ.ಡಿ.ಶಿವಕುಮಾರ್, ನಾಗೇಂದ್ರ, ನಾಗೇಶ್, ಹೊನ್ನೇಗೌಡ, ಚಿಕ್ಕರಾಜು,ಮಂಜು, ಕಾಂತರಾಜು ಸೇರಿದಂತೆ ಇತರರು ಇದ್ದರು.;Resize=(128,128))
;Resize=(128,128))